ತೀರ್ಥಹಳ್ಳಿ ತಾಲೂಕಲ್ಲಿ ಏನಾಗಿದೆ ಮಳೆ ಪ್ರಾಬ್ಲಮ್?
– ಶಾಸಕರ ನೇತೃತ್ವದಲ್ಲಿ ಸಭೆ: ಅಧಿಕಾರಿಗಳಿಗೆ ವಾರ್ನಿಂಗ್
– ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಇಬ್ಬರು ಬಲಿ: ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಅತಿವೃಷ್ಟಿಯಿಂದಾಗಿ ಆದ ಹಾನಿಗಳ ಕುರಿತಾಗಿ ಪರಿಶೀಲನಾ ಸಭೆಯನ್ನು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಸಿದ್ದು ಸಭೆಗೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಶಾಸಕ ಅರಗ ಜ್ಞಾನೇಂದ್ರ, ಎಲ್ಲಾ ಅಧಿಕಾರಿಗಳಿಂದ, ತಾಲೂಕಿನಲ್ಲಿ ಮಳೆಯಿಂದ ಹಾನಿಯಾದ ಮನೆಗಳು ಮತ್ತು ಕೃಷಿ ಭೂಮಿ ಮತ್ತು ಪ್ರಾಣ ಹಾನಿಯ ಬಗ್ಗೆ, ಪೂರ್ಣ ಪ್ರಮಾಣದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು, ಹಾನಿಯಾದ ಮನೆಗಳಿಗೆ ಮತ್ತು ಮಳೆಯಿಂದ ಹಾನಿಯಾಗಿ ಮೃತಪಟ್ಟ ಕುಟುಂಬಕ್ಕೆ ಪರಿಹಾರದ ಬಗ್ಗೆ ಮಾಹಿತಿಯನ್ನು ಪಡೆದರು. ಬಳಿಕ ಅರಣ್ಯ ಇಲಾಖೆಯಿಂದ ರಸ್ತೆ ಪಕ್ಕದಲ್ಲಿದ್ದ ಮರಗಳ ತೆರವಿನ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒಗಳು ಶಾಸಕರ ಮತ್ತು ತಾಲೂಕು ದಂಡಾಧಿಕಾರಿಗಳ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತಂದರು.
ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಇಬ್ಬರು ಬಲಿ!
ಅರಣ್ಯ ಇಲಾಖೆಯವರ ಅಜಾಗರುಕತೆಯಿಂದ ತಾಲೂಕಿನಲ್ಲಿ ಎರಡು ಜನ ಮರಣ ಹೊಂದಿದ್ದಾರೆ. ನಿನ್ನೆ ರಾತ್ರಿನೂ ಸಹ ಬೈಕ್ ಸವಾರನು ಚಲಿಸುತ್ತಿರುವಾಗ ಮರ ತಲೆಯ ಮೇಲೆ ಬಿದ್ದು ಪ್ರಾಣವನ್ನು ತೆತ್ತಿದ್ದಾನೆ. ಅವನ ಪ್ರಾಣಕ್ಕೆ ಬೆಲೆಯೇ ಇಲ್ಲವೆ ಎಂದು ಶಾಸಕರು ಅರಣ್ಯ ಇಲಾಖೆಯರ ಮೇಲೆ ಕೆಂಡಮಂಡಲವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ರಸ್ತೆಯ ಪಕ್ಕದಲ್ಲಿ ಆಕೇಶಿಯ ಗಿಡವನ್ನು ನೆಟ್ಟರೆ ನಾನೇ , ಗಿಡಗಳನ್ನು ಕಿತ್ತು ಒಗೆಯುತ್ತೇನೆ. ಮತ್ತು ತಾಲೂಕಿನಾದ್ಯಾನಂತ ಆಂದೋಲನವನ್ನು ಮಾಡುತ್ತೇನೆ ಎಂದರು.
ಗ್ರಾಮ ಪಂಚಾಯಿತಿಯಲ್ಲಿ ಮೊಬೈಲಿಗೆ ಮಳೆ ಮಾಪನದ, ಸಂದೇಶದ ಕೊರತೆ!
ತೀರ್ಥಹಳ್ಳಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಮಳೆ ಮಾಪನದ ಸಂದೇಶದ ಕೊರತೆ ಇದ್ದು, ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಗ್ರಾಮದ ರೈತರಿಗೆ ಅತಿವೃಷ್ಟಿಯಿಂದ ಆದ ಬೆಳೆ ಹಾನಿಗೆ ಪರಿಹಾರ ನೀಡಲು ಆಗುತ್ತಿಲ್ಲ ಎಂದು ಶಾಸಕರ ಎದುರು ಕೆಲವರು ಮನವಿ ನೀಡಿದರು.
ಶಾಸಕರು ಸಂಬಂಧಪಟ್ಟ ಅಧಿಕಾರಿಗೆ ಫೋನ್ ಮಾಡಿ ಮಳೆಯ ಮಾಪನವನ್ನು ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಅದರಿಂದ ಸೂಕ್ತವಾದ ಮಾಹಿತಿಯನ್ನು ತಿಳಿಯಲು ಅನುವು ಮಾಡಿಕೊಡಿ ಎಂದರು.
ಅಧಿಕಾರಿಗಳಿಗೆ ರಜೆ ಕಟ್: ಜನರ ಸೇವೆ ಮಾಡಲು ಮನವಿ
ತೀರ್ಥಹಳ್ಳಿ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಡೆಂಗ್ಯೂ, ಕಾಯಿಲೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದರು. ಡೆಂಗ್ಯೂ ಬಗ್ಗೆ ಮುಂಜಾಗ್ರತೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯವಾಗಿ ಅಧಿಕಾರಿಗಳಿಗೆ ಮಳೆಗಾಲ, ಮುಗಿಯುವವರೆಗೂ ಯಾವ ಅಧಿಕಾರಿಯನ್ನು ಹೆಚ್ಚಿನ ರಜೆಯನ್ನು ತೆಗೆದುಕೊಳ್ಳುವ ಹಾಗೆ ಇಲ್ಲ. ಎಲ್ಲಾ ಅಧಿಕಾರಿಗಳು ಸಹಕರಿಸಬೇಕು ಎಂದರು.
ಎಲ್ಲಾ ಅಧಿಕಾರಿಗಳಿಗೆ ಜನಪರ ಕೆಲಸ ಮಾಡಬೇಕು. ಜನರ ಸಂಕಷ್ಟಕ್ಕೆ ಈಡಾದಾಗ ಅವರಿಗೆ ಧೈರ್ಯ ತುಂಬುವಂತ ಕೆಲಸ ಮಾಡಬೇಕು. ಅಧಿಕಾರಿಗಳೇ ಸ್ಥಳಕ್ಕೆ ಹೋಗದಿದ್ದರೆ ತೊಂದರೆಗೀಡಾದ ಜನರು ಹತಾಶರಾಗುತ್ತಾರೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂಥ ಪ್ರಸಂಗವು ಬರಬಹುದು, ಆದ್ದರಿಂದ ಅಧಿಕಾರಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು. ಈ ಸಭೆಯಲ್ಲಿ ಶಾಸಕರು, ಮತ್ತು ತಾಲೂಕು ದಂಡಾಧಿಕಾರಿ, ಹಾಗೂ ತಾಲೂಕು ನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.