ಕಾಫಿ ನಾಡಲ್ಲಿ ಎಲ್ಲಾ ತಾಲೂಕಿನ ಗ್ರಾಮ ಆಡಳಿತಾಧಿಕಾರಗಳ ಅನಿರ್ದಿಷ್ಟಾವಧಿ ಮುಷ್ಕರ
* ಟೇಬಲ್, ಕುರ್ಚಿ, ಅಲ್ಮೇರ್, ಮೊಬೈಲ್ ನೀಡಲು ಪಟ್ಟು
* ಕೆಲಸದ ಒತ್ತಡ ತಪ್ಪಿಸಿ,ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಿ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೈಗೆ ಕಪ್ಪು ಬಟ್ಟೆ ಧರಿಸಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಆಯಾ ತಾಲೂಕಿನ ತಹಶೀಲ್ದಾರ್ ಕಛೇರಿ ಮುಂದೆ ಅನಿರ್ದಿಷ್ಠಾವಧಿ ಮುಷ್ಕರ ಕೈಗೊಂಡಿದ್ದಾರೆ.
ಇಲಾಖೆಯಿಂದ ಅಭಿವೃದ್ಧಿ ಪಡಿಸಿದ 17 ಕ್ಕೂ ಹೆಚ್ಚು ಮೊಬೈಲ್,ವೆಬ್ ತಂತ್ರಾಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ.
ಉತ್ತಮ ಗುಣಮಟ್ಟದ ಟೇಬಲ್,ಕುರ್ಚಿ,ಅಲ್ಮೆರಾ,ಮೊಬೈಲ್ ಫೋನ್ ಹಾಗೂ ಸರಿಯಾದ ಸಿಮ್,ಡೇಟಾ,ಲ್ಯಾಪ್ ಟಾಪ್,ಪ್ರಿಂಟರ್ಗಳನ್ನು ಕಲ್ಪಿಸಿಕೊಡು ಹಾಗೂ ಪ್ರಯಾಣ ಭತ್ಯೆಯನ್ನು 580/- ರೂ.ಗಳಿಂದ 5000/ ರೂ.ಗಳಿಗೆ ಹೆಚ್ಚಿಸಬೇಕು,ಗ್ರಾಮ ಆಡಳಿತ ಅಧಿಕಾರಿಗಳು ಒತ್ತಡದಿಂದ ಕೆಲಸ ನಿರ್ವಹಿಸುವಂತಾಗಿದೆ, ಅಭಿವೃದ್ಧಿ ಪಡಿಸಿದ ಮೊಬೈಲ್ ಹಾಗೂ ವೆಬ್ ತಂತ್ರಾಶದ ಕೆಲಸದ ಜೊತೆ ಅತಿವೃಷ್ಠಿ,ಅನಾವೃಷ್ಠಿ ಮತ್ತಿತರ ಪ್ರಮುಖ ಕೆಲಸಗಳನ್ನು ನಿರ್ವಹಿಸಬೇಕಿದೆ,ಸರ್ಕಾರಿ ರಜಾ ದಿನಗಳಲ್ಲಿ ಕೆಲಸಕ್ಕೆ ಬರಲು ಮೆಮೊ ಹಾಕಬಾರದು,ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯನ್ನು ಮೇಲ್ದರ್ಜೆಗೇರಿಸಬೇಕು,ಕೆಲಸದ ಅವಧಿಯ ಮೊದಲು ಮತ್ತು ನಂತರ ನಡೆಯುವ ಎಲ್ಲಾ ವರ್ಚುವಲ್ ಸಭೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿದರು,ವಿವಿಧ ಮೂಲ ಸೌಕರ್ಯಗಳನ್ನು ಒದಗಿಸಿ,ಗ್ರಾಮ ಆಡಳಿತಾಧಿಕಾರಿಯ ಜ್ಯೇಷ್ಠತೆಯನ್ನು ರಾಜ್ಯ ಮಟ್ಟದ ಜ್ಯೇಷ್ಠತೆಯನ್ನಾಗಿ ಪರಿಗಣಿಸಬೇಕು, ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದವರಿಗೆ ಅಂತರ್ ಜಿಲ್ಲಾ ವರ್ಗಾವಣೆಯ ಅವಕಾಶ ಕಲ್ಪಿಸಿಕೊಡಬೇಕು ಅದಕ್ಕಾಗಿ ಹೊಸ ಮಾರ್ಗಸೂಚಿ ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದರು.