Categories
ಕರಾವಳಿ

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ ಮಕ್ಕಳ ದಿನದ ಸಂಭ್ರಮ

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ ಮಕ್ಕಳ ದಿನದ ಸಂಭ್ರಮ
– ವಿವಿಧ ಆಟ: ಬಹುಮಾನ ವಿತರಣೆ: ಮಕ್ಕಳ ಖುಷಿ
– ಕಾರ್ಕಳದ ವಿವಿಧ ಸಂಘ ಸಂಸ್ಥೆಗಳ ಸಹಯೋಗ

NAMMUR EXPRESS NEWS
ಕಾರ್ಕಳ : ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ ನ.14 ರಂದು ಮಕ್ಕಳ ದಿನಾಚರಣೆಯನ್ನು ಗುಂಡ್ಯಡ್ಕ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು. ಆ ಪ್ರಯುಕ್ತ ನ.13ರಂದು ಅಂಗನವಾಡಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಮತ್ತು 0-2 ವರ್ಷದ ಮಕ್ಕಳಿಗೆ ಆರೋಗ್ಯವಂತ ಶಿಶು ಸ್ಪರ್ಧೆಯನ್ನು ನಡೆಸಲಾಗಿತ್ತು. ವಿಜೇತರಾದ ಪುಟಾಣಿ ಮಕ್ಕಳಿಗೆ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ ಬಹುಮಾನ ವಿತರಿಸಲಾಯಿತು. ಸ್ಥಳೀಯ ಸ್ಟಾರ್‌ ಕ್ರಿಕೆಟ್‌ ತಂಡವು ಮಕ್ಕಳಿಗೆ ಪುಸ್ತಕ, ಸ್ಲೇಟ್‌ ಮತ್ತು ಉಪಹಾರದ ವ್ಯವಸ್ಥೆ ಮತ್ತು ಲಯನ್ಸ್‌ ಸಿಟಿ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು. ಲಯನ್ಸ್‌ ಸಿಟಿ ಅಧ್ಯಕ್ಷೆ ಜ್ಯೋತಿ ರಮೇಶ್‌, ಕಾರ್ಯದರ್ಶಿ ರಘುನಾಥ್‌ ಕೆ.ಎಸ್.‌, ಕೋಶಾಧಿಕಾರಿ ಟಿ.ಕೆ. ರಘುವೀರ್‌, ಬಾಲ ವಿಕಾಸ ಸಮಿತಿಯ ಹರೀಶ್‌, ಸ್ಟಾರ್‌ ಕ್ರಿಕೆಟ್‌ ತಂಡದ ಸದಸ್ಯರು ಉಪಸ್ಥಿತರಿದ್ದರು. ಶುಭಾ ಕಿಶೋರ್‌ ಪ್ರಾರ್ಥಿಸಿ, ಅಂಗನವಾಡಿ ಕಾರ್ಯಕರ್ತೆ ಶಾಲಿನಿ ಸ್ವಾಗತಿಸಿದರು. ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಬಿಒಡಿ ಸದಸ್ಯ ನಿಹಾಲ್‌ ಶೆಟ್ಟಿ ಜಕ್ಕನ್‌ಮಕ್ಕಿ ಕಾರ್ಯಕ್ರಮ ನಿರ್ವಹಿಸಿದರು.

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.