18ನೇ ವರ್ಷದ ಶ್ರೀ ಸುಬ್ರಮಣ್ಯ ಷಷ್ಠಿ ದೀಪೋತ್ಸವ ಹಾಗೂ ಜಾತ್ರಾ ಮಹೋತ್ಸವ!!
– ವಿದ್ಯುತ್ ದೀಪಾಲಂಕಾರ ಹಾಗೂ ವಿಶೇಷ ಹೂವಿನ ಅಲಂಕಾರ!!
– 5 ಮೇಳಗಳ ಕೂಡಾಟ ಯಕ್ಷಗಾನ, 150 ಜನರಿಂದ ಸಾಂಸ್ಕೃತಿಕ ಕಾರ್ಯಕ್ರಮ!!
NAMMUR EXPRESS NEWS
ಶ್ರೀ ಕ್ಷೇತ್ರ ನಾಗದೇವತೆ ರಾಮನಸರ-ಹುಂಚದಕಟ್ಟೆ-ತೀರ್ಥಹಳ್ಳಿ ತಾಲ್ಲೂಕಿನಲ್ಲಿ
ಡಿ.07 ರ ಶನಿವಾರದಂದು18ನೇ ವರ್ಷದ ಸುಬ್ರಮಣ್ಯ ಷಷ್ಠಿ ದೀಪೋತ್ಸವ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಿ.07 ರ ಶನಿವಾರ ಬೆಳಿಗ್ಗೆ 5 ಗಣಪತಿಗಳಿಗೆ ಗಣಹೋಮ ಕಲಾತತ್ವ, ಅಧಿವಾಸ ಹೋಮ, ಪಂಚ ವಿಂಶಶಿ ಕಲಶತತ್ವ 108 ಕಲವಾಭಿಷೇಕ ಹಾಗೂ ಪೂರ್ಣಾಹುತಿ, ಮಹಾಮಂಗಳಾರತಿ ನಾಗರವಾದ್ಯ, ಚಂಡೆ ಇತರೆ ವಾದ್ಯದೊಂದಿಗೆ ನಾಗದೇವತೆಯ ದರ್ಶನ ಹಾಗೂ ಪ್ರಸಾದ ವಿನಿಯೋಗ, ದೇವತಾ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾ ಮಂಗಳಾರತಿ, ಜೊತೆಗೆ ಶ್ರೀಕ್ಷೇತ್ರ ಮಂದಾರ್ತಿ ಇವರಿಂದ 5 ಮೇಳಗಳ ಕೂಡಾಟ ಯಕ್ಷಗಾನ 2 ಗಂಟೆಯಿಂದ ನಡೆಯಲಿದ್ದು, 150 ಜನರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅನ್ನಸಂತರ್ಪಣೆ ಮಧ್ಯಾಹ್ನ 1:30 ರಿಂದ ರಾತ್ರಿ 1:30ರವರೆಗೆ 70 ಕಲಾ ತಂಡದಿಂದ ಕಲಾ ಪ್ರದರ್ಶನ ಹಾಗೂ 3:00 ಗಂಟೆಯಿಂದ ರಾಜಬೀದಿ ಉತ್ಸವ ಮತ್ತು ವಿವಿಧ ಕಾರ್ಯಕ್ರಮಗಳು ಜರುಗಲಿದೆ. ಸಂಜೆ 06:00ರಿಂದ ಆಶ್ಲೇಷ ಬಲಿ ಹಾಗೂ ಮಹಾಮಂಗಳಾರತಿ ಮತ್ತು ದೀಪಹಚ್ಚುವ ಕಾರ್ಯಕ್ರಮ ಕರ್ಪೂರ ಬೆಳಕಿನೊಂದಿಗೆ ನಾಗರವಾದ್ಯ, ಚಂಡೆ ಇತರೆ ವಾದ್ಯದೊಂದಿಗೆ ನಾಗದೇವತೆಯ ದರ್ಶನ, ಪ್ರಸಾದವಿನಿಯೋಗ ಹಾಗೂ ಅನ್ನಸಂತರ್ಪಣೆ ಜೊತೆಗೆ ರಾತ್ರಿ 08:00ಕ್ಕೆ ಆಕರ್ಷಕ ಹಸಿರು ಸಿಡಿಮದ್ದಿನ ಭರ್ಜರಿ ಪ್ರದರ್ಶನ, ಇತರೆ ಧಾರ್ಮಿಕ ಕಾರ್ಯಕ್ರಮಗಳು, ಭಕ್ತಾಧಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೇವೆ ಮಾಡುವುದರೊಂದಿಗೆ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ನಾಗದೇವತೆಯ “ಸಿರಿಮುಡಿಗಂಧ” ಪ್ರಸಾದ ಸ್ವೀಕರಿಸಿ, ಕೃತಾರ್ಥರಾಗಬೇಕಾಗಿ ಈ ಮೂಲಕ ಕೋರಲಾಗಿದೆ. ಭಕ್ತಾಧಿಗಳಿಂದಲೇ ನಡೆಯುವಂತಹ ಸ್ಥಳವೇ ರಾಮನಸರ.
ಕಾರ್ಯಕ್ರಮದ ಯಾವುದೇ ರೀತಿಯ ಮಾಹಿತಿಗಾಗಿ ವ್ಯವಸ್ಥಾಪಕರು : ಶ್ರೀಮತಿ ಸುನಂದಮ್ಮ ಮತ್ತು ಮಕ್ಕಳು.
ರಾಮನಸರ-ಹುಂಚದಕಟ್ಟೆ-ತೀರ್ಥಹಳ್ಳಿ ತಾಲ್ಲೂಕು
7204237965, 9902190615 ಸಂಪರ್ಕಿಸಬಹುದಾಗಿದೆ.