-ವಾಟ್ಸಾಪ್ ಪ್ರಿಯರೇ ಇಲ್ಲಿ ಗಮನಿಸಿ
ನವದೆಹಲಿ, ಜ.6 -ಜಾಗತಿಕವಾಗಿ ಮುಂಚೂಣಿಯಲ್ಲಿರುವ ವಾಟ್ಸ್ಅಪ್ ಮೆಸೆಜಿಂಗ್ ಅಪ್ಲಿಕೇಶನ್ ಫೆ.8ರಿಂದ ಸ್ಥಗಿತಗೊಳ್ಳಲಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿದ್ದು, ಇದಕ್ಕೆ ವಾಟ್ಸ್ಅಪ್ ಸಂಸ್ಥೆ ಸ್ಪಷ್ಟನೆ ನೀಡಿದೆ. ನಿನ್ನೆ ಮತ್ತು ಇಂದು ಬಹಳಷ್ಟು ವಾಟ್ಸ್ಅಪ್ ಬಳಕೆದಾರರಿಗೆ ಅಪ್ಡೇಟ್ ಮೆಸೆಜ್ಗಳು ರವಾನೆಯಾಗಿವೆ. ಆ ನೋಟಿಫಿಕೇಶನನ್ನು ಅಂಗೀಕರಿಸಿ ಅಗತ್ಯವಾದ ಪ್ರಮುಖ ಮಾಹಿತಿಯನ್ನು ಒದಗಿಸದೇ ಇದ್ದರೆ 2021ರ ಫೆಬ್ರವರಿ 8ರಿಂದ ನಿಮ್ಮ ಮೊಬೈಲ್ನಲ್ಲಿ ವಾಟ್ಸ್ಅಪ್ ನಿಷ್ಕ್ರಿಯೆಗೊಳ್ಳಲಿದೆ.
ಹೊಸ ನೀತಿಯ ಪ್ರಕಾರ ವಾಟ್ಸ್ಅಪ್ ಬಳಕೆದಾರರ ದತ್ತಾಂಶವನ್ನು ಸಂಗ್ರಹಿಸುತ್ತಿದೆ. ಯಾವ ಬಳಕೆದಾರರು ನೋಟಿಫಿಕೇಶನನ್ನು ಸ್ವೀಕರಿಸಿ ವಾಟ್ಸ್ಅಪ್ನ್ನು ಅಪ್ಡೇಟ್ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಸೇವೆ ಸ್ಥಗಿತಗೊಳಿಸುವುದಾಗಿ ವಾಟ್ಸ್ಅಪ್ ಸಂಸ್ಥೆ ಹೇಳಿದ್ದು,
ಜ.4ರಂದು ದೇಶಾದ್ಯಂತ ನೋಟಿಫಿಕೇಶನ್ ರವಾನಿಸಲಾಗಿದೆ. ನಿರ್ವಹಣೆ, ಸ್ವೀಕಾರ, ಉತ್ತಮಗೊಳಿಸುವಿಕೆ, ಕಸ್ಟಮೈಸ್, ಬೆಂಬಲ ಹಾಗೂ ಮಾರುಕಟ್ಟೆ ಸೇರಿದಂತೆ ವಾಟ್ಸ್ಅಪ್ ಹಲವಾರು ಸೇವೆಗಳನ್ನು ಒದಗಿಸುತ್ತಿದೆ. ಈ ಸೇವೆಗಳನ್ನು ಮುಂದುವರೆಸಬೇಕಾದರೆ ಅಪ್ಲಿಕೇಶನ್ ಅಪ್ಡೇಟ್ ಮಾಡಿಕೊಳ್ಳುವುದು ಅನಿವಾರ್ಯ.
ಬಳಕೆದಾರರ ಮೊಬೈಲ್ನಲ್ಲಿ ಸಂದೇಶ ಸೇವ್ ಆಗಿರುತ್ತದೆ. ರವಾನೆಯಾಗದೆ ಬಾಕಿ ಉಳಿದ ಸಂದೇಶಗಳನ್ನು ಎನ್ಸ್ಕ್ರಿಪ್ಟ್ ಮಾದರಿಯಲ್ಲಿ 30 ದಿನಗಳವರೆಗೆ ಸರ್ವರ್ನಲ್ಲಿ ಕಾಯ್ದಿರಿಸಲಾಗುತ್ತದೆ. ಅದರ ನಂತರವೂ ಮೆಸೆಜ್ ಡೆಲವರಿಯಾಗದೇ ಇದ್ದರೆ ಅದನ್ನು ಡಿಲಿಟ್ ಮಾಡುವುದಾಗಿ ಸಂಸ್ಥೆ ತಿಳಿಸಿದೆ.
ವಾಟ್ಸ್ಅಪ್ ಸಂಸ್ಥೆ ಕೇವಲ ಬಳಕೆದಾರರ ಫೋಟೊ, ಬಳಕೆದಾರರ ಮೊಬೈಲ್ ನಂಬರ್, ಪ್ರೊಫೈಲ್ ನೇಮ್, ಅವರ ಸ್ಟೇಟಸ್, ಲೊಕೇಶನ್ಗಳ ಮೇಲೆ ಗಮನ ಇರಿಸಿರುತ್ತದೆ. ನಿಯಮಾವಳಿಗಳ ಪ್ರಕಾರ ಇದು ಪರಿಶೀಲಿಸಬೇಕಾದ ಅಂಶ ಎಂದು ಸಂಸ್ಥೆ ಹೇಳಿಕೊಂಡಿದೆ.
ಬಳಕೆದಾರರ ಅನುಮತಿ ಪಡೆದು ಅವರ ಕಾಂಟ್ಯಾಕ್ಟ್ ಲಿಸ್ಟ್ನ್ನು ವಾಟ್ಸಅಪ್ ಪರಿಶೀಲಿಸಲಿದೆ. ಇನ್ನು ಮುಂದೆ ಪೇಮೆಂಟ್ ಆಯಕ್ಷನ್ ಕೂಡ ವಾಟ್ಸ್ಅಪ್ನಲ್ಲಿ ಲಭ್ಯವಿರಲಿದ್ದು, ಅದಕ್ಕೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.