ಟಾಪ್ ನ್ಯೂಸ್ ಕರ್ನಾಟಕ
ಬಸ್ ಡ್ರೈವಿಂಗ್ ವೇಳೆ ಹಾರ್ಟ್ ಅಟ್ಯಾಕ್, 45 ಪ್ರಯಾಣಿಕರು ಬಚಾವ್!
* ಭೀಕರ ರಸ್ತೆ ಅಪಘಾತ ತಲೆ ಪೀಸ್ ಪೀಸ್
* ಗಾಡಿಯಲ್ಲಿ ಮಲಗಿದ್ದ ವೇಳೆ, ಕಾರ್ ಗೆ ಏಕಾಏಕಿ ಬೆಂಕಿ!
* ತುಮಕೂರಿನಲ್ಲಿ ಕಾರು ಅಪಘಾತ; ಇಬ್ಬರು ಸಾವು
* ಚಿಕ್ಕಮಗಳೂರು: 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ,ಹತ್ಯೆ!
* ಪ್ರತಿಷ್ಠಿತ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಬೆಂಕಿ ಅವಘಡ
NAMMUR EXPRESS NEWS
ಬಿಎಂಟಿಸಿ ಬಸ್ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ 45ಕ್ಕೂ ಹೆಚ್ಚು ಜನರ ಜೀವ ಉಳಿದಿದೆ. ಸೆ. 19ರಂದು ಮಧ್ಯಾಹ್ನ ಶಾಂತಿನಗರದ ಡಬಲ್ ರೋಡ್ ಬಳಿ ಘಟನೆ ನಡೆದಿದೆ.
ಡ್ರೈವರ್ ವಿರೇಶ್ ಬಸ್ ಡ್ರೈವಿಂಗ್ ಮಾಡುತ್ತಿರುವಾಗ ಹಾರ್ಟ್ ಅಟ್ಯಾಕ್ ಆಗಿದೆ. ನಡುರಸ್ತೆಯಲ್ಲಿ ಬಸ್ ಸ್ಲೋ ಆಗಿರುವುದನ್ನು ಗಮನಿಸಿದ ಹಲಸೂರು ಟ್ರಾಫಿಕ್ ಎಎಸ್ಐ ಆರ್ ರಘುಕುಮಾರ್ ಬಸ್ ಬಳಿ ಬಂದು ನೋಡಿದಾಗ ಚಾಲಕ ಎದೆಗೆ ಕೈ ಹಿಡಿದು ಒಂದು ಕಡೆಗೆ ವಾಲಿದ್ದರು. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಸ್ಲೋ ರನ್ನಿಂಗ್ನಲ್ಲಿತ್ತು, ಕೂಡಲೇ ಹ್ಯಾಂಡ್ ಬ್ರೇಕ್ ಹಾಕಿ ಚಾಲಕನನ್ನು ಇಳಿಸಿದ್ದಾರೆ. ನಂತರ ಆ್ಯಂಬುಲೆನ್ಸ್ಗೂ ಕಾಯದೆ ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯದಿಂದ ಆಸ್ಪತ್ರೆಗೆ ರವಾನಿಸಿದ್ದಾರೆ.
* ಭೀಕರ ರಸ್ತೆ ಅಪಘಾತ ತಲೆ ಪೀಸ್ ಪೀಸ್!
ಕೋಲಾರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹಕ್ಕಿ ಪಿಕ್ಕಿ ಕ್ರಾಸ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಅಪರಿಚಿತ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸವಾರನ ತಲೆಯೇ ತುಂಡಾಗಿ ಬಿದ್ದಿದೆ. ಆಂಧ್ರಪ್ರದೇಶದ ಚೀಕಲಬೈಲು ಗ್ರಾಮದ ಗುಣಶೇಖರ್ (28) ದಾರುಣ ಅಂತ್ಯ ಕಂಡ ಸವಾರನಾಗಿದ್ದಾನೆ.
ಗಾಡಿಯಲ್ಲಿ ಮಲಗಿದ್ದ ವೇಳೆ, ಕಾರ್ ಗೆ ಏಕಾಏಕಿ ಬೆಂಕಿ!!
ಬೆಂಗಳೂರು :ಬೆಂಗಳೂರಿನ ವೈಯಾಲಿಕಾವಲ್ನ ವಿನಾಯಕ ಸರ್ಕಲ್ ಬಳಿ ಕಾರೊಂದು ಹೊತ್ತಿ ಉರಿದ ಘಟನೆ ನಡೆದಿದೆ.
ಸಿಎನ್ಜಿ ವಾಹನಕ್ಕೆ ಬೆಂಕಿ ತಗುಲಿದ್ದ ಕಾರಣ,ಕಾರು ಚಾಲಕ ಗಾಡಿಯಲ್ಲಿಯೇ ಮಲಗಿದ್ದಾಗಲೇ, ಏಕಾಏಕಿ ಬೆಂಕಿ ಹತ್ತಿದೆ. ಕೂಡಲೇ ಕಾರಿನಿಂದ ಹೊರಬಂದಿದ್ದು,ಕಾರಿನ ಕೆಳಗೆ ಪೆಟ್ರೋಲ್ ಕ್ಯಾನ್ ಇದ್ದದ್ದು ಕಂಡುಬಂದಿದೆ ಎನ್ನಲಾಗಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರಿನಲ್ಲಿ ಕಾರು ಅಪಘಾತ; ಇಬ್ಬರು ಸಾವು
ತುಮಕೂರು: ತುಮಕೂರಿನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಓರ್ವ ಮೃತಪಟ್ಟರೆ, ಮತ್ತೋರ್ವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಜೀವ ಬಿಟ್ಟಿದ್ದಾನೆ. ತುಮಕೂರು ತಾಲೂಕಿನ ಕೋರಾ ಬ್ರಿಡ್ಜ್ ಬಳಿ ಕಾರು ಅಪಘಾತವಾಗಿ ದಾವಣಗೆರೆ ಮೂಲದ ಇಬ್ಬರು ಮೃತಪಟ್ಟಿದ್ದಾರೆ. ದಾವಣಗೆರೆಯಿಂದ ಬೆಂಗಳೂರು ಕಡೆ ಹೋಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಸೆ. 20 ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಕೋರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ,ಹತ್ಯೆ!
ಅಜ್ಜಂಪುರ: ಅಜ್ಜಂಪುರ ಠಾಣಾ ವ್ಯಾಪ್ತಿಯಲ್ಲಿ 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಹತ್ಯೆ ಮಾಡಿದ ಅಮಾನುಷ ಘಟನೆ ನಡೆದಿದೆ.
ಹತ್ಯೆ ಮಾಡಿ ಬಾಲಕಿಯ ಮೃತದೇಹವನ್ನು ಬೆಡ್ ಶೀಟ್ ನಲ್ಲಿ ಸುತ್ತಿಟ್ಟು ಪರಾರಿಯಾಗಿದ್ದಾರೆ.
ಇತ್ತ ತಾಯಿ ಕೆಲಸ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಅಜ್ಜಂಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜ್ವರ ಎಂದು ಮಗು ಅಂಗನವಾಡಿಗೆ ಹೋಗಿರಲಿಲ್ಲ. ಇತ್ತ ತಾಯಿ ಜಮೀನು ಕೆಲಸಕ್ಕೆ ತೆರಳಿದ್ದರು. ಇದನ್ನೇ ಕಾಯುತ್ತಿದ್ದ ಕಾಮಾಂಧರು ಏಕಾಂಗಿಯಾಗಿದ್ದ ಮಗು ಮೇಲೆ ಅಮಾನುಷವಾಗಿ ಹಿಂಸೆಗೈದು, ಹತ್ಯೆ ಮಾಡಿದ್ದಾರೆ. ಇತ್ತ ತಾಯಿ ಕೆಲಸ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಅಜ್ಜಂಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.
– ಪ್ರತಿಷ್ಠಿತ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಬೆಂಕಿ ಅವಘಡ
ಬೆಂಗಳೂರು : ಬೆಂಗಳೂರಿನ ಖಾಸಗಿ ಪ್ರತಿಷ್ಠಿತ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಇಂದು (ಸೆ. 19) ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಹಲವರಿಗೆ ಗಾಯಗಳಾಗಿದ್ದು, ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಮಧ್ಯಾಹ್ನ 3 ಗಂಟೆ ವೇಳೆ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಆಸ್ಪತ್ರೆಯ ಎರಡನೇ ಅಂತಸ್ಥಿನಲ್ಲಿರುವ ಕಾರ್ಡಿಯಕ್ ಎಸಿ ವಾರ್ಡ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಪರಿಣಾಮ ಇತರೆ ವಾರ್ಡ್ಗಳಿಗೆ ಬೆಂಕಿಯ ಜ್ವಾಲೆ ಹರಡಿಕೊಂಡಿದೆ ಎಂದು ಶಂಕಿಸಲಾಗಿದೆ.
ಬಳಿಕ ಸ್ಥಳಕ್ಕೆ ಆಗಮಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಬೆಂಕಿ , ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆ ಒಳಗಿದ್ದ ರೋಗಿಗಳು, ಅವರ ಸಂಬಂಧಿಕರು, ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ ಎಂದು ವರದಿಯಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮನಿಸಿ ಬೆಂ*ಕಿ ನಂದಿಸಿದ್ದರಿಂದ ದೊಡ್ಡ ಅನಾಹುತವೇ ತಪ್ಪಿದಂತಾಗಿದೆ.