ಸಂಸದ ಕ್ಯಾ. ಬ್ರಿಜೇಶ್ ಚೌಟ ಕಾರ್ಯಾಲಯ ಉದ್ಘಾಟನೆ
– ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ 2ನೇ ಮಹಡಿಯಲ್ಲಿ ಉದ್ಘಾಟನೆ
– ಸರ್ವರನ್ನು ಸ್ವಾಗತಿಸಿದ ಕ್ರಿಯಾಶೀಲ ಎಂಪಿ ಚೌಟ
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೂತನ ಕಾರ್ಯಾಲಯವು ಜು.12 ಅಂದರೆ ಶುಕ್ರವಾರದಂದು ಬೆಳಗ್ಗೆ 09:30ಕ್ಕೆ ಮಂಗಳೂರು ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿಯ 2ನೇ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ವಿಕಸಿತ ಭಾರತಕ್ಕಾಗಿ ವಿಕಸಿತ ದಕ್ಷಿಣ ಕನ್ನಡ ನಿರ್ಮಾಣದ ಸಂಕಲ್ಪಕ್ಕೆ ಈ ಕಾರ್ಯಾಲಯವು ಪ್ರೇರಣಾಧಾಮವಾಗಲಿದೆ. ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೂ ಈ ಕಛೇರಿಯು ಸಹಕಾರಿಯಾಗಲಿದೆ. ಕ್ಷೇತ್ರದ ಜನರ ಮತ್ತು ಸಂಸದರ ನಡುವೆ ಕೊಂಡಿಯಾಗಿ ಕಚೇರಿಯು ಕಾರ್ಯನಿರ್ವಹಿಸಲಿದ್ದು ಜಿಲ್ಲೆಯ ಜನರು ಕಚೇರಿಯನ್ನು ಸದುಪಯೋಗಪಡಿಸುವಂತೆ ಹಾಗೂ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತಮ್ಮ ಸಹಕಾರವನ್ನು ನೀಡುವಂತೆ ಪ್ರಕಟಣೆಯ ಮೂಲಕ ಸಂಸದರು ವಿನಂತಿಸಿದ್ದಾರೆ.
ಕ್ರಿಯಾಶೀಲ ಎಂಪಿ ಚೌಟ!
ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಿಂದ ಮೊದಲಬಾರಿಗೆ ಆಯ್ಕೆಯಾದ ಬ್ರಿಜೇಶ್ ಚೌಟ ಈಗಾಗಲೇ ದೆಹಲಿ ಮಟ್ಟದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ.