ವೀರ ಯೋಧರಿಗೆ ನಮ್ಮ ಸಲಾಂ
– ಹೊಸದುರ್ಗದಲ್ಲಿ ಕಾರ್ಗಿಲ್ ವಿಜಯೋತ್ಸವ, ಹುತಾತ್ಮ ಯೋಧರ ಸ್ಮರಣೆ
– ತಮ್ಮ ಸೇವಾ ಅನುಭವ ಹಂಚಿಕೊಂಡ ಯೋಧರು
NAMMUR EXPRESS NEWS
ಹೊಸದುರ್ಗ: ಸೈನಿಕ ವೃತ್ತಿಯಲ್ಲಿ ಸೇವೆ ಮಾಡಲು ನನಗೆ 39 ವರ್ಷ ಅವಕಾಶ ಸಿಕ್ಕಿತು. ಭಾರತೀಯ ಆರ್ಮಿ ಜಗತ್ತಿನ ವಿಶಿಷ್ಟವಾದ ಆರ್ಮಿ. ಎಂತಹ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡುವ ಸೈನಿಕರು ನಮ್ಮಲ್ಲಿದ್ದಾರೆ ಜುಲೈ 26 ರಂದು ಪ್ರಾರಂಭವಾಗಿ ಮೂರು ತಿಂಗಳುಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ 527 ಯೋಧರು ವೀರ ಮರಣ ಹೊಂದಿದರು ಇದರಲ್ಲಿ ನಾಲ್ಕು ಜನ ಸೈನಿಕರಿಗೆ ಮತ್ತು ಅಧಿಕಾರಿಗಳಿಗೆ ಪರಮ ವೀರಚಕ್ರ ನೀಡಿದ್ದಾರೆ ಎಂದು ಇಂಡಿಯನ್ ಆರ್ಮಿಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು ತಿಳಿಸಿದರು.
ನಗರದ ವಾಕರ್ಸ್ ಅಸೋಸಿಯೇಷನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಕ್ಷರದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಹಾಗೂ ಹುತಾತ್ಮ ಯೋಧರ ಸ್ಮರಣೆ ಡೆಂಗ್ಯೂ ಮಹಾಮಾರಿಯ ನಿಯಂತ್ರಣ ಜಾಗೃತಿ ಅಂಗವಾಗಿ ನಗರದ ವೀರಭದ್ರ ಸ್ವಾಮಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಪ್ರಾರಂಭವಾದ ಮ್ಯಾರಥಾನ್ ವಾಕಥಾನ್ ವಿಜೇತರಿಗೆ ಹೇಮಾವತಿ ಸಮುದಾಯ ಭವನದಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ತಮ್ಮ ಪ್ರಾಣವನ್ನ ಅರ್ಪಿಸಿ ನಮ್ಮ ಸೈನಿಕರು ದೇಶಕ್ಕೆ ಜಯ ತಂದುಕೊಟ್ಟ ಯೋಧರ ಸೇವೆ ಸ್ಮರಿಸಿದರು.
ಭಾರತೀಯ ಸೇನೆಯಲ್ಲಿ ಶಿಸ್ತಿಗೆ ಮೊದಲ ಆದ್ಯತೆ. ಶಿಸ್ತು, ಶ್ರದ್ದೆ ಇದ್ದರೆ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟನೆಗೊಳಿಸಿ ಶಾಸಕ ಬಿ.ಜಿ ಗೋವಿಂದಪ್ಪ ಮಾತನಾಡಿ ಕಾರ್ಗಿಲ್ ಯುದ್ಧದ 25 ವರ್ಷಗಳ ಸಂಭ್ರಮಾಚರಣೆ ಡೆಂಗ್ಯೂ ಮಹಾಮರಿಯ ನಿಯಂತ್ರಣ ಜಾಗೃತಿ ಸಂದೇಶವಾಗಿ ಮ್ಯಾರಥಾನ್ ಮುಖಾಂತರ ಜಾಗೃತಗೊಳಿಸುವ ಕಾರ್ಯ ಆಗಿದೆ ಎಂದರು.
ರಾಜ್ಯ ಖನಿಜ ನಿಗಮ ಮಾಜಿ ಅಧ್ಯಕ್ಷ ಎಸ್ ಲಿಂಗಮೂರ್ತಿ ಮಾತನಾಡಿ 50 ಜನ ಸದಸ್ಯರನ್ನು ಒಳಗೊಂಡ ಈ ತಂಡ ಕಳೆದ 12 ವರ್ಷಗಳಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದರು. ವಾಕರ್ ಅಸೋಸಿಯೇಷನ್ ಅಧ್ಯಕ್ಷ ಎಚ್ ಬಿ ಮಂಜುನಾಥ್, ಉಪಾಧ್ಯಕ್ಷ ಆಸಂದಿ ಪ್ರಕಾಶ್, ಕಾರ್ಯದರ್ಶಿ ವೀರೇಂದ್ರ ಪಾಟೀಲ್, ಯುವ ಮುಖಂಡ ಸದ್ಗುರು ಪ್ರದೀಪ್, ಆಗ್ರೋ ಶಿವಣ್ಣ, ಜಿ ಪಂ ಸದಸ್ಯ ಹನುಮಂತಪ್ಪ,ಅನಂತ್ ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ. ಡಾ, ಸಂಜಯ್, ಪುರಸಭಾ ಮುಖ್ಯ ಅಧಿಕಾರಿ ತಿಮ್ಮರಾಜು. ತಾಲೂಕು ಆರೋಗ್ಯ ವೈದ್ಯಾಧಿಕಾರಿ ರಾಘವೇಂದ್ರ ಪ್ರಸಾದ್, ನಾಗೇಶಪ್ಪ ಕೆ ಸಿ ನಿಂಗಪ್ಪ, ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ರಕ್ಷಾ ನಾಗಭೂಷಣ್, ಲಯನ್ಸ್ ಕ್ಲಬ್ ಅಧ್ಯಕ್ಷ ರೇವಣಸಿದ್ದಪ್ಪ, ಕಾರ್ಯದರ್ಶಿ ಸುರೇಶ್ ಸಾಗರ್,ದೇವಿಗೆರೆ ಮಲ್ಲಿಕಾರ್ಜುನ್,ಬಾಬಣ್ಣ,, ರಮೇಶ್ ವೆಂಕಟೇಶ್, ಪಾಪಣ್ಣಿ, ಹಾಗೂ ವಾಕರ್ ಅಸೋಸಿಯೇಷನ್ ಸದಸ್ಯರು, ಶಾಲಾ ಕಾಲೇಜು ಅಧ್ಯಾಪಕರು ವಿದ್ಯಾರ್ಥಿಗಳು,ಸಾರ್ವಜನಿಕರು ಪಾಲ್ಗೊಂಡಿದ್ದರು.