ಕಾಂತಾರ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ
– ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗೆದ್ದ ಕನ್ನಡಿಗ ಸಿನಿಮಾ
– ಸ್ಯಾಂಡಲ್ವುಡ್ನಲ್ಲಿ ಸಂಭ್ರಮ: ರಿಷಬ್ ಶೆಟ್ಟಿಗೆ ಲಕ್
NAMMUR EXPRESS NEWS
ನವದೆಹಲಿ: ಭಾರತ ಪ್ರತಿಷ್ಠಿತ ಸಿನಿಮಾ ರಂಗದ ರಾಷ್ಟ್ರ ಪ್ರಶಸ್ತಿಯನ್ನು ಕನ್ನಡದ ‘ಕಾಂತಾರ’ ಚಲನಚಿತ್ರವು ಪ್ರಶಸ್ತಿ ಬಾಚಿಕೊಂಡಿದೆ. ಡಿವೈನ್ ಸ್ಟಾರ್, ನಿರ್ದೇಶಕ ರಿಷಭ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಒಲಿದಿದ್ದಿದ್ದು, ಸ್ಯಾಂಡಲ್ವುಡ್ನಲ್ಲಿ ಸಂಭ್ರಮ ಮನೆ ಮಾಡಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2024 ವಿಜೇತ ಪಟ್ಟಿಯನ್ನು ಪ್ರಕಟಿಸಿದೆ.
ಈ ಹಿಂದೆ ನಾತಿಚರಾಮಿ ಚಿತ್ರಕ್ಕೆ ಪ್ರಶಸ್ತಿ ಬಂದಿತ್ತು. ಇದು ಬಿಟ್ರೆ, ಮತ್ತೆ ಕನ್ನಡಕ್ಕೆ ಪ್ರಶಸ್ತಿಗಳೇ ಬಂದಿರಲಿಲ್ಲ. ಇನ್ನು ಪೈಪೋಟಿಯಲ್ಲಿ ಮಲಯಾಳಂನ ಖ್ಯಾತ ನಟ ಮಮ್ಮುಟಿ ಅವರ ‘ನನ್ನಕಲ್ ನೆರತು ಮಯಕ್ಕಂ ‘ ಮತ್ತು ‘ರೋರ್ಸ್ಟಾಚ್’ ಚಿತ್ರಗಳಿಗೆ ಅವರ ಹೆಸರನ್ನು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಆಯ್ಕೆ ಮಾಡಲಾಗಿತ್ತು