ಮಗಳ ಕೊಲೆಗೈದು ಅತ್ಯಾಚಾರದ ಕತೆ ಕಟ್ಟಿ ಸಿಕ್ಕಿಬಿದ್ದ ತಂದೆ!
– ಕುಡಿದು ಅಮ್ಮನನ್ನು ಹೊಡೆಯುತ್ತಿದ್ದನ್ನು ಪ್ರಶ್ನಿಸಿದಕ್ಕೆ ಕೊಲೆ
– ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ಘಟನೆ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ 5 ವರ್ಷದ ಮಗಳನ್ನು ಕೊಲೆಗೈದ ತಂದೆ ಅತ್ಯಾಚಾರದ ಕತೆ ಕಟ್ಟಿ ಜೈಲು ಸೇರಿರುವ ಘಟನೆ ನಡೆದಿದೆ.
ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ಸೆ.19ರಂದು 5 ವರ್ಷದ ಬಾಲಕಿ ಶವ ಪತ್ತೆಯಾಗಿತ್ತು. ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಬಂಧಿತ ಆರೋಪಿ ಮಂಜುನಾಥ್ (ತಂದೆ ) ಪೊಲೀಸರ ಬಳಿ ಹೇಳಿದ್ದ ಎಂದು ತಿಳಿದು ಬಂದಿದೆ.
ತನಿಖೆ ನಡೆಸಿದ ಪೊಲೀಸರು ಸತ್ಯ ಬಯಲು ಮಾಡಿದ್ದಾರೆ. 5 ವರ್ಷದ ಮಗಳನ್ನು ಹತ್ಯೆಗೈದಿ ತಂದೆ ಮಂಜುನಾಥ್ ಇದೀಗ ಸಿಕ್ಕಿಬಿದ್ದಿದ್ದು, ಪೊಲಿಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಂಜುನಾಥ್ ತನ್ನ ಪತ್ನಿಯ ಮೇಲೆ ಅನೈತಿಕ ಸಂಬಂಧ ಅನುಮಾನದಲ್ಲಿ ಪ್ರತಿದಿನ ಕುಡಿದು ಬಂದು ಜಗಳವಾಡುತ್ತಿದ್ದ. ಸೆ.19ರಂದು ಮಧ್ಯಾಹ್ನವೇ ಕಂಠಪೂರ್ತಿ ಕುಡಿದು ಬಂದು ಪತ್ನಿ ಜೊತೆ ಗಲಾಟೆ ಆರಂಭಿಸಿದ್ದ. 5 ವರ್ಷದ ಮಗಳು ಅಪ್ಪನನ್ನು ಕುಡಿದು ಗಲಾಟೆ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಾಳೆ. ಕೋಪಗೊಂಡ ಮಂಜುನಾಥ್ ಮಗಳನ್ನು ಹೊಡೆದು ಕೊಂದಿದ್ದಾನೆ.
ಬಳಿಕ ಅತ್ಯಾಚಾರದಕ್ಕೆ ಯತ್ನ ನಡೆಸಿ ಯಾರೋ ಮಗಳನ್ನು ಕೊಂದಿದ್ದಾರೆ ಎಂದು ಕತೆ ಕಟ್ಟಿ ಪರಾರಿಯಾಗಲು ಯತ್ನಿಸಿದ್ದ.ಆದರೆ ತನಿಖೆಯ ವೇಳೆ ನಿಜಾಂಶ ಬಯಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.