ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ಕಾರು ಕಾರು.!
– ರಾತ್ರಿ ಆಗುತ್ತಿದ್ದಂತೆ ಬೆಂಗಳೂರು ಬಸ್ಸುಗಳಿಗೆ ಅಡ್ಡಿ
– ಟ್ರಾಫಿಕ್ ಪೊಲೀಸ್, ಪ. ಪಂ ನಿಯಮ ಮಾಡದಿದ್ದರೆ ತೊಂದರೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಟ್ರಾಫಿಕ್ ಸಮಸ್ಯೆಯು ಜೋರಾಗಿದೆ. ವಾಹನಗಳ ಸಂಖ್ಯೆಯು ಹೆಚ್ಚಾಗಿದೆ. ಈ ನಡುವೆ ಪ್ರತಿದಿನ ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ಕಾರು,ಬೈಕ್ ಎಲ್ಲೆಂದರಲ್ಲಿ ನಿಲ್ಲಿಸುವವರು ಮತ್ತು ಬಸ್ ಸಿಬ್ಬಂದಿಗಳ ನಡುವೆ ಜಟಾಪಟಿ ಇದೀಗ ನಡೆಯುತ್ತಿದೆ. ಕಾರಣ ಇಡೀ ಬಸ್ ನಿಲ್ದಾಣದ ಒಳಗೆ ಕಾರುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಪಾರ್ಕಿಂಗ್ ಮಾಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪಾರ್ಕಿಂಗ್ ಜಾಗವನ್ನು ಬಸ್ ನಿಲ್ದಾಣದಲ್ಲಿ ಗುರುತಿಸಬೇಕೆಂಬ ಆಗ್ರಹ ಇದೀಗ ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್ ಸಿಬ್ಬಂದಿಗಳಿಂದ ವ್ಯಕ್ತವಾಗಿದೆ. ಕಾರಣವೇನೆಂದರೆ ತೀರ್ಥಹಳ್ಳಿಯಿಂದ ಶಿವಮೊಗ್ಗ ಹಾಗೂ ಬೆಂಗಳೂರಿಗೆ ಪ್ರತಿದಿನ 20ಕ್ಕೂ ಹೆಚ್ಚು ಬಸ್ಸುಗಳು ತೀರ್ಥಹಳ್ಳಿಯಿಂದ ಪ್ರಯಾಣ ಬೆಳೆಸುತ್ತದೆ. ಕೆಲವು ರಜೆ ದಿನಗಳಲ್ಲಿ ಸಾವಿರಾರು ಪ್ರಯಾಣಿಕರು ಇಲ್ಲಿಂದ ಬೆಂಗಳೂರಿಗೆ ತೆರಳುತ್ತಾರೆ.
ಈ ಸಂದರ್ಭದಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್ ಗಳನ್ನು ಶಿವಮೊಗ್ಗ ಹಾಗೂ ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ತಮ್ಮ ಪ್ರಯಾಣಿಕರನ್ನು ಬಿಡಲು ಬರುವ ಕಾರುಗಳು ಹಾಗೂ ಬೈಕುಗಳನ್ನು ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಖಾಸಗಿ ಬಸ್ ಗಳಿಗೆ ನಿಲ್ಲಿಸಲು ಹಾಗೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಪೊಲೀಸ್ ಇಲಾಖೆ ಹಾಗೂ ಸ್ಥಳೀಯರಿಗೆ ಖಾಸಗಿ ಬಸ್ ಸಿಬ್ಬಂದಿ ಹಾಗೂ ಇಲ್ಲಿನ ಏಜೆಂಟ್ ಗಳು ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಪ್ರಕಟಣೆಯನ್ನು ಕೊಡಬೇಕು. ಜೊತೆಗೆ ನಿಗದಿಪಡಿಸಿದ ಜಾಗದಲ್ಲಿ ವಾಹನ ಪಾರ್ಕಿಂಗ್ ಮಾಡಬೇಡಿ ಎಂಬ ಮನವಿ ವ್ಯಕ್ತವಾಗಿದೆ. ಇದರಿಂದಾಗಿ ಪದೇ ಪದೇ ಗಲಾಟೆಗಳು ನಡೆಯುತ್ತಿವೆ. ಹೀಗಾಗಿ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಖಾಸಗಿ ಬಸ್ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.