ಅಡಿಕೆ ಆಯ್ತು ಈಗ ಕಾಳು ಮೆಣಸಿಗೂ ಕಂಟಕ!
– ಮಳೆ ಹೆಚ್ಚಳವಾಗಿರುವುದರಿಂದ ಕೊಳೆ ರೋಗ ಹೆಚ್ಚಾಯ್ತು
– ಉದುರುತ್ತಿರುವ ಮೆಣಸಿನ ಕಾಳು, ಕಾಫಿ
– ಮಲೆನಾಡು, ಕರಾವಳಿ ರೈತರಿಗೆ ಶಾಪವಾದ ಮಳೆ
NAMMUR EXPRESS NEWS
ಮಲೆನಾಡು/ ಕರಾವಳಿ: ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಧಾರ ಬೆಳೆಗಳಲ್ಲಿ ಒಂದಾದ ಅಡಿಕೆಗೆ ಈಗಾಗಲೇ ಕೊಳೆ ರೋಗಗಳಿಂದ ಸಂಕಷ್ಟ ಎದುರಾಗಿದೆ. ಈಗ ಕಾಳು ಮೆಣಸು, ಕಾಫಿ ಕೂಡ ಆತಂಕದಲ್ಲಿದೆ.
ಮಳೆಯಿಂದ ಹೆಚ್ಚಾಗುತ್ತಿರುವ ಕೊಳೆ ರೋಗ ಇನ್ನೊಂದು ಕಡೆ ಎಲೆ ಚುಕ್ಕಿ ರೋಗ ಸೇರಿದಂತೆ ಅನೇಕ ರೋಗಗಳು ಬಾಧಿಸುತ್ತಾ ಇದೆ. ಇದರಿಂದಾಗಿ ರೈತರನ್ನ ಕಂಗಾಲಾಗುವಂತ ಪರಿಸ್ಥಿತಿಗೆ ಎಡೆಮಾಡಿದೆ. ಈ ನಡುವೆ ಅಡಿಕೆ ಬೆಲೆ ಕೂಡ ಕುಸಿತವಾಗುತ್ತಿರುವುದರಿಂದ ಆತಂಕವನ್ನು ಸೃಷ್ಟಿ ಮಾಡಿದೆ.
ಈ ನಡುವೆ ಮತ್ತೊಂದು ವಾಣಿಜ್ಯ ಆಧಾರ ಬೆಳೆಯಾಗಿರುವ ಕಾಳು ಮೆಣಸು ಕೂಡ ರೋಗಕ್ಕೆ ಬಲಿಯಾಗಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಪ್ರಮುಖ ಭಾಗಗಳಾದ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಹೊಸನಗರ, ಮೂಡಿಗೆರೆ, ಸಾಗರ ಈ ಭಾಗದಲ್ಲಿ ಮಳೆ ಹೆಚ್ಚಾದ ಕಾರಣ ಮೆಣಸಿನ ಕಾಳಿನ ಬಳ್ಳಿಗಳು ಕೂಡ ಹಳದಿ ಬಣ್ಣಕ್ಕೆ ತಿರುಗಿದೆ. ಜೊತೆಗೆ ಮೆಣಸಿನ ಕಾಳಿನ ಗೊಂಚಲುಗಳು ಉದುರುತ್ತಿದೆ.
ಕರಾವಳಿ ಭಾಗದಲ್ಲೂ ಕೊಳೆ
ಉಡುಪಿ ಹಾಗೂ ದಕ್ಷಿಣ ಕನ್ನಡ ಕೂಡ ಕಾಳು ಮೆಣಸು ಬೆಳೆಯುವ ಪ್ರಮುಖ ಪ್ರದೇಶಗಳಲ್ಲೂ ಒಂದು. ಅಲ್ಲಿ ಕೂಡ ಕಾಳು ಮೆಣಸು ಉದುರುತ್ತಿದೆ.
ಮೆಣಸಿನ ಕಾಳು ಇಳುವರಿಯಲ್ಲಿ ಬಾರಿ ಕುಂಠಿತ!
ಭಾರೀ ಮಳೆ ಕಾರಣ ಈ ಬಾರಿ ಮೆಣಸಿನ ಕಾಳು ಇಳುವರಿಯಲ್ಲಿ ಬಾರಿ ಕುಂಠಿತವಾಗಿದ್ದು, ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಮಲೆನಾಡು ಭಾಗದಲ್ಲಿ ರೈತರ ಸ್ಥಿತಿ ದಿನದಿಂದ ದಿನಕ್ಕೆ ಸೋಚನೆಯೇ ಸ್ಥಿತಿ ತಲುಪುತ್ತಿದೆ. ಒಂದು ಕಡೆ ಮಳೆಯ ಹೆಚ್ಚಳವಾದರೆ ಇನ್ನೊಂದು ಕಡೆ ಬೆಳೆಯ ಕುಸಿತವೂ ಕೂಡ ಕಾರಣವಾಗಿದೆ ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಮಳೆ ಹೆಚ್ಚಳವಾದ ಕಾರಣ ಮೂರರಿಂದ ನಾಲ್ಕು ಬಾರಿ ಔಷಧವನ್ನು ಕೂಡ ಸಿಂಪಡಣೆ ಮಾಡಲಾಗಿದೆ. ಇನ್ನು ಕೂಡ ಮಳೆ ಹೆಚ್ಚಾಗಿದ್ದು ಬೆಳೆ ಉಳಿಸಿಕೊಳ್ಳುವುದು ಕೂಡ ಕಷ್ಟವಾಗಿದೆ. ಇತ್ತ ಕಾಳು ಮೆಣಸು ಕೂಡ ಉದುರುತ್ತಿರುವುದು ರೈತರನ್ನ ಆತಂಕಕ್ಕೆ ಈಡು ಮಾಡಿದೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನಿಸಬೇಕು. ತಕ್ಷಣ ಬೆಳೆ ಕಳೆದುಕೊಂಡ ರೈತರಿಗೆ ನೈಸರ್ಗಿಕ ವಿಕೋಪದಡಿ ಪರಿಹಾರ ನೀಡಬೇಕು ಎಂಬ ಒತ್ತಾಯ ರೈತರಿಂದ ಕೇಳಿ ಬಂದಿದೆ.