ಮಲೆನಾಡ ಸಮಸ್ಯೆ ವಿರುದ್ಧ ಹೋರಾಟ!
– ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ
– ಒತ್ತುವರಿ ತೆರವು,ಕಸ್ತೂರಿ ರಂಗನ್ ವರದಿ ಜಾರಿ,ಬಿಪಿಎಲ್ ಕಾರ್ಡ್ ಅನರ್ಹ ವಿರೋಧಿಸಿ ಮನವಿ
– ಅಂಬೇಡ್ಕರ್ ಪುತ್ಥಳಿ ನಿರ್ಮಿಸಲು ಆಗ್ರಹ
NAMMUR EXPRESS NEWS
ಚಿಕ್ಕಮಗಳೂರು/ಖಾಂಡ್ಯ: ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ ಹೋಬಳಿಯಲ್ಲಿ ಕ್ಷೇತ್ರದಲ್ಲಿ ಆಗುತ್ತಿರುವ ಬಿಪಿಎಲ್ ಕಾರ್ಡ್ ಅನರ್ಹ,ಒತ್ತುವರಿ ತೆರವು,ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಖಾಂಡ್ಯ ಹೋಬಳಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಾಡ ಕಛೇರಿಯಲ್ಲಿ ಉಪ ತಹಶೀಲ್ದಾರರಿಗೆ ಪಕ್ಷಾತೀತವಾಗಿ ಮನವಿ ಸಲ್ಲಿಸಲಾಯಿತು.
ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್ಗಳು ರದ್ದಾಗುತ್ತಿದೆ,ರೈತರ ಒತ್ತುವರಿ ಭೂಮಿಯನ್ನು ತೆರವು ಮಾಡಲಾಗುತ್ತಿದೆ ಇದರಿಂದ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದೆ,ಫಾರಂ ನಂ53,57,94(ಸಿ) ಸಂಬಂಧಿಸಿದ ಯಾವುದೇ ದಾಖಲೆಗಳು ಅರ್ಹರ ಕೈಸೇರಿಲ್ಲ,ಕಸ್ತೂರಿ ರಂಗನ್ ವರದಿ ಜಾರಿಗೆ ಆಕ್ಷೇಪಣೆ ಸಲ್ಲಿಸಿ ಪಕ್ಷಾತೀತವಾಗಿ ಖಾಂಡ್ಯ ಹೋಬಳಿ ನಾಡ ಕಛೇರಿಯಲ್ಲಿ ಉಪತಹಶೀಲ್ದಾರ್ ಸುಜಾತರವರಿಗೆ ಮನವಿ ಸಲ್ಲಿಸಲಾಯಿತು.
ಅಂಬೇಡ್ಕರ್ ಪತ್ಥಳಿ ನಿರ್ಮಾಣಕ್ಕೆ ಮನವಿ..
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ದೇವದಾನ ಗ್ರಾಮ ಪಂಚಾಯ್ತಿಗೆ ತೆರಳಿ ಪಂಚಾಯ್ತಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ನಿರ್ಮಿಸುವಂತೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಿಎಸ್ಎಸ್ನ ಅಧ್ಯಕ್ಷರಾದ ರಮೇಶ್,ಕಾರ್ಯದರ್ಶಿ ದಿನೇಶ್,ಸುಂದರೇಶ್,ರಾಘವೇಂದ್ರ,ರವೀಂದ್ರ,ಲಕ್ಷ್ಮಣ್ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.