ನಕಲಿ ದಾಖಲೆ ಸೃಷ್ಟಿಸಿ ಪಿಂಚಣಿ ಹಣ ಗೋಲ್ಮಾಲ್!
– ಕಡೂರಲ್ಲಿ ಘಟನೆ: ಡಿಸಿ ತನಿಖೆ ವೇಳೆ ಆರೋಪ ಧೃಡ,ಉಪ ತಹಶೀಲ್ದಾರ್ ಅಮಾನತು
– ಕೊಪ್ಪ: ವಿದ್ಯುತ್ ತಂತಿ ತುಳಿದು 5 ಹಸುಗಳು ಸಾವು
– ಮೂಡಿಗೆರೆಯ ಬಣಕಲ್ಲಿನಲ್ಲಿ ಮನೆ ಗೋಡೆ ಕುಸಿತ
– ಶೃಂಗೇರಿ: ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ
NAMMUR EXPRESS NEWS
ಕಡೂರು: ಕಡೂರಿನಲ್ಲಿ ಶಿರಸ್ತೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅರ್ಹ ಫಲಾನುಭವಿಗಳಿಗೆ ಬರುತ್ತಿದ್ದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಸೇರಿದಂತೆ ಪಿಂಚಣಿ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಬೇರೆ ವ್ಯಕ್ತಿಗಳ ಖಾತೆಗೆ ಜಮೆಯಾಗುವಂತೆ ಮಾಡಿದ್ದ ಬಿ.ಸಿ ಕಲ್ಮುರುಡಪ್ಪ ವಿರುದ್ಧ ನಿರಂತರ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತನಿಖೆ ನಡೆಸಿ ಆಮಾನತು ಮಾಡಲಾಗಿದೆ.. ಈ ವೇಳೆ 1156 ಪಿಂಚಣಿ ಪ್ರಕರಣಗಳಲ್ಲಿ ಅಕ್ರಮ ಧೃಡವಾಗಿದೆ.ಈ ಹಿನ್ನೆಲೆಯಲ್ಲಿ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಹೆಚ್.ಎನ್ ಸುದರ್ಶನ್ ಅವರಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಮಾನತಾದ ಅಧಿಕಾರಿ ಬಿ.ಸಿ ಕಲ್ಮುರುಡಪ್ಪ ಪ್ರಸ್ತುತ ಚಾಮರಾಜನಗರ ಜಿಲ್ಲೆಯ ಯಳಂದೂರುವಿನಲ್ಲಿ ಉಪತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ.
ಕೊಪ್ಪ: ವಿದ್ಯುತ್ ತಂತಿ ತುಳಿದು 5 ಹಸುಗಳು ಸಾವು
ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಗದ್ದೆ ಸಮೀದ ನೇತ್ರಕೊಂಡ ಗ್ರಾಮದಲ್ಲಿ ಗಾಳಿ-ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಮೂವರು ರೈತರಿಗೆ ಸೇರಿದ 5 ಹಸುಗಳು ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಸುಗಳ ಸಾವಿಗೆ ಸೂಕ್ತ ಪರಿಹಾರ ನೀಡುವಂತೆ ಹಸು ಕಳೆದುಕೊಂಡ ರೈತರು ಸರ್ಕಾರ ಹಾಗೂ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಕಳೆದ 4-5 ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ಗಾಳಿ ಹೆಚ್ಚಾಗಿದೆ.
ಮೂಡಿಗೆರೆಯ ಬಣಕಲ್ಲಿನಲ್ಲಿ ಮನೆ ಕುಸಿತ
ಮೂಡಿಗೆರೆ: ಮೂಡಿಗೆರೆ ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಕಾಶ್ ಭಂಡಾರಿ ಎಂಬುವರ ಮನೆ ಗೋಡೆ ಕುಸಿದು ಸಂಪೂರ್ಣ ಹಾನಿಯಾಗಿದೆ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶೃಂಗೇರಿಯಲ್ಲಿ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ
ಶೃಂಗೇರಿ: ಮೂಡಾ ಹಗರಣದಲ್ಲಿ ತಮ್ಮ ವಿರುದ್ಧ ಕೇಳಿಬಂದ ಆರೋಪದ ವಿರುದ್ಧ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡು ಮೈಸೂರು ಲೋಕಾಯುಕ್ತ ಪೋಲೀಸರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಶೀಘ್ರ ವರದಿ ನೀಡುವಂತೆ ಕೋರ್ಟ್ ಆದೇಶದ ಬೆನ್ನಲ್ಲೇ ಸಿ.ಎಂ ರಾಜೀನಾಮೆಗೆ ಒತ್ತಾಯ ಜೋರಾಗಿದೆ. ಶೃಂಗೇರಿಯ ಕುರುಬಗೇರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸಿ ಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಉಮೇಶ್ ತಲಗಾರ್,ರಾಜ್ಯ ಎಸ್ ಸಿ ಮೋರ್ಚಾ ವಕ್ತಾರರಾದ ಡಾ.ಬಿ ಶಿವಶಂಕರ್,ಪ್ರಧಾನಕಾರ್ಯದರ್ಶಿಗಳಾದ ವೇಣುಗೋಪಾಲ್,ನೂತನ್ ಕುಮಾರ್ ಕಿಗ್ಗಾ ಹಾಗೂ ಬಿಜೆಪಿ ಪ್ರಮುಖರಾದ ಹರೀಶ್ ವಿ ಶೆಟ್ಟಿ,ರತ್ನಾಕರ ಶೆಟ್ಟಿ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಬಿಜೆಪಿ ಕಾರ್ಯಕರ್ತರುಗಳು ಭಾಗವಹಿಸಿದ್ದರು.