ಕರ್ನಾಟಕ ಟಾಪ್ ನ್ಯೂಸ್
– ಅಜ್ಜಿ ರೇಪ್ ಮಾಡಲು ಹೋಗಿ, ಅಜ್ಜ ಅಜ್ಜಿ ಡಬಲ್ ಮರ್ಡರ್!
– ಚಿಕ್ಕಮಗಳೂರಲ್ಲಿ ಡಬಲ್ ಮರ್ಡರ್ ಮಾಡಿದ ಸೈಕೊ!
– ಎಸ್ಸಾರ್ ಗ್ರೂಪ್ ಸಹ-ಸಂಸ್ಥಾಪಕ ಶಶಿಕಾಂತ್ ರೂಯಾ ವಿಧಿವಶ
– ಬೆಂಗಳೂರು: ಸ್ನಾನಕ್ಕೆ ಹೋಗಿದ್ದ ಮಹಿಳೆ ನಿಗೂಢ ಸಾವು!
– ಬೆಂಗಳೂರು: ಕಾರಿನ ಟೈಯರ್ ಹರಿದು ಮಗು ದುರ್ಮರಣ
– ಹೈದರಾಬಾದ್: ಪೂರಿ ತಿನ್ನಲು ಹೋಗಿ 11ರ ಬಾಲಕ ಸಾವು!
NAMMUR EXPRESS NEWS
ನವದೆಹಲಿ: ಭಾರತದ ಬಿಲಿಯನೇರ್ಗಳಲ್ಲಿ ಒಬ್ಬರೆನಿಸಿದ್ದ ಹಾಗೂ ಎಸ್ಸಾರ್ ಗ್ರೂಪ್ನ ಸಹ-ಸಂಸ್ಥಾಪಕರಾದ ಶಶಿಕಾಂತ್ ರೂಯಾ ನ. 25ರಂದು ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರ ಕುಟುಂಬ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ ಮಾಹಿತಿ ಪ್ರಕಾರ ಮಧ್ಯರಾತ್ರಿ 11:55ಕ್ಕೆ ಕೊನೆಯುಸಿರೆಳೆದಿದ್ದಾರೆ. ಇತ್ತೀಚಿನ ವರ್ಷಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಚಿಕಿತ್ಸೆಗಾಗಿ ಅಮೆರಿಕಕ್ಕೂ ಹೋಗಿದ್ದರು. ಕಳೆದ ತಿಂಗಳಷ್ಟೇ ಅವರು ಭಾರತಕ್ಕೆ ವಾಪಸ್ಸಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು, ಉದ್ಯಮಿಗಳು ಶಶಿ ರೂಯಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ‘ಉದ್ಯಮ ವಲಯದಲ್ಲಿ ಶಶಿಕಾಂತ್ ರೂಯಾ ಅವರದ್ದು ಮೇರು ವ್ಯಕ್ತಿತ್ವ. ತಮ್ಮ ಬದ್ಧತೆಯಿಂದ ಅವರು ಭಾರತದಲ್ಲಿ ಬಿಸಿನೆಸ್ ಸ್ವರೂಪವನ್ನು ಬದಲಿಸಿದ್ದರು. ಅವರ ಸಾವು ನಿಜಕ್ಕೂ ಬೇಸರ ತಂದಿದೆ. ಅರ ಕುಟುಂಬ ಹಾಗೂ ಪ್ರೀತಿಪಾತ್ರರಿಗೆ ನನ್ನ ಸಂತಾಪಗಳಿರುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಶಿ ರೂಯಾ ಅವರು ದೇಶ ವಿದೇಶಗಳಲ್ಲಿ ಹಲವು ಉದ್ಯಮ ಸಂಘಟನೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ಭಾರತೀಯ ವಾಣಿಜ್ಯ ಮತ್ತು ಉದ್ಯಮ ಚೇಂಬರ್ಸ್ನ ಮ್ಯಾನೇಜಿಂಗ್ ಕಮಿಟಿಯಲ್ಲಿ ಅವರು ಇದ್ದರು. ಭಾರತ ಅಮೆರಿಕ ಜಂಟಿ ಬಿಸಿನೆಸ್ ಮಂಡಳಿಯ ಅಧ್ಯಕ್ಷರಾಗಿದ್ದರು. ಭಾರತೀಯ ಹಡಗು ಮಾಲೀಕರ ಸಂಘದ ಅಧ್ಯಕ್ಷರಾಗಿದ್ದರು. ಪ್ರಧಾನಿಗಳ ಇಂಡೋ ಯುಎಸ್ ಸಿಇಒ ಫೋರಂನ ಸದಸ್ಯರಾಗಿದ್ದರು. ಭಾರತ ಜಪಾನ್ ಬಿಸಿನೆಸ್ ಕೌನ್ಸಿಲ್ನಲ್ಲೂ ಸದಸ್ಯರಾಗಿದ್ದರು.
* ಬೆಂಗಳೂರು: ಸ್ನಾನಕ್ಕೆ ಹೋಗಿದ್ದ ಮಹಿಳೆ ನಿಗೂಢ ಸಾವು!
ಬೆಂಗಳೂರು: ಸಂಬಂಧಿಕರ ಮನೆಗೆ ಆಗಮಿಸಿದ್ದ ಮಹಿಳೆಯೊಬ್ಬರು ಸ್ನಾನಕ್ಕೆ ಹೋಗಿದ್ದಾಗ ಬಾತ್ರೂಮ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಡೇಪೇಟೆಯಲ್ಲಿ ನಡೆದಿದೆ. ಮಹಿಳೆಯ ಮುಖದಲ್ಲಿ ಪರಚಿದ ಗಾಯಗಳಾಗಿದ್ದು, ಮೃತ ಮಹಿಳೆಯನ್ನು ಲಕ್ಷ್ಮಿ (25) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ತಿರುಪತಿ ಮೂಲದ ಮಹಿಳೆ ತನ್ನ ಪತಿಯೊಂದಿಗೆ ಮಲ್ಲೇಶ್ವರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಬಳಿಕ ಅಡೇಪೇಟೆಯಲ್ಲಿರುವ ಸಂಬಂಧಿ ಸುಹಾಸಿನಿ ಎಂಬುವವರ ಮನೆಗೆ ತೆರಳಿದ್ದರು.ಮನೆಯಲ್ಲಿ ಬಾತ್ರೂಮ್ ನಲ್ಲಿ ನಗ್ನ ಹಾಗೂ ಮುಖದಲ್ಲಿ ಪರಚಿದ ಗಾಯಗಳಾಗಿರುವ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ಈ ಸಾವು ನೆಲಮಂಗಲ ಟೌನ್ ಪೊಲೀಸರಿಗೆ ತಲೆನೋವಾಗಿದೆ. ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಪ್ರಾಥಮಿಕ ತನಿಖೆಯಲ್ಲಿ ಸಾವಿಗೆ ಕಾರಣ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ನಿಜಾಂಶ ಬೆಳಕಿಗೆ ಬರಲಿದೆ.
* ಬೆಂಗಳೂರು: ಕಾರಿನ ಟೈಯರ್ ಹರಿದು 2 ವರ್ಷದ ಮಗು ದುರ್ಮರಣ
ಬೆಂಗಳೂರು: ಕಾರು ಡಿಕ್ಕಿಯಾಗಿ 2 ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಆನೇಕಲ್ ಪಟ್ಟಣದ ಶನೇಶ್ವರ ದೇವಸ್ಥಾನದ ಸಮೀಪ ನಡೆದಿದೆ. ಬೆಂಗಳೂರಿನ ಕಡಲೆಕಾಯಿ ಪರಿಷೆಗೆ ತನ್ನ ಪೋಷಕರ ಜೊತೆ ಬಂದಿದ್ದ ಎರಡು ವರ್ಷದ ಮಗು ಏಕಾಶ್ ಈ ಅಪಘಾದಲ್ಲಿ ದುರ್ಮರಣ ಹೊಂದಿದೆ. ಮಗುವಿನ ದೇಹದ ಮೇಲೆ ಕಾರಿನ ಟೈಯರ್ ಹರಿದ ಕಾರಣ ಮಗು ಸ್ಥಳದಲ್ಲೇ ಸಾವನ್ನಪಿದ್ದು, ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಚಿಕ್ಕಮಗಳೂರು: ಅಜ್ಜಿ ರೇಪ್ ಮಾಡಲು ಹೋಗಿ, ಅಜ್ಜ ಅಜ್ಜಿ ಡಬಲ್ ಮರ್ಡರ್ ಮಾಡಿದ ಸೈಕೊ!
ಚಿಕ್ಕಮಗಳೂರು: ಅಜ್ಜ ಅಜ್ಜಿ ಡಬಲ್ ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ ಸೈಕೊ ಕ್ಯಾಬ್ ಡ್ರೈವರ್ ನನ್ನು ಘಟನೆ ನಡೆದ 48 ಗಂಟೆಗಳ ಒಳಗೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು ಪೊಲೀಸರು ಬಂಧಿಸಿದ್ದಾರೆ. ಅಜ್ಜಿ ರೇಪ್ ಮಾಡಲು ಹೋಗಿ ಅಜ್ಜ ಅಜ್ಜಿ ಇಬ್ಬರನ್ನೂ ಮುಗಿಸಿದ ನಿಶಾಂತ್ ಕೊಲೆಗೆ ಕಾರಣವಾದ ರೋಚಕತೆಯನ್ನು ಪೊಲೀಸರು ಕೊನೆಗೂ ಬಾಯಿ ಬಿಡಿಸಿದ್ದಾರೆ. ನ. 22 ರಂದು ಬೆಳ್ಳಂಬೆಳಗ್ಗೆ ಮುತ್ತೋಡಿ ಅಭಯಾರಣ್ಯಕ್ಕೆ ಹೊಂದಿಕೊಂಡಿರೋ ಕೊಳಗಾಮೆ ಗ್ರಾಮದ ತೋಟದ ಲೈನ್ ನಲ್ಲಿ ಕೂಲಿ ಕಾರ್ಮಿಕರಾದ ಬಸಪ್ಪ, ಲಲತಾ ಎನ್ನುವ ವೃದ್ದ ದಂಪತಿಗಳು ಹೆಣವಾಗಿ ಬಿದ್ದಿದ್ದರು.
ನಿಶಾಂತ್ ವೃದ್ದ ದಂಪತಿಗಳಿಗೆ ಹತ್ತಿರದ ಸಂಬಂಧಿ ಎನ್ನುವ ಮಾಹಿತಿಯೂ ಪೊಲೀಸರಿಗೆ ಲಭ್ಯವಾಯಿತು. ಕೊಲೆ ನಡೆದಿದ್ದು ಹಣಕ್ಕಾಗಿ ಅಲ್ಲ, ಅತ್ಯಾಚಾರಕ್ಕೆ ಯತ್ನಿಸಿದಾಗ ವಿರೋಧ ಪಡಿಸಿದ ಇಬ್ಬರನ್ನು ಕೊಂದು ಪರಾರಿಯಾಗಿದ್ದ ಅನ್ನೋದು ತಿಳಿದು ಬಂದಿದೆ. ಮಾರಕ ಕಾಯಿಲೆಗೆ ತುತ್ತಾಗಿದ್ದ ಎಂದು ಸ್ನೇಹಿತರು ಹೇಳಿದ್ದರಿಂದ ಅಜ್ಜಿಯನ್ನು ರೇಪ್ ಮಾಡಲು ಮುಂದಾಗಿದ್ದ ಇವನ ಸೈಕೊ ಟ್ರೀಟ್ ಮೆಂಟ್ ಗೆ ಪೊಲೀಸರಿಗೆ ಬೆಚ್ಚಿ ಬಿದ್ದಿದ್ದಾರೆ. ರಾತ್ರೋರಾತ್ರಿ ಹತ್ಯೆ ಮಾಡಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಪಾಪಿಯನ್ನು ಮಲ್ಲಂದೂರು ಪಿಎಸ್ಐ ಗುರು ಸಜ್ಜನ್ ನೇತೃತ್ವದ ತಂಡ ಬಂಧಿಸಿದ್ದಾರೆ.
* ಹೈದರಾಬಾದ್: ಮೂರು ಪೂರಿ ಒಟ್ಟಿಗೆ ತಿನ್ನಲು ಹೋಗಿ 11ರ ಬಾಲಕ ಸಾವು
ಹೈದರಾಬಾದ್: 11 ವರ್ಷದ ಬಾಲಕ ಪೂರಿ ತಿಂದು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಸಿಕಂದರಾಬಾದ್ನ ಶಾಲೆಯೊಂದರಲ್ಲಿ ನಡೆದಿದೆ. ಮೃತ ಬಾಲಕನನ್ನು 6ನೇ ತರಗತಿಯ ವಿಕಾಸ್ ಜೈನ್ ಎಂದು ಗುರುತಿಸಲಾಗಿದೆ.
ಸಿಕಂದರಾಬಾದ್ನ ತಿವೋಲಿ ಥಿಯೇಟರ್ ಬಳಿ ಇರುವ ಶಾಲೆಯಲ್ಲಿ ವಿಕಾಸ್ ಜೈನ್ 6ನೇ ತರಗತಿಯಲ್ಲಿ ಓದುತ್ತಿದ್ದ. ಮನೆಯಿಂದ ತಂದ ಪೂರಿಯನ್ನು ಮಧ್ಯಾಹ್ನ ಊಟದ ಸಮಯದಲ್ಲಿ ತಿನ್ನುವಾಗ ಈ ಘಟನೆ ಸಂಭವಿಸಿದೆ.