Categories
ರಾಜ್ಯ

ಉಪೇಂದ್ರ ನಿರ್ದೇಶನದ ‘ಯುಐ’ ಡಿ.20ಕ್ಕೆ ಬಿಡುಗಡೆ

ಉಪೇಂದ್ರ ನಿರ್ದೇಶನದ ‘ಯುಐ’ ಡಿ.20ಕ್ಕೆ ಬಿಡುಗಡೆ
– ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಯಲ್ಲಿ ಬಿಡುಗಡೆ
– ಸಿನಿಮಾ ನೋಡಲು ಪ್ರೇಕ್ಷಕ ಕಾತುರ

NAMMUR EXPRESS NEWS
ಮಂಗಳೂರು: ಬಹುನಿರೀಕ್ಷಿತ ‘ಯುವ’ ಚಲನಚಿತ್ರ ಡಿ.20ರಂದು ಜಗತ್ತಿನಾದ್ಯಂತ ತೆರೆ ಕಾಣಲಿದೆ. ಈಗಾಗಲೇ ಟ್ರೈಲರ್ ಮೂಲಕ ಟ್ರೆಂಡ್ ಆಗಿರುವ ಉಪೇಂದ್ರ ನಿರ್ದೇಶನದ ಈ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.
‘ಯುಐ’ ಚಿತ್ರ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳ್ಳುತ್ತಿದೆ. ‘ವಾರ್ನರ್’ ಹೆಸರಿನಲ್ಲಿ ಚಿತ್ರದ ಟೀಸ‌ರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ ಚಿತ್ರದ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ ಚಿತ್ರದ ಟೀಸರ್ ಅಥವಾ ಟ್ರೈಲರ್ ರಿಲೀಸ್ ಮಾಡಲಾಗುತ್ತದೆ. ‘ಯುಐ’ ಚಿತ್ರಕ್ಕೆ ‘ವಾರ್ನರ್’ ವಿಡಿಯೋ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಇಡೀ ವಿಶ್ವವನ್ನೇ ಕಾಡಿರುವ ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ. ವಿಶ್ವದ ನಾಯಕ ನಿನಗೆ ಹಾಗೂ ನನಗೆ ಗ್ಲೋಬಲ್ ವಾರ್ನಿಂಗ್, ಗ್ಲೋಬಲ್ ವಾರ್ಮಿಂಗ್, ಕೋವಿಡ್ 19, ಎಐ, ನಿರುದ್ಯೋಗ, ಯುದ್ದಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಶುರುವಾಗುವ ಈ ವಿಡಿಯೋದಲ್ಲಿ 2040ರ ಜಗತ್ತು ಹೇಗಿರಬಹುದು ಎನ್ನುವುದರ ಕಾಲ್ಪಣಿಕ ಚಿತ್ರ ತೋರಿಸಲಾಗಿದೆ ಎಂದವರು ತಿಳಿಸಿದರು. ವಿಎಫ್‌ಎಕ್ಸ್‌ಸೆಟ್, 3ಡಿ ಬಾಡಿ ಡಬಲ್ ಸೇರಿದಂತೆ ಹಲವು ವಿಶೇಷತೆಗಳು ಈ ಚಿತ್ರದಲ್ಲಿದ್ದು, ರೀಶ್ಚಾ ನಾಣಯ್ಯ, ಸಾಧು ಕೋಕಿಲ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಶ್ರೀಕಾಂತ್ ಕೆಪಿ, ಲಹರಿ ವೇಲು, ನವೀನ್ ಮನೋಹರ್, ರಾಜೇಶ್ ಭಟ್, ಪ್ರೀತಮ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.