ಉದ್ಘಾಟನೆ ವೇಳೆ ರಾಮ ಮಂದಿರದ ಮೇಲೆ ಹದ್ದು ಹಾರಾಟ!
– ಪೂಜೆ ವೇಳೆ ಆಂಜನೇಯ ಪ್ರತ್ಯಕ್ಷ
– ರಾಮ ನಾಮ ಸ್ಮರಣೆ ವೇಳೆ ಬಂದ ಹನುಮ!
NAMMUR EXPRESS NEWS
ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭವು ದೈವಿಕ ದೃಶ್ಯಕ್ಕೆ ಸಾಕ್ಷಿಯಾಯಿತು, ಈ ಕಾರ್ಯಕ್ರಮ ನಡೆಯುತ್ತಿರುವಾಗ ಹದ್ದು ದೇವಾಲಯದ ಮೇಲೆ ಸುತ್ತುತ್ತಿರುವುದು ಕಂಡುಬಂದಿದೆ. ಸಮಾರಂಭದಲ್ಲಿ ಹದ್ದಿನ ಉಪಸ್ಥಿತಿಯನ್ನು ದೈವಿಕ ಆಶೀರ್ವಾದದ ಸಂಕೇತವಾಗಿ ಮತ್ತು ಭಗವಾನ್ ರಾಮನ ಉಪಸ್ಥಿತಿಯ ಸಂಕೇತವಾಗಿ ನೋಡಲಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಹದ್ದುಗಳು ವಿಷ್ಣುವಿನ ವಾಹನಗಳು ಎಂದು ನಂಬಲಾಗಿದೆ, ಅದರಲ್ಲಿ ರಾಮನ ಅವತಾರವೆಂದು ಪರಿಗಣಿಸಲಾಗಿದೆ.
ಹದ್ದಿನ ದರ್ಶನವು ರಾಮಲಲ್ಲಾ ಪ್ರತಿಷ್ಠಾಪನೆಗೆ ನಿಗೂಢ ಸ್ಪರ್ಶವನ್ನು ನೀಡಿದೆ ಮತ್ತು ಸಮಾರಂಭದಲ್ಲಿ ಹಾಜರಿದ್ದ ಭಕ್ತರಲ್ಲಿ ವಿಸ್ಮಯ ಮತ್ತು ಆಶ್ಚರ್ಯದ ಭಾವನೆಯನ್ನು ಸೃಷ್ಟಿಸಿದೆ. ವಾತಾವರಣವು ಭಕ್ತಿ ಮತ್ತು ಆಧ್ಯಾತ್ಮಿಕತೆಯ ಪ್ರಜ್ಞೆಯಿಂದ ತುಂಬಿರುವುದರಿಂದ ಇದು ಅದೃಷ್ಟದ ಸಂಕೇತ ಮತ್ತು ದೇವಾಲಯದ ಭವಿಷ್ಯಕ್ಕೆ ಸಕಾರಾತ್ಮಕ ಶಕುನ ಎಂದು ಅನೇಕರು ನಂಬುತ್ತಾರೆ. ಮಾಲಿನಿ ಪಾರ್ಥಸಾರಥಿ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್ಸಾರ್ಮ್ ಎಕ್ಸಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಶಂಖದ ದೈವಿಕ ಶಬ್ದವು ಮೊಳಗಿದಾಗ ಹದ್ದು ದೇವಾಲಯದ ಸುತ್ತಲೂ ಸುತ್ತುತ್ತಿರುವುದನ್ನು ತೋರಿಸುತ್ತದೆ.
ಗದಗ: ಎಲ್ಲಿ ರಾಮನೋ ಅಲ್ಲಿ ಹನುಮನು ಅನ್ನುವ ಮಾತನ್ನು ನಾವು ಕೇಳಿದ್ದೇವೆ. ಆ ಮಾತು ರಾಮ ಮಂದಿರ ಲೋಕಾರ್ಪಣೆಯ ಸಂದರ್ಭದಲ್ಲಿ ಕೆಲವು ಕಡೆ ನಿಜವಾಗಿದೆ. ಗದಗ ಜಿಲ್ಲೆಯ ಎರಡು ಕಡೆ ರಾಮನ ಪೂಜೆ, ಭಜನೆ ನಡೆಯುತ್ತಿದ್ದ ಸ್ಥಳಕ್ಕೆ ಆಂಜನೇಯ ಆಗಮಿಸಿ, ಪೂಜೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡದ್ದು ಕಂಡುಬಂತು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾನ ಹಿನ್ನೆಲೆಯಲ್ಲಿ ಮುಳಗುಂದ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಪೂಜೆ ಏರ್ಪಡಿಸಲಾಗಿತ್ತು. ಅಲ್ಲಿ ಶ್ರೀರಾಮ ದೇವರ ಪೂಜೆ ವೇಳೆ ವಾನರ ರೂಪಿ ಹನುಮ ಪ್ರತ್ಯಕ್ಷನಾಗಿದ್ದಾನೆ! ಗರ್ಭಗುಡಿ ಹೊಸ್ತಿಲಲ್ಲಿ ಕುಳಿತು ಶ್ರೀರಾಮನ ದರ್ಶನ ಪಡೆದ ಹನುಮ ಅಚ್ಚರಿ ಮೂಡಿಸಿದ್ದಾನೆ. ರಾಮನ ದರ್ಶನ ಮಾಡಿ ಅಲ್ಲಿಗೆ ಬಂದ ಭಕ್ತರ ಜತೆಗೆ ಪ್ರೀತಿಯಿಂದ ಮೈದಡವಿಸಿಕೊಂಡು ತೆರಳಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೂಡಾ ಪೂಜೆಯ ವೇಳೆ ಹನುಮ ಆಗಮಿಸಿದ್ದಾನೆ. ಶ್ರೀ ರಾಮನ ಆರಾಧನೆ ಕಾರ್ಯಕ್ರಮಕ್ಕೆ ರಾಮನ ಬಂಟ ಹನುಮಂತ ಬಂದಿದ್ದು ಎಲ್ಲರಿಗೂ ಖುಷಿ ನೀಡಿತು. ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮ ಹಾಗೂ ಮಾರುತಿ ದೇವರ ಪೂಜೆ, ಹವನ ನಡೆಯುತ್ತಿತ್ತು. ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಯಜ್ಞದ ಸಮಯದಲ್ಲಿ ಕಾಣಿಸಿಕೊಂಡ ಹನುಮ ತುಂಬ ಹೊತ್ತು ಯಜ್ಞ ಕುಂಡದ ಬಳಿ ಕುಳಿತು ಯಜ್ಞವನ್ನು ವೀಕ್ಷಿಸಿದ್ದಾನೆ. ಹೋಮ ಮುಗಿಯುವವರೆಗೂ ಹನುಮ ಅಲ್ಲಿಯೇ ಇದ್ದು ಜನರಲ್ಲಿ ಅಚ್ಚರಿ ಮೂಡಿಸಿತು. ಹೋಮ ಕುಂಡದ ಪಕ್ಕದಲ್ಲಿ ಕುಳಿತ ಹನುಮ ಅಲ್ಲಿದ್ದ ದೀಪವನ್ನು ಹಿಡಿದುಕೊಂಡಿತು. ಅದನ್ನು ತೆಗೆದು ಮತ್ತೊಂದು ದಿಕ್ಕಿನಲ್ಲಿ ಇಟ್ಟರೆ ಅಲ್ಲಿಗೂ ಹೋಗಿ ಕುಳಿತುಕೊಂಡಿತು. ಕೊನೆಗೆ ಹೋಮ ಮುಗಿಯುತ್ತಿದ್ದಂತೆಯೇ ಅಲ್ಲಿಂದ ಹೊರಟಿತು.