ತಡರಾತ್ರಿಗೆ ಪ್ರತ್ಯಕ್ಷ ಗೊಂಡ ಹೆಬ್ಬಾವು ಸೆರೆ!
– ತೀರ್ಥಹಳ್ಳಿಯ ಮುಳುಬಾಗಿಲಿನಲ್ಲಿ ಘಟನೆ
– ಮಳೆ ಹೆಚ್ಚಾದಂತೆ ಮನೆಗಳತ್ತ ಹಾವುಗಳು!
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಮುಳುಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಭೀಮನಕಟ್ಟೆಯಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಅದನ್ನು ತಡ ರಾತ್ರಿ ಹಿಡಿದ ಘಟನೆ ನಡೆದಿದೆ.ತಡರಾತ್ರಿ 11 ಗಂಟೆಯಲ್ಲಿ ಕಂಡು ಬಂದ ಹೆಬ್ಬಾವನ್ನು ಕೂಡಲೇ ಸ್ಥಳೀಯರು ಉರಗ ಪ್ರೇಮಿ ಸ್ನೇಕ್ ಚಂದ್ರು ಅವರನ್ನು ಸಂಪರ್ಕಿಸಿದ್ದು, ನಂತರ ಹೆಬ್ಬಾವನ್ನು ಸೆರೆ ಹಿಡಿಯುವುದರ ಮೂಲಕ ಸ್ಥಳೀಯರ ಆತಂಕ ದೂರ ಮಾಡಲಾಯಿತು. ಚಿಕ್ಕ ಪುಟ್ಟ ಮಕ್ಕಳು ಆಟ ಆಡಿಕೊಂಡಿರುವ ಪ್ರದೇಶದಲ್ಲಿ ಈ ಹೆಬ್ಬಾವಿನಿಂದ ಅಪಾಯದ ಸಾಧ್ಯತೆ ಇತ್ತು ಎಂದು ಸ್ಥಳೀಯರು ಆತಂಕ ಹೊರ ಹಾಕಿದರು. ನಂತರ ಹೆಬ್ಬಾವನ್ನು ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರಲಾಗಿದೆ.
ಮಳೆ ಹೆಚ್ಚು: ಹಾವುಗಳು ಮನೆ ಕಡೆಗೆ..!
ತೀರ್ಥಹಳ್ಳಿ ಸೇರಿ ಮಲೆನಾಡಲ್ಲಿ ಮಳೆ ಹೆಚ್ಚಾಗಿದೆ. ಭಾರೀ ಮಳೆ ಕಾರಣ ನೀರಲ್ಲಿ ತೇಲಿ ಬಂದ ಹಾವುಗಳು ಮನೆ ಕಡೆಗೆ ಬರುತ್ತಿವೆ. ಈ ಬಗ್ಗೆ ಜನ ಎಚ್ಚರಿಕೆ ವಹಿಸುವುದು ಅಗತ್ಯ.