- ಬೆಂಗಳೂರಿನ ವಿಧಾನ ಸೌಧದ ಗೃಹ ಕಛೇರಿ
- ನೂತನ ಗೃಹ ಸಚಿವರಿಗೆ ಅಭಿನಂದನೆ
- ತವರಿಂದ ಅನೇಕ ನಾಯಕರ ಉಪಸ್ಥಿತಿ
NAMMUR EXPRESS
ಬೆಂಗಳೂರು: ಬೊಮ್ಮಾಯಿ ನೂತನ ಸರ್ಕಾರದಲ್ಲಿ ಅತ್ಯುನ್ನತ ಸ್ಥಾನ ಪಡೆದ ಮಲೆನಾಡ ಮಗ ಆರಗ ಜ್ಞಾನೇಂದ್ರ ಶುಕ್ರವಾರ ವಿಧಾನ ಸೌಧದ ತಮ್ಮ ಕಛೇರಿಗೆ ಪದಾರ್ಪಣೆ ಮಾಡಿದರು.
ಜ್ಞಾನೇಂದ್ರ ಅವರು ಕಚೇರಿಗೆ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳಿಂದ ಪ್ರವೇಶ ಮಾಡಿದ ದೃಶ್ಯ ಕಂಡುಬಂತು.
ರಾಜ್ಯದ ಗೃಹ ಸಚಿವರು ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಶ್ರಾವಣ ಮಾಸದ ಶುಕ್ರವಾರ ಶುಭ ದಿನದಂದು ಬೆಂಗಳೂರಿನ ವಿಧಾನಸೌಧದಲ್ಲಿ ತಮಗೆ ನೀಡಿರುವಂತಹ ಗೃಹ ಕಚೇರಿ ಪೂಜೆ ಸಲ್ಲಿಸುವುದರೊಂದಿಗೆ ಅಭಿಮಾನಿ ವರ್ಗ ಮತ್ತು ಅಧಿಕಾರಿಗಳೊಂದಿಗೆ ಕಚೇರಿಗೆ ಪ್ರವೇಶ ಮಾಡಿ ಕಾರ್ಯ ಪ್ರಾರಂಭ ಮಾಡಿದ್ದಾರೆ. ಈಗಾಗಲೇ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿರುವ ನಾಯಕರ ಕಚೇರಿ ಇದೀಗ ಇಡೀ ರಾಜ್ಯದ ಗಮನ ಸೆಳೆದಿದೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು.