ಪೂರ್ಣೇಶ್ ಕೆಳಕೆರೆ ಸೇರಿ 6 ಮಂದಿ ತೀರ್ಥಹಳ್ಳಿ ಕೆಡಿಪಿಗೆ ನೇಮಕ
* 6 ಮಂದಿ ಆಯ್ಕೆ ಮಾಡಿ ಸರ್ಕಾರದ ಆದೇಶ ಪ್ರಕಟ
* ತೀರ್ಥಹಳ್ಳಿಯಲ್ಲಿ ಸ್ನೇಹಿತರಿಂದ ಪೂರ್ಣೇಶ್ ಅವರಿಗೆ ಸನ್ಮಾನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆಡಿಪಿ) ಸಮಿತಿಗೆ 6 ಮಂದಿಯನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಪ್ರಕಟಿಸಿದೆ.
ಮಂಡಗದ್ದೆ ಮಹೇಶ್ ಗೌಡ, ಮೇಳಿಗೆ ಪೂರ್ಣೇಶ್, ಶೇಡ್ಗರ್ ಕರುಣಾಕರ, ಸುರೇಶ್, ಜೀನಾ ವಿಕ್ಟರ್ ಡಿಸೋಜಾ, ಅನ್ನಪೂರ್ಣ ಮೋಹನ್ ಅವರುಗಳು ಕೆಡಿಪಿ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ. ‘ನೂತನ ಕೆಡಿಪಿ ಸದಸ್ಯರನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥಗೌಡರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಪೂರ್ಣೇಶ್ ಕೆಳಕೆರೆ ಅವರಿಗೆ ಸ್ನೇಹಿತರ ಸನ್ಮಾನ
ತೀರ್ಥಹಳ್ಳಿ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆಡಿಪಿ)ಸಮಿತಿಗೆ ಸರ್ಕಾರದ ನಾಮಕರಣ ಸದಸ್ಯರಾಗಿ ಆಯ್ಕೆ ಆದ ಕೆಳಕೆರೆ ಪೂರ್ಣೇಶ್ ಅವರಿಗೆ ಅಭಿಮಾನಿ ಬಳಗದಿಂದ ಅಭಿನಂದನಾ ಸನ್ಮಾನ ನಡೆಯಿತು. ತೀರ್ಥಹಳ್ಳಿ ಯುವ ನಾಯಕ ಸಾಮಾಜಿಕ ಕಳಕಳಿಯ ಹೋರಾಟಗಾರ ಬಡಬಗ್ಗರಿಗೆ ಅನ್ಯಾಯವಾದಾಗ ದ್ವನಿ ಎತ್ತಿ ನ್ಯಾಯ ಕೊಡಿಸುವ ಮುಂದಾಳು ಕೆಳಕೆರೆ ಪೂರ್ಣೇಶ್ ರವರನ್ನು ಕರ್ನಾಟಕ ರಾಜ್ಯ ಸರ್ಕಾರವು ತೀರ್ಥಹಳ್ಳಿ ತಾಲೂಕು ಪ್ರಗತಿ ಪರಿಶೀಲನಾ ಸಮಿತಿ (ಕೆಡಿಪಿ) ಸಮಿತಿಗೆ ನಾಮಕರಣ ಮಾಡಿದ್ದು ಸಂತಸದ ವಿಷಯ ಎಂದು ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.
ಕುಶಾವತಿ ಹುರ್ತುಂಡು ಹೋಟೆಲ್ ಗೆಳೆಯರ ಬಳಗದಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಮೇಳಿಗೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು, ತಾಲೂಕ್ ಪಂಚಾಯತಿಯ ಮಾಜಿ ಸದಸ್ಯರಾದ ಕೆಳಕೆರೆ ದಿವಾಕರ್, ಸಹಕಾರ ದುರೀಣ, ಗುತ್ತಿಗೆದಾರ ಮೇಳಿಗೆ ಮಂಜುನಾಥ, ಹುರ್ತುಂಡು ಹೋಟೆಲ್ ಮಾಲೀಕರಾದ ನಾಗರಾಜ್, ಕಾಂಗ್ರೆಸ್ ಪಕ್ಷದ ಯುವ ನಾಯಕ ಅಶ್ವಲ್ ಗೌಡ, ಶ್ರೀ ಮಂಜುನಾಥ ಚಾಟ್ಸ್ ಅಂಡ್ ಐಸ್ ಕ್ರೀಂ ಜ್ಯೂಸ್ ಮಾಲೀಕ ಯಡೂರು ಚೇತನ್ ,ಎಲ್ಐಸಿ ಪ್ರತಿನಿಧಿ ಆದ ಅಶ್ವಿನ್ ಪ್ರಿಂಟೋ, ಗುತ್ತಿಗೆದಾರರಾದ ದಿವೀನ್ ಮುಂತಾದರು ಕೆಳಕೆರೆ ಪೂರ್ಣೇಶ್ ರವರಿಗೆ ಅಭಿನಂದಿಸಿ ಶುಭ ಕೋರಿದರು.