ಡಾ. ಗೋವಿಂದ ಬಾಬು ಅವರ ಮತ್ತೊಂದು ಸೂರು ಅರ್ಪಣೆ
– ಬಡವರು, ನಿರ್ಗತಿಕರಿಗೆ ಮನೆ ಕನಸು ನನಸು ಮಾಡಿದ ಜನ ಸೇವಕ
– ನ. 20ರಂದು ಸಣ್ಣ ಗುಡಿಸಲಲ್ಲಿ ಜೀವನ ಕಳೆಯುತ್ತಿದ್ದ ಅಜ್ಜಿಗೆ ಸೂರು
NAMMUR EXPRESS NEWS
ಬೈಂದೂರು: ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ವತಿಯಿಂದ 16ನೇ ಸೂರು ನಿರ್ಮಾಣಗೊಂಡಿದ್ದು ಹಸ್ತಾಂತರ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಹೊಳೆತೋಟ ಗರಡಿ ಹತ್ತಿರ ಹೊಸ ಮನೆ ನಿರ್ಮಾಣವಾಗಿದೆ. ಇನ್ನು 10 ಮನೆ ನಿರ್ಮಾಣ ಹಂತದಲ್ಲಿವೆ. ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಶೈಕ್ಷಣಿಕ ಸಾಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷರು, ಸಮಾಜ ಸೇವಕರು, ಶಿಕ್ಷಣ ಪ್ರೇಮಿ ಕರಾವಳಿ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿಯವರು ಟ್ರಸ್ಟ್ ಮೂಲಕ ತೀರ ಅಗತ್ಯ ಉಳ್ಳವರಿಗೆ ಉಚಿತ ಶಾಶ್ವತ ಸೂರು ನಿರ್ಮಿಸಿ ಕೊಡುವ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದ್ದು ಅದರಂತೆ 16ನೇ ಸುಸಜ್ಜಿತ ಮನೆ ನಿರ್ಮಿಸಿ ಶ್ರೀ ವರಲಕ್ಷ್ಮಿ ನಿಲಯದ ಪ್ರವೇಶೋತ್ಸವವು ದಿನಾಂಕ 20.11.2024 ಬುಧವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠ ಸಾರಂಗನ ಜಡ್ಡು ಹೊಸನಗರ ಇದರ ಶ್ರೀ ಯೋಗೇಂದ್ರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಗೋವಿಂದ ಬಾಬು ಪೂಜಾರಿಯವರಿಂದ ಮನೆಯ ಹಸ್ತಾಂತರ ಕಾರ್ಯಕ್ರಮವು ಜರುಗಲಿದ್ದು ಮುಖ್ಯ ಅತಿಥಿಗಳಾಗಿ ಪಿ ಎಸ್ ಪ್ರಕಾಶ್ ಸಿಇಓ ಹೊಸದಿಗಂತ ದಿನ ಪತ್ರಿಕೆ, ವಿಶ್ವೇಶ್ವರ ಅಡಿಗ ನಿವೃತ್ತ ಮುಖ್ಯೋಪಾಧ್ಯಾಯರು ಬಿಜೂರು, ದೀಪಕ್ ಕುಮಾರ್ ಶೆಟ್ಟಿ ಕ್ಷೇತ್ರ ಅಧ್ಯಕ್ಷರು ಬಿಜೆಪಿ ಬೈಂದೂರು ವಿಧಾನಸಭಾ ಕ್ಷೇತ್ರ, ಬಿಎಸ್ ಸುರೇಶ್ ಶೆಟ್ಟಿ, ಅಧ್ಯಕ್ಷರು ಸಮೃದ್ಧ ಜನ ಸೇವಾಚಾರಿ ಟೇಬಲ್ ಟ್ರಸ್ಟ್, ಎಸ್ ರಾಜು ಪೂಜಾರಿ,ಅಧ್ಯಕ್ಷರು ಮರವಂತೆ ಬಡಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ, ಗೌರಿ ದೇವಾಡಿಗ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಊರಿನ ಹಿರಿಯರು ಗ್ರಾಮಸ್ಥರು ಪಾಲ್ಗೊಂಡು ನೂತನ ಗೃಹ ಪ್ರವೇಶಕ್ಕೆ ಸಾಕ್ಷಿಯಾಗಲಿದ್ದಾರೆ.
ಸಣ್ಣ ಗುಡಿಸಲಲ್ಲಿ ಜೀವನ ಕಳೆಯುತ್ತಿದ್ದ ಅಜ್ಜಿಗೆ ಸೂರು
ಹೊಳೆತೋಟ ಗರಡಿ ಹತ್ತಿರ ಇರುವ ದೊಟ್ಟಮ್ಮ ಎಂಬ ಅಜ್ಜಿ ತನ್ನ ಬುದ್ದಿಮಾಂಧ್ಯ ಮಗಳು ಮತ್ತು ಮಗನ ಜೊತೆ ಒಂದು ಸಣ್ಣ ಗುಡಿಸಲಿ ನಲ್ಲಿ ಸುಮಾರು ವರುಷಗಳಿಂದ ವಾಸಿಸುತ್ತಿದ್ದಾರೆ. ಆದರೆ ದೊಟ್ಟು ಅಜ್ಜಿಯ ಕನಸು “ತನಗೊಂದು ವಾಸಿಸಲು ಒಳ್ಳೆಯ ಮನೆ ಬೇಕು” ಎಂಬುದಾಗಿತ್ತು ಅವರ ಈ ಪರಿಸ್ಥಿತಿಯನ್ನು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟನ ಟ್ರಸ್ಟಿ ಮಾಲತಿ ಗೋವಿಂದ ಪೂಜಾರಿಯವರು ನೋಡಿ, ತನ್ನ ಪತಿ ಗೋವಿಂದ ಬಾಬು ಪೂಜಾರಿಯವರ ಗಮನಕ್ಕೆ ತಂದರು. ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಯಾದ ಶ್ರೀ ಗೋವಿಂದ ಬಾಬು ಪೂಜಾರಿಯವರು ಕೂಡಲೇ ದೊಟ್ಟಮ್ಮ ಅಜ್ಜಿಯ ಮನೆಗೆ ಭೇಟಿ ನೀಡಿ, ಅಜ್ಜಿಯ ಪರಿಸ್ಥಿತಿ ಕಂಡು ಅಜ್ಜಿಗೆ ಒಂದು ಒಳ್ಳೆಯ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿದರು. ಇಂದು ಮಾತು ಕೊಟ್ಟಂತೆ, ಮನೆ ನಿರ್ಮಿಸಿಕೊಟ್ಟರು.