Categories
ತೀರ್ಥಹಳ್ಳಿ

ಯಕ್ಷ ದ್ರುವ ಫೌಂಡೇಶನ್ ಸೇವೆಗೆ ನಾಗತೀರ್ಥ ಚಿಟ್ಸ್ ದೇಣಿಗೆ

ಯಕ್ಷ ದ್ರುವ ಫೌಂಡೇಶನ್ ಸೇವೆಗೆ ನಾಗತೀರ್ಥ ಚಿಟ್ಸ್ ದೇಣಿಗೆ
– ತೀರ್ಥಹಳ್ಳಿ ಪ್ರಧಾನ ಕಚೇರಿಯಲ್ಲಿ ಪಟ್ಲ ಅವರಿಗೆ ಗೌರವ
– ಚಿಟ್ಸ್ ಅಧ್ಯಕ್ಷರಾದ ಕಿಮ್ಮನೆ ಆದಿತ್ಯ ಸೇರಿ ಎಲ್ಲಾ ನಿರ್ದೇಶಕ ಸಾಥ್

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಹೆಸರಾಂತ ಚಿಟ್ಸ್ ಕಂಪನಿ ನಾಗತೀರ್ಥ ಚಿಟ್ಸ್ ತೀರ್ಥಹಳ್ಳಿ ಪ್ರಧಾನ ಕಚೇರಿಯಲ್ಲಿ ತೀರ್ಥಹಳ್ಳಿಯ ಗಣ್ಯರ ಸಮ್ಮುಖದಲ್ಲಿ ಯಕ್ಷ ದ್ರುವ ಫೌಂಡೇಶನ್ ಸಥ್ಕಾರ್ಯಗಳಿಗೆ ಸಣ್ಣ ದೇಣಿಗೆಯನ್ನು ಚಿಟ್ಸ್ ಅಧ್ಯಕ್ಷರು ಕಿಮ್ಮನೆ ಆದಿತ್ಯ ಅವರಿಂದ ಅರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಾಗತೀರ್ಥ ಚಿಟ್ಸ್ ಸಂಸ್ಥೆಯ ಪಾಲುದಾರರಾದ ಈಚಲಬೈಲ್ ಶಶಿಧರ್, ಬಿಕ್ಕೊಳ್ಳಿ ಸತೀಶ್, ಹೆದ್ದೂರ್ ಚೇತನ್, ಸತೀಶ್ ರೈ ಮಂಗಳೂರು ಹಾಗೂ ಸಂಸ್ಥೆಯ ಲೆಕ್ಕಾಧಿಕಾರಿ ಶಿಲ್ಪಾ ಸಹಿತ ಎಲ್ಲಾ ಸಿಬಂದಿ ವರ್ಗದವರು ಹಾಜರಿದ್ದರು. ಈ ಸಮಾರಂಭದ ವಿಶೇಷ ಅತಿಥಿ ಶ್ರೀಪಟ್ಲ ಸತೀಶ್ ಶೆಟ್ಟಿ ಅವರೊಂದಿಗೆ ಮುಖ್ಯ ಅತಿಥಿಗಳಾಗಿ ನಾಗತೀರ್ಥ ಚಿಟ್ಸ್ ಹಿತೈಷಿಗಳಾದ ಹಿರಿಯರಾದ ನಾಗರಾಜ್ ಶೆಟ್ಟಿ, ಲೆಕ್ಕ ಪರಿ ಶೋಧಕರಾದ ಮಧುಸೂದನ್ ಸಿ ಎ, ಕಟ್ಟಡ ಮಾಲಕರಾದ ಕಟಪಾಡಿ ನರೇಂದ್ರ ಕಾಮತ್, ಗ್ರಾಹಕರಾದ ಶ್ರೀಕಾಂತ್ ಭಟ್, ಶರಾವತಿ ಸಂಸ್ಥೆಯ ಅಧ್ಯಕ್ಷರಾದ ಅಜಿತ್, ಪತ್ರ ಕರ್ತರ ಸಂಘ ಅಧ್ಯಕ್ಷ ರಾದ ಮೋಹನ್ ಶೆಟ್ಟಿ ಮುನ್ನೂರು, ಕರ್ನಾಟಕ ಬ್ಯಾಂಕ್ ತೀರ್ಥಹಳ್ಳಿ ಇದರ ವ್ಯವಸ್ಥಾಪಕ ರಾಘವೇಂದ್ರ ಕಾಮತ್, ಪ್ರಮುಖರಾದ ಹರೀಶ್ ಬೊಗರುಕೊಪ್ಪ, ಶ್ರೀನಿವಾಸ್ ಕೊರಕೋಟೆ, ಶಿಶಿರ್ ಶೆಟ್ಟಿ ತೀರ್ಥಹಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.