Categories
ತೀರ್ಥಹಳ್ಳಿ

ಸಹ್ಯಾದ್ರಿ ಶಾಲೆ, ಕಾಲೇಜು ಪೋಷಕರ ದಿನಾಚರಣೆ ರಂಗು!

ಸಹ್ಯಾದ್ರಿ ಶಾಲೆ, ಕಾಲೇಜು ಪೋಷಕರ ದಿನಾಚರಣೆ ರಂಗು!
– ಕ್ರೀಡಾ ಸ್ಪರ್ಧೆಗಳಲ್ಲಿ ಹುರುಪಿನಿಂದ ಭಾಗವಹಿಸಿದ ಪೋಷಕರು
– ಸಹ್ಯಾದ್ರಿ ಬೆಟ್ಟಮಕ್ಕಿ ಶಾಲಾ ಮೈದಾನದಲ್ಲಿ ಕ್ರೀಡಾಕೂಟ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಸಹ್ಯಾದ್ರಿ ಪ್ರಾಥಮಿಕ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜು ಪೋಷಕರ ದಿನಾಚರಣೆ ಅಂಗವಾಗಿ ಪೋಷಕರಿಗೆ ನವೆಂಬರ್ 24ನೇ ಭಾನುವಾರ ಬೆಳಿಗ್ಗೆ ಸಹ್ಯಾದ್ರಿ ಐ.ಸಿ.ಎಸ್.ಇ. ಶಾಲಾ ಆವರಣ, ಬೆಟ್ಟಮಕ್ಕಿಯಲ್ಲಿ ಸಂಭ್ರಮದಿಂದ ನಡೆಯಿತು. ತೀರ್ಥಹಳ್ಳಿಯಲ್ಲಿ ಪೋಷಕರಿಗಾಗಿ ವಿವಿಧ ಮನೋರಂಜನಾ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಬಾಳೇಹಳ್ಳಿ ಪ್ರಭಾಕರ್ ವಹಿಸಿದ್ದು, ಹಿರಿಯ ಬಾಲ್‌ಬ್ಯಾಡ್ಮಿಂಟನ್ ಕ್ರೀಡಾಪಟು ಮತ್ತು ಜೀವವಿಮಾ ಪ್ರತಿನಿಧಿ ರೇವಣ್ಣಸ್ವಾಮಿ ಜಿ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಡಿ. ನಾಗರಾಜ,ಪಟ್ಟಣ ಪಂಚಾಯತ್ ತೀರ್ಥಹಳ್ಳಿ ಸದಸ್ಯರಾದ ಜ್ಯೋತಿ ಗಣೇಶ್ ಭಾಗವಹಿಸಲಿದ್ದಾರೆ. ಒಕ್ಕಲಿಗರ ಸಂಘದ ನಿರ್ದೇಶಕರಾದ ಸುಧೀರ್ ಬಿ.ಬಿ. ಹೆಗ್ಗೋಡು,ಚಂದವಳ್ಳಿ ಸೋಮಶೇಖರ್, ಸುಜನಿ, ಲೋಕೇಶ್, ಬಂಡೆ ವೆಂಕಟೇಶ್, ಆದರ್ಶ ಗುಡ್ಡೇಕೇರಿ ,ಕೆರೆಕೊಪ್ಪ ವಿರೇಂದ್ರ, ಕೃಷ್ಣಮೂರ್ತಿ, ಶಶಿಧರ್ ಎಂ ಆರ್, ಧನ್ಯ ಅಶ್ವಲ್, ಸುನಿಲ್ ಆಡಿನಸರ, ಶೈಲಾ, ಸಂದೀಪ್ ಕುಡುಮಲ್ಲಿಗೆ, ಚೇತನಾ ನಂದನ್, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ತೀರ್ಥಹಳ್ಳಿ,
ಆಡಳಿತಾಧಿಕಾರಿ ಪ್ರಕಾಶ್, ಪ್ರಾಂಶುಪಾಲರಾದ ಗುರುರಾಜ್, ಮುಖ್ಯೋಪಾಧ್ಯಾಯ ಅಗ್ನಸ್ ಮೆಂಡೋನ್ಸಾ ಹಾಗೂ ಬೋಧಕ ಮತ್ತು ಬೋಧಕೇತರ ವೃಂದ ಇದ್ದರು.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.