ತೀರ್ಥಹಳ್ಳಿಯಲ್ಲಿ ಮಳೆಗೆ ಯುವಕ ಬಲಿ!
– ಬೈಕ್ ಮೇಲೆ ಮರ ಬಿದ್ದು ಯುವಕ ಸಾವು
– ಹಾದಿಗಲ್ಲಿನ ಮೀನ್ಮನೆಕೊಪ್ಪದಲ್ಲಿ ಘಟನೆ
– ಹಲವೆಡೆ ಅಪಾಯಕ್ಕೆ ಕಾದಿದೆ ಮರ: ಹುಷಾರ್
– ಹತ್ತಾರು ಮನೆಗಳ ಗೋಡೆ ಕುಸಿತ
– ಇಂದು ಮಳೆ ಹಾನಿ ಕುರಿತು ಅಧಿಕಾರಿಗಳ ಸಭೆ
– ಹೊಸ ಸೇತುವೆ ಬಳಿ ಮತ್ತೆ ಗುಡ್ಡ ಕುಸಿತ
– ಶಾಲಾ ಕಾಲೇಜುಗಳಿಗೆ 15 ದಿನ ಪಾಠ ಇಲ್ಲ!
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಲ್ಲಿ ಸುರಿಯುತ್ತಿವ ಭಾರಿ ಮಳೆ ಇದೀಗ ತೀರ್ಥಹಳ್ಳಿಯಲ್ಲಿ ಯುವಕನ ಬಲಿ ಪಡೆದಿದೆ.
ಬೈಕ್ ಮೇಲೆ ಅಕೇಶಿಯಾ ಮರಬಿದ್ದು ಸ್ಥಳದಲ್ಲೇ ರಾಮಪ್ಪ(27) ಎಂಬ ಯುವಕ ಮೃತಪಟ್ಟ ಧಾರುಣ ಘಟನೆ ಶುಕ್ರವಾರ ತಡರಾತ್ರಿ ತೀರ್ಥಹಳ್ಳಿ ತಾಲೂಕಿನ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನ್ಮನೆಕೊಪ್ಪ ಗ್ರಾಮದಲ್ಲಿ ನಡೆದಿದ್ದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೋಣಂದೂರಿಗೆ ಕೆಲಸದ ನಿಮಿತ್ತ ರಾಮಪ್ಪ ತೆರಳಿದ್ದರು. ವಾಪಾಸ್ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ. ರಾಮಪ್ಪ ಸಕಾಲಕ್ಕೆ ಮನೆಗೆ ಬಾರದೆ ಇರುವುದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಹಲವೆಡೆ ಅಪಾಯಕ್ಕೆ ಕಾದಿದೆ ಮರ: ಹುಷಾರ್
ತೀರ್ಥಹಳ್ಳಿ ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಆಗುತ್ತಿದ್ದು ಅನೇಕ ಕಡೆ ಮರಗಳು ಬೀಳುವ ಹಂತದಲ್ಲಿವೆ. ಹೀಗಾಗಿ ರಸ್ತೆ ಪಕ್ಕ ಹೋಗುವಾಗ ಎಚ್ಚರ ವಹಿಸುವುದು ಅವಶ್ಯ.
ಹತ್ತಾರು ಮನೆಗಳ ಗೋಡೆ ಕುಸಿತ
ತೀರ್ಥಹಳ್ಳಿ ತಾಲೂಕಿನಲ್ಲಿ ಈಗಾಗಲೇ 38 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹತ್ತಾರು ಮನೆಗಳಿಗೆ ಹಾನಿಯಾಗಿದೆ. ಸೇತುವೆ, ರಸ್ತೆ ಹಾಳಾಗಿದೆ.ಹೊಸ ಸೇತುವೆ ಬಳಿ ಮತ್ತೆ ಗುಡ್ಡ ಕುಸಿತ ತೀರ್ಥಹಳ್ಳಿ ಹೊಸ ಸೇತುವೆ ಬಳಿ ಮತ್ತೆ ಗುಡ್ಡ ಕುಸಿದಿದೆ. ಈಗಾಗಲೇ ಆ ಮಾರ್ಗದ ಸಂಚಾರ ಬಂದ್ ಮಾಡಲಾಗಿದೆ.
ಮಳೆ ಹಾನಿ ಕುರಿತು ಅಧಿಕಾರಿಗಳ ಸಭೆ
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಅತಿವೃಷ್ಟಿಯಿಂದಾಗಿ ಆದ ಹಾನಿಗಳ ಕುರಿತಾಗಿ ಪರಿಶೀಲನಾ ಸಭೆಯನ್ನು ಮಧ್ಯಾಹ್ನ 12 ಗಂಟೆಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರೆಯಲಾಗಿದೆ.ಈ ಸಭೆಗೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಕಡ್ಡಾಯವಾಗಿ ಹಾನಿಯ ವಿವರ ನೀಡಲಿದ್ದಾರೆ.
ಶಾಲಾ ಕಾಲೇಜುಗಳಿಗೆ 15 ದಿನ ಪಾಠ ಇಲ್ಲ
ತೀರ್ಥಹಳ್ಳಿ ತಾಲೂಕಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಸುಮಾರು 15 ದಿನಗಳಿಂದ ಶಾಲಾ ಕಾಲೇಜಲ್ಲಿ ಮಕ್ಕಳಿಗೆ ಪಾಠ ನಡೆಯುತ್ತಿಲ್ಲ. ಇದರಿಂದ ಭಾರೀ ತೊಂದರೆ ಆಗುತ್ತಿದೆ. ಮಳೆ ಇನ್ನು ಹೆಚ್ಚಾದರೆ ಕಥೆ ಏನು ಎಂಬ ಆತಂಕ ಎದುರಾಗಿದೆ.