ಧರ್ಮ ಸಂರಕ್ಷಣಾ ಕಾರ್ಯಕ್ಕೆ ಶೃಂಗೇರಿ ಶ್ರೀಗಳ ನೆರವು..!!
* ಮತಾಂತರಗೊಂಡ ಸುಮಾರು 8 ಸಾವಿರ ಹಿಂದೂ ಯುವತಿಯರ ರಕ್ಷಣೆ
* ಮರಳಿ ಮಾತೃ ಧರ್ಮಕ್ಕೆ ಕರೆತಂದ ಕೇರಳ ತಿರುವನಂತಪುರದ ಆರ್ಷ ಸಮಾಜ ಸಂಸ್ಥೆಗೆ ಶೃಂಗೇರಿ ಶ್ರೀಗಳಿಂದ ನೆರವು
ಶೃಂಗೇರಿ: ಜಗದ್ಗುರು ಶಂಕರ ಭಗವತ್ಪಾದರ ದಿವ್ಯ ಸಂಕಲ್ಪ ಶೃಂಗೇರಿ ಶಾರದಾ ಪೀಠವು ಕಳೆದ ಹಲವು ಶತಮಾನಗಳಿಂದ ಧರ್ಮ ಸಂರಕ್ಷಣೆಯ ಕಾರ್ಯವನ್ನು ನೆರವೇರಿಸಿಕೊಂಡು ಬರುತ್ತಿದ್ದು ಈ ಭವ್ಯ ಪರಂಪರೆಯಲ್ಲಿ ಬಂದ ಜಗದ್ಗುರುಗಳೆಲ್ಲರೂ ಲೋಕಕಲ್ಯಾಣಾರ್ಥವಾಗಿ ಮಾಡಿರುವ ಕಾರ್ಯಗಳೆಲ್ಲವೂ ವರ್ಣನಾತೀತವಾಗಿದೆ.ಧಾರ್ಮಿಕ ಮಾತ್ರವಲ್ಲದೆ ಶೈಕ್ಷಣಿಕ,ಆರೋಗ್ಯ ಮುಂತಾದ ಸಾಮಾಜಿಕ ಕ್ಷೇತ್ರಗಳಿಗೆ ಪೀಠವು ಸಲ್ಲಿಸಿದ ಕೊಡುಗೆ ಅಪಾರವಾದದ್ದು. ಈಗ ಪ್ರಸ್ತುತ ನೆರೆಯ ರಾಜ್ಯ, ಶಂಕರಾಚಾರ್ಯರು ಜನಿಸಿದ ಪುಣ್ಯಭೂಮಿ ಕೇರಳದಲ್ಲಿ ಮತಾಂತರದ ಪಿಡುಗು ವ್ಯಾಪಕವಾಗಿ ಹರಡುತ್ತಿದ್ದು,ತಿರುವನಂತಪುರದ ಆಚಾರ್ಯ ಮನೋಜ್ ರವರ ಆರ್ಷ ವಿದ್ಯಾ ಸಮಾಜವು ಮತಾಂತರಗೊಂಡ ಎಂಟು ಸಾವಿರಕ್ಕೂ ಅಧಿಕ ಹಿಂದೂ ಯುವತಿಯರನ್ನು ಮರಳಿ ಮಾತೃಧರ್ಮಕ್ಕೆ ಕರೆತಂದಿರುತ್ತಾರೆ.ಇದನ್ನು ಗುರುತಿಸಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು 50 ಲಕ್ಷ ರೂಪಾಯಿಗಳನ್ನು ನೆರವು ನೀಡಿ ಧರ್ಮಸಂರಕ್ಷಣಾ ಕಾರ್ಯಕ್ಕೆ ಆಶೀರ್ವಾದ ಮಾಡಿದರು.