ರಾಷ್ಟ್ರಧ್ವಜ ಸುಟ್ಟ ಪ್ರಕರಣದಲ್ಲಿ ಇನ್ನಿಬ್ಬರ ವಿರುದ್ಧ ಚಾರ್ಜ್ ಶೀಟ್!
– ಈವರೆಗೆ 10 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ
– ಶಿವಮೊಗ್ಗ ತುಂಗಾ ನದಿ ತಟದಲ್ಲಿ ಐಇಡಿ ಪ್ರಾಯೋಗಿಕ ಸ್ಫೋಟ
NAMMUR EXPRESS NEWS
ಬೆಂಗಳೂರು: ಶಿವಮೊಗ್ಗದ ತುಂಗಾ ನದಿ ದಡದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪ್ರಾಯೋಗಿಕ ಸ್ಫೋಟ ಹಾಗೂ ರಾಷ್ಟ್ರಧ್ವಜ ಸುಟ್ಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಮತ್ತೆ ಇಬ್ಬರು ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ ಐಎ ವಿಶೇಷನ್ಯಾಯಾಲಯಕ್ಕೆಮಂಗಳವಾರ ಮೂರನೇ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಬ್ದುಲ್ ಮತೀನ್ ತಾಹಾ ಮತ್ತು ಮುಸಾವೀರ್ಹುಸೇನ್ ಶಾಜೀಬ್ ವಿರುದ್ಧ ಎನ್ಐಎನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಮೂಲಕ ಶಿವಮೊಗ್ಗ ಐಸಿಸ್ ಪಿತೂರಿ ಪ್ರಕರಣ ಸಂಬಂಧ ಈವರೆಗೆ 10 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಕೆಫೆ ಬಾಂಬ್ ಸ್ಫೋಟದ ರೂವಾರಿಗಳೂ: ಈ ಇಬ್ಬರು ಆರೋಪಿಗಳು ಸೇರಿ ನಾಲ್ವರ ವಿರುದ್ಧ ಎನ್ಐಎ ಕೆಲವು ದಿನಗಳ ಹಿಂದೆ ಯಷ್ಟೇ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಈ ಇಬ್ಬರು ಆರೋಪಿಗಳು ಐಸಿಎಸ್ ಉಗ್ರ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಬೆಂಗಳೂರಿನಸುದ್ದಗುಂಟೆಪಾಳ್ಯದಲ್ಲಿ ನಾಲ್ಕು ವರ್ಷದ ಹಿಂದೆ ನಡೆದಿದ್ದ ಐಸಿಸ್ ಪ್ರೇರಿತ ಅಲ್-ಹಿಂದ್ ಸಂಘಟನೆ ಸಭೆಯಲ್ಲಿ ಭಾಗಿಯಾಗಿದ್ದರು. ಮುಸ್ಲಿಂಸಮುದಾಯದ ಕೆಲ ಅಮಾಯಕ ಯುವಕರನ್ನು ಸೆಳೆದು ಐಸಿಸ್ ಮೂಲಭೂತ ತತ್ವ ಬೋಧಿಸಿ ಪ್ರಚೋದಿಸಿ ಐಸಿಸ್/ಅಲ್ ಹಿಂದ್ ಸಂಘಟನೆಗಳಿಗೆ ಸೇರಿಸುತ್ತಿದ್ದರು.
ತುಂಗಾ ನದಿ ತಟದಲ್ಲಿ ಐಇಡಿ ಪ್ರಾಯೋಗಿಕ ಸ್ಫೋಟ!
ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ತುಂಗಾ ನದಿ ದಡದಲ್ಲಿ 2022ರ ಆ.26ರಂದು ಪ್ರಾಯೋಗಿಕವಾಗಿ ಐಇಡಿ ಸ್ಫೋಟಿಸಿದ್ದರು. ಈ ವೇಳೆ ಭಾರತದ ರಾಷ್ಟ್ರಧ್ವಜ ಸಹ ಸುಟ್ಟಿದ್ದರು. ಈ ಪ್ರಕರಣ ತನಿಖೆಗೆ ಕೈಗೆತ್ತಿಕೊಂಡಿದ್ದ ಎನ್ಐಎ, ಈ ಘಟನೆ ಹಿಂದೆ ಐಸಿಸ್ ಉಗ್ರ ಸಂಘಟನೆಯ ಕೈವಾಡ ಇರುವುದನ್ನು ಬೆಳಕಿಗೆ ತಂದಿತ್ತು. ಇಬ್ಬರು ಆರೋಪಿಗಳು ಕುಂದಲಹಳ್ಳಿಯ ದಿ ರಾಮೇಶ್ವರಂಕೆಫೆಯಲ್ಲಿ ಕಳೆದಮಾ.1ರಂದು ನಡೆದ ಬಾಂಬ್ ಸ್ಫೋಟದಲ್ಲಿ ಅಬ್ದುಲ್ ಮತೀನ್ ತಾಹಾ, ಮುಸಾವೀರ್ಹುಸೇನ್ ಶಾಜೀಬ್ ಪಾತ್ರ ಇರುವುದು ಬಯಲಾಗಿತ್ತು.
ನಿಷೇಧಿತ ಐಸಿಸ್ ಉಗ್ರ ಸಂಘಟನೆಯುಭಾರತದಲ್ಲಿ ದೇಶ ವಿರೋಧಿ ನಡೆಸುವುದು, ಮುಸ್ಲಿಂ ಚಟುವಟಿಕೆಗಳನ್ನು ಭಯೋತ್ಪಾದನೆ ಹರಡುವುದು, ಭಾರತ ‘ವನ್ನು ಅಸ್ಥಿರಗೊಳಿಸಲು ಯುವಕರನ್ನು ಸಂಘಟನೆಯತ್ತ ಸೆಳೆದು ಉಗ್ರ ತತ್ವ ಬೋಧಿಸಿ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರಚೋದಿಸುವ ಕೆಲಸ ಮಾಡುತ್ತಿದೆ.
ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ: ಅದರಂತೆ ಐಸಿಸ್ ಉಗ್ರ ಸಂಘಟನೆ ಸೇರಿದ್ದ ಈ ಇಬ್ಬರು ಆರೋಪಿಗಳು ಮುಸ್ಲಿಂ ‘ಯುವಕರನ್ನು ಸಂಘಟನೆಗೆ ನೇಮಕಾತಿ ಮಾಡುವುದು, ಭಯೋತ್ಪಾದನೆಗೆ ನಿಧಿ ಸಂಗ್ರಹ, ರಾಷ್ಟ್ರ ಧ್ವಜ ಸುಡುವುದು, ಪ್ರಾಯೋಗಿಕ ಬಾಂಬ್ ಸ್ಪೋಟದ ತರಬೇತಿ ನೀಡುವುದು ಸೇರಿದಂತೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಎನ್ಐಎ ತಿಳಿಸಿದೆ.