ತೀರ್ಥಹಳ್ಳಿಯಲ್ಲಿ ಯಂತ್ರಶ್ರೀ ನಾಟಿ ಉದ್ಘಾಟನೆ!
– ರೈತರ ಸಮಯ, ಶ್ರಮ ಉಳಿತಾಯಕ್ಕಾಗಿ ಯಾಂತ್ರಿಕೃತ ಭತ್ತ ಬೇಸಾಯ ಪದ್ಧತಿ
– ಕಂತುಗದ್ದೆ ನಾಗೇಶ್ ರವರ ಮನೆಯಲ್ಲಿ ಯಂತ್ರಶ್ರೀ ನಾಟಿ ಬೇಸಾಯ
NAMMUR EXPRESS NEWS
ತೀರ್ಥಹಳ್ಳಿ: ರೈತರ ಸಮಯ, ಶ್ರಮ ಉಳಿತಾಯಕ್ಕಾಗಿ ಯಾಂತ್ರಿಕೃತ ಭತ್ತ ಬೇಸಾಯ ಪದ್ಧತಿ ಅಳವಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜು. 25ರಂದು ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸಮೀಪದ ಕಂತುಗದ್ದೆ ನಾಗೇಶ್ ರವರ ಮನೆಯಲ್ಲಿ ಯಂತ್ರಶ್ರೀ ನಾಟಿ ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಯೋಜನೆಯ ಶಿವಮೊಗ್ಗ ಜಿಲ್ಲಾ ನಿರ್ದೇಶಕ ಮುರಳೀಧರ ಶೆಟ್ಟಿ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೊದಲು ಶ್ರೀ ಪದ್ಧತಿ ಬೇಸಾಯ ಪರಿಚಯ ಮಾಡಿತ್ತು. ಅದು ಹೆಚ್ಚಿನ ಮಾನವ ಸಂಪನ್ಮೂಲಗಳು ಅವಶ್ಯಕತೆ ಇದ್ದುದ್ದರಿಂದ ಈ ಪದ್ಧತಿ ಹೆಚ್ಚಿನ ಯಶಸ್ಸು ಸಾದಿಸಲಿಲ್ಲ. ಹಾಗಾಗಿ ರೈತರಿಗೆ ಹೆಚ್ಚಿನ ಸಮಯ ಉಳಿತಾಯ, ಶ್ರಮ ಉಳಿತಾಯಕ್ಕಾಗಿ ಯಾಂತ್ರಿಕೃತ ಬತ್ತ ಬೇಸಾಯ ಪದ್ಧತಿ ಯನ್ನು 2019-20 ನೇ ಸಾಲಿನಲ್ಲಿ ಪರಿಚಯ ಮಾಡಲಾಯಿತು ಎಂದರು.
ಯೋಜನಾಧಿಕಾರಿ ಮಾಲತಿ ದಿನೇಶ್ ಮಾತನಾಡಿ ಈ ವರ್ಷ ಈ ಪದ್ಧತಿಗೆ ಹೆಚ್ಚಿನ ರೈತರು ಬೇಡಿಕೆ ಬರುತ್ತಿದ್ದು 550 ಎಕರೆ ಗೆ ರೈತರನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕರ ಮುರಳೀಧರ ಶೆಟ್ಟಿ, ಯೋಜನಾಧಿಕಾರಿಗಳು ಮಾಲತಿ ದಿನೇಶ್. ಯಂತ್ರಧಾರೆ ಕೇಂದ್ರದ ಪ್ರಬಂಧಕರಾದ ಅಕ್ಷಯ್ ಕುಮಾರ್, ಮೇಲ್ವಿಚಾರಕರು ಹೊನ್ನಪ್ಪ ಕೃಷಿ ಮೇಲ್ವಿಚಾರಕರು ರಾಕೇಶ್ ಪವಾರ್.ರೈತರಾದ ನಾಗೇಶ್, ಶ್ರೀನಿವಾಸ್, ಸುಮಂತ, ರಮೇಶ್ ಕೇಳಕೇರಿ, ಕೃಷ್ಣ ಮೂರ್ತಿ ಆಚಾರ್, ಚಂದ್ರಣ್ಣ ಕುಂತವಳ್ಳಿ ದೇಣಿಸ್ ಡಿಸೋಜ ರಾಘು, ಸೇವಾಪ್ರತಿನಿಧಿ ಸುಜಾತಾ, ಚಾಲಕ ಸುರೇಂದ್ರ ಹಾಗೂ ಊರಿನ ಎಲ್ಲಾ ರೈತರು ಸ್ವ ಸಹಾಯ ಸಂಘದವರು ಉಪಸ್ಥಿತರಿದ್ದರು.
ಯಂತ್ರಶ್ರೀ ಪದ್ಧತಿ ಏನು ಎತ್ತ…? ಇಲ್ಲಿದೆ ಮಾಹಿತಿ!
ಯಂತ್ರಶ್ರೀ ಪದ್ಧತಿಯಲ್ಲಿ ನಾಟಿ ಮಾಡಲು 18 ರಿಂದ 25 ದಿನಗಳ ಸಸಿಯನ್ನು ಬಳಸಲಾಗುತ್ತದೆ. ಸಾಮಾನ್ಯ ಪದ್ಧತಿ ಯಲ್ಲಿ ಭತ್ತ ನಾಟಿ ಮಾಡಲು ಗದ್ದೆಯಲ್ಲಿ ಸಸಿಮಡಿ ಮಾಡುತ್ತಾರೆ. ಆದರೆ ಯಂತ್ರಶ್ರೀ ಪದ್ಧತಿ ಯಲ್ಲಿ ನಾಟಿ ಮಾಡಲು 1 ವರೆ ಅಡಿ ಅಗಲ ಹಾಗೂ 2 ಅಡಿ ಉದ್ದದ ಟ್ರೈ ಗಳನ್ನು 1 ಎಕರೆ ಗೆ ನಾಟಿ ಮಾಡಲು 80 ಟ್ರೈ ಗಳನ್ನು ಬೇಕಾಗುತ್ತೆ. ಸಾಮಾನ್ಯ ಪದ್ಧತಿಯಲ್ಲಿ ನಾಟಿ ಮಾಡಲು 30 ಕೆಜಿ ಬಿತ್ತನೆ ಬೀಜ ಬೇಕಾಗುತ್ತದೆ ಯಂತ್ರಶ್ರೀ ಪದ್ಧತಿ ಬಿತ್ತನೆ ಬೀಜ 10 ಕೆಜಿ ಸಾಗಕುತ್ತದೆ ಬೀಜದಲ್ಲಿ ಉಳಿತಾಯ ವಾಗುತ್ತದೆ ನಾಟಿ ಮಾಡುವದಕ್ಕೆ 1 ಎಕರೆಗೆ 2500 ಖರ್ಚು ಬರುತ್ತದೆ ಆದರಿಂದ ನಾಟಿಯಲ್ಲಿ ಉಳಿತಾಯವಾಗುತ್ತದೆ. ಕಳೆ ನಿರ್ವಹಣೆ ಮಾಡಲು 12 ದಿನಗಳಲ್ಲಿ ಕೊನೊವೀಡರ್ ಬಳಸಬೇಕಾಗುತ್ತದೆ ಈ ಪದ್ಧತಿಯಲ್ಲಿ ನಾಟಿ ಮಾಡುವದರಿಂದ ಸಾಲಿನಿಂದ ಸಾಲಿಗೆ ಸಸಿಗೆ ಸರಿಯಾದ ಅಂತರ ಇರುವುದರಿಂದ ಹೆಚ್ಚು ರೋಗ ಬಾಧೆ ಇರುವುದಿಲ್ಲ. ಖರ್ಚು ಕಡಿಮೆ ಹೆಚ್ಚು ಲಾಭ ಹಾಗಾಗಿ ಎಲ್ಲರೂ ಈ ಪದ್ಧತಿ ಅಳವಡಿಕೆ ಮಾಡಿಕೊಳ್ಳಿ ಎಂದು ಯೋಜನೆಯ ಶಿವಮೊಗ್ಗ ಜಿಲ್ಲಾ ನಿರ್ದೇಶಕ ಮುರಳೀಧರ ಶೆಟ್ಟಿ ಮಾಹಿತಿ ನೀಡಿದರು.