-ಕಂಪ್ಯೂಟರ್ ನ ನಿರಂತರ ಬಳಕೆ ಹೆಚ್ಚು ಅಪಾಯ
ಇಲ್ಲಿದೆ ಸಂಪೂರ್ಣ ಮಾಹಿತಿ
ಇಂದಿನ ದಿನಗಳಲ್ಲಿ ಕಂಪ್ಯೂಟರ್ ಎನ್ನುವುದು ನಮ್ಮೆಲ್ಲರ ಜೀವನದ ಪ್ರಮುಖ ಅಂಗವಾಗಿದೆ ಎಂದು ಹೇಳಬಹುದು. ಯಾವುದೇ ಕಚೇರಿ, ಮನೆ, ಶಾಲೆ ಎಲ್ಲಿಗೂ ಹೋದರೂ ಒಂದು ಕಂಪ್ಯೂಟರ್ ಕಂಡುಬರುವುದು. ಕೆಲವರಿಗೆ ಪ್ರತಿನಿತ್ಯವೂ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಕೆಲಸ ಮಾಡಬೇಕಾಗುತ್ತದೆ. ಕಂಪ್ಯೂಟರ್ ನಿಂದ ದಿನವಿಡಿ ಬಳಕೆ ಮಾಡುವ ಪರಿಣಾಮವಾಗಿ ಅದರಿಂದ ಹಲವಾರು ಸಮಸ್ಯೆಗಳು ಕಾಡುವುದು.
ಪ್ರತಿದಿನವೂ ಕಂಪ್ಯೂಟರ್ ಬಳಕೆ ಮಾಡುವವರ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಅದೇ ರೀತಿಯಾಗಿ ಹಲವಾರು ಸಮಸ್ಯೆಗಳು ಕೂಡ. ದಿನವಿಡಿ ಅಥವಾ ದಿನದಲ್ಲಿ ನಾಲ್ಕು ಗಂಟೆಗಿಂತ ಹೆಚ್ಚು ಕಾಲ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುತ್ತಲಿದ್ದರೆ, ಆಗ ನೀವು ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಿಸಲೇಬೇಕು.
ಮಾಂಸಖಂಡಗಳಲ್ಲಿ ಸಮಸ್ಯೆಗಳು:-
ಕಂಪ್ಯೂಟರ್ ನ್ನು ನಿರಂತರವಾಗಿ ಬಳಕೆ ಮಾಡುವವರಲ್ಲಿ ಹಲವಾರು ಸಮಸ್ಯೆಗಳು ಕಂಡುಬರುವುದು. ಪ್ರಮುಖವಾಗಿ ಸ್ನಾಯುಗಳಲ್ಲಿ ನೋವು ಅಥವಾ ನಿಶ್ಯಕ್ತಿಯು ಕಾಡುವುದು ಮಾತ್ರವಲ್ಲದೆ, ಬೆನ್ನು ನೋವು, ಎದೆ ನೋವು, ನೋವು, ಕೈ, ಭುಜ ಮತ್ತು ಕಾಲುಗಳಲ್ಲಿ ಸ್ಪರ್ಶವಿಲ್ಲದೆ ಇರುವುದು ಸಮಸ್ಯೆಯಾಗಿದೆ.
ಪ್ರಾಯೋಗಿಕ ಸಲಹೆಗಳು
• ಕುರ್ಚಿ ಮತ್ತು ಟೇಬಲ್ ನ್ನು ಕಣ್ಣು ಅಥವಾ ಅದಕ್ಕಿಂತ ಕೆಳಗಿನ ಮಟ್ಟಕ್ಕೆ ಹೊಂದಿಕೆ ಆಗುವಂತೆ ಇಡಬೇಕು. ಬೆನ್ನು ನೇರವಾಗಿ ಕುಳಿತುಕೊಳ್ಳಿ ಮತ್ತು ಪಾದಗಳು ನೆಲದ ಮೇಲೆ ವಿಶ್ರಾಂತಿಯಲ್ಲಿರಲಿ. ಮೊಣಕೈಗಳು ಬದಿಯಲ್ಲಿ ಇರಲಿ.
• ಕೆಲಸದಿಂದ ಸ್ವಲ್ಪ ವಿಶ್ರಾಂತಿ ಪಡೆದು, ಮೈ, ಕೈ ಹಾಗೂ ಕಾಲುಗಳಿಗೆ ವ್ಯಾಯಾಮ ನೀಡಿ ಮತ್ತು ಸ್ವಲ್ಪ ನಡೆಯಿರಿ.
ಒತ್ತಡದಿಂದ ಗಾಯಾಳು
ಭುಜ, ಕುತ್ತಿಗೆ ಅಥವಾ ಭುಜದಿಂದ ಕೈಗಳಲ್ಲಿ ನೋವು ಕಾಣಿಸಿಕೊಂಡರೆ ಆಗ ಇದನ್ನು ಒತ್ತಡದ ನೋವು ಎಂದು ಕರೆಯಲಾಗುತ್ತದೆ. ಯಾವುದೇ ಸ್ನಾಯುಗಳನ್ನು ತುಂಬಾ ತಿರುಚಿ ಬಳಸಿಕೊಂಡರೆ, ಆಗ ಅದರಿಂದ ಬಿಗಿತ, ನೋವು ಮತ್ತು ಊತವು ಕಂಡುಬರುವುದು. ಮೌಸ್ ಬಳಕೆ ವೇಳೆ ಬೆರಳುಗಳನ್ನು ತಿರುಚುವುದು ಅಥವಾ ಬೆರಳುಗಳು ಹಾಗೂ ಮೊಣಕೈಯ ಮೇಲೆ ಒತ್ತಡ ಬೀಳುವ ಪರಿಣಾಮವಾಗಿ ನೋವು ಕಂಡುಬರುವುದು.
ಪ್ರಾಯೋಗಿಕ ಸಲಹೆಗಳು
• ಕೀಬೋರ್ಡ್ ಮತ್ತು ಮೌಸ್ ನ್ನು ಸರಿಯಾಗಿ ಹೊಂದಾಣಿಕೆ ಮಾಡಿ. ಮೌಸ್ ನ್ನು ತಿರುಗಿಸುವ ವೇಳೆ ಸಂಪೂರ್ಣವಾಗಿ ಕೈಯನ್ನು ತಿರುಗಿಸಿ. ಕೇವಲ ಮೊಣಕೈಯನ್ನು ಒಂದು ಬದಿಯಲ್ಲಿ ಇಟ್ಟುಕೊಂಡು ತಿರುಗಿಸಬೇಡಿ. ಟೈಪಿಂಗ್ ಮಾಡುವ ವೇಳೆ ಮೊಣಕೈಯನ್ನು ಒಂದೇ ಕಡೆಯಲ್ಲಿ ಇಡಬೇಡಿ.
• ಮೌಸ್ ಅಥವಾ ಕೀಬೋರ್ಡ್ ಬಳಕೆ ಮಾಡದೆ ಇರುವ ವೇಳೆ ಕೈಗಳಿಗೆ ಆರಾಮ ನೀಡಿ ಮತ್ತು ಸ್ವಲ್ಪ ಎಳೆಯಿರಿ.
ಕಣ್ಣಿನ ಸಮಸ್ಯೆ
ಕಂಪ್ಯೂಟರ್ ನ ಪ್ರಖರ ಬೆಳಕು ಮತ್ತು ಕೆಟ್ಟ ಪ್ರಜ್ವಲಿಕೆಯು ಕಣ್ಣಿನ ಮೇಲೆ ಒತ್ತಡ ಬೀಳುವಂತೆ ಮಾಡುವುದು. ಕಣ್ಣು ಮಿಟುಕಿಸದೆ ಹಾಗೆ ಕಂಪ್ಯೂಟರ್ ಸ್ಕ್ರೀನ್ ನೋಡುತ್ತಲಿದ್ದರೆ ಅದರಿಂದ ಕಣ್ಣುಗಳು ಒಣಗುವುದು. ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎನ್ನುವುದು ಕೂಡ ಕಣ್ಣುಗಳನ್ನು ಕಾಡುವಂತಹ ಮತ್ತೊಂದು ಸಮಸ್ಯೆ.
ಕೆಲವು ಸಲಹೆಗಳು
ಕಣ್ಣುಗಳ ಮೇಲೆ ಒತ್ತಡ ಬೀಳದ ರೀತಿಯಲ್ಲಿ ಕಂಪ್ಯೂಟರ್ ನ ಕಾಂಟ್ರಾಸ್ಟ್ ಮತ್ತು ಬ್ರೈಟ್ನೆಸ್ ನ್ನು ಹೊಂದಾಣಿಕೆ ಮಾಡಿಕೊಳ್ಳಿ. ಪ್ರಜ್ವಲಿಕೆ ತಪ್ಪಿಸಲು ಟಿಲ್ಟ್ ಬಳಸಿ.
ಸ್ಕ್ರೀನ್ ನಿಂದ ಸರಿಯಾದ ಅಂತರವನ್ನು ಕಾಯ್ದುಕೊಳ್ಳಿ. ಪದೇ ಪದೇ ಕಣ್ಣುಗಳನ್ನು ಕಂಪ್ಯೂಟರ್ ಸ್ಕ್ರೀನ್ ನಿಂದ ದೂರ ಮಾಡಿ. ಕಣ್ಣುಗಳನ್ನು ಮಿಟುಕಿಸಲು ಮರೆಯಬೇಡಿ.
ತಲೆನೋವು
ಇದು ಕಂಪ್ಯೂಟರ್ ಬಳಕೆ ಮಾಡುವಂತಹ ಹೆಚ್ಚಿನ ಜನರನ್ನು ಕಾಡುವುದು. ಕುತ್ತಿಗೆ ಹಾಗೂ ಭುಜದ ಭಾಗದಲ್ಲಿ ಬೀಳುವಂತಹ ಒತ್ತಡದಿಂದಾಗಿ ತಲೆನೋವು ಕಂಡುಬರುವುದು. ದೀರ್ಘಕಾಲ ಬಳಕೆ ಮಾಡುವ ಪರಿಣಾಮ ಕಣ್ಣಿನ ಶಕ್ತಿಯ ಮೇಲೆ ಕೂಡ ತೊಂದರೆ ಆಗುವುದು. ಇದರ ಪರಿಣಾಮವಾಗಿ ತಲೆನೋವು ಕಂಡುಬರಬಹುದು.
ಕೆಲವು ಸಲಹೆಗಳು
• ಕಂಪ್ಯೂಟರ್ ಬಳಕೆ ಮಾಡುವ ಪರಿಣಾಮವಾಗಿ ತಲೆನೋವು ಕಂಡುಬರುತ್ತಲಿದ್ದರೆ ಆಗ ನೀವು ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ.
• ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ವೇಳೆ ಕುತ್ತಿಗೆ ನೇರವಾಗಿಡಿ. ನಿರಂತರವಾಗಿ ಕೆಳಗೆ ನೋವುದುಉ ಅಥವಾ ಕುತ್ತಿಗೆ ಮೇಲೆ ಒತ್ತಡ ಹಾಕಿದರೆ ಅದರಿಂದ ನೋವು ಕಂಡುಬರುವುದು. ಮಧ್ಯದಲ್ಲಿ ವಿಶ್ರಾಂತಿ ಪಡೆಯಿರಿ ಮತ್ತು ಒತ್ತಡ ಕಡಿಮೆ ಮಾಡಲು ಕುತ್ತಿಗೆಯನ್ನು ಹಾಗೆ ವೃತ್ತಾಕಾರದಲ್ಲಿ ತಿರುಗಿಸಿ.