ತೀರ್ಥಹಳ್ಳಿಯಲ್ಲಿ ಡಿ.8ಕ್ಕೆ ” ಅರ್ಜುನ” ಕಿರು ಚಿತ್ರ ಪ್ರದರ್ಶನ!
– ಇದೀಗ 40ನೇ ಪ್ರದರ್ಶನಕ್ಕೆ ಸಜ್ಜು: ಸರ್ವರಿಗೂ ಸ್ವಾಗತ
– ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವ ಭಾವನಾತ್ಮಕ ಕಥೆ
– ಸಿನಿಮಾ ವೀಕ್ಷಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ
NAMMUR EXPRESS NEWS
ತೀರ್ಥಹಳ್ಳಿ: ಆದರ್ಶ್ ರಾವ್ ಮತ್ತು ಶಶಿ ಶೆಟ್ಟಿ ಅವರ ನಿರ್ಮಾಪಕದಲ್ಲಿ, ಶ್ರೀಧರ್ ರಂಗಾಯಣ ಅವರ ನಿರ್ದೇಶನದಲ್ಲಿ, ಪ್ರಿನ್ಸ್ ಜೋಸೆಫ್ ಅವರ ಸಂಗೀತದಲ್ಲಿ ನಿರ್ಮಾಣಗೊಂಡಿರುವ ಅರ್ಜುನ ಕಿರು ಚಿತ್ರ ಇದೀಗ 40ನೇ ಪ್ರದರ್ಶನಕ್ಕೆ ಸಿದ್ಧವಾಗುತ್ತಿದೆ. ರಾಜ್ಯದ ಅನೇಕ ಕಡೆ 39 ಪ್ರದರ್ಶನ ಮುಗಿಸಿ ಇದೀಗ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಡಿಸೆಂಬರ್ 8ರ ಭಾನುವಾರ 4 ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಂಡಿದೆ. ಮಲೆನಾಡ ಹುಡುಗ ಶ್ರೀಧರ್ ರಂಗಾಯಣ ನಿರ್ದೇಶಕರಾಗಿರುವ ಈ 1 ಗಂಟೆ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಭಾನುವಾರ 3.00 – 4.30, 5.00-6:30, 7:00-8:30 ಸಮಯಕ್ಕೆ ಪ್ರದರ್ಶನಗೊಳ್ಳಲಿದೆ.
ಅರ್ಜುನ ಎಂದರೆ ಮಹಾಭಾರತದ ಅರ್ಜುನವಲ್ಲ ಹಾಗಿದ್ದರೆ ಈ ಅರ್ಜುನ ಯಾರು?
“ಇದು ಬರೀ ನನ್ನ ಕಥೆಯಲ್ಲ ನನ್ನ ಅಪ್ಪನ ಕಥೆ, ಅಮ್ಮನ ಕಥೆ ಫ್ರೆಂಡ್ಸ್ ಕಥೆ ಹೆಚ್ಚು ಕಮ್ಮಿ ಎಲ್ಲರ ಕಥೆ” ಎಂದು ವಿಭಿನ್ನವಾಗಿ ಟ್ರೈಲರ್ ಮೂಲಕ ರಚನೆಗೊಂಡ ಅರ್ಜುನ ಕಿರುಚಿತ್ರ ಸತತ 39 ಬಾರಿ ಭರ್ಜರಿ ಪ್ರದರ್ಶನಗೊಂಡು ಇದೀಗ 40ನೇ ಪ್ರದರ್ಶನಕ್ಕೆ ಸಜ್ಜಾಗಿದೆ. ಟ್ರೈಲರ್ ಮೂಲಕವೇ ಸಾಕಷ್ಟು ಜನರ ಮನಸ್ಸನ್ನು ಗೆದ್ದ ಈ ಕಥೆ ಭಾವನಾತ್ಮಕವಾಗಿ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವ ವಿಭಿನ್ನ ಕಥೆ ಎಂದು ನಮ್ಮೂರ್ ಎಕ್ಸ್ ಪ್ರೆಸ್ ಸ್ಟುಡಿಯೋದಲ್ಲಿ ನಿರ್ದೇಶಕ ಶ್ರೀಧರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹದಿಹರೆಯದ ವಯಸ್ಸಿನಲ್ಲಿ ಮಾಡುವ ತಪ್ಪು, ಆ ತಪ್ಪಿನಿಂದ ನರಳಾಟ ಈ ವಿಚಾರ ಪೋಷಕರ ಮೇಲೆ ಹೇಗೆ ಪರಿಣಾಮ ಬೀರಬಹುದು ಈ ಎಲ್ಲಾ ವಿಷಯಗಳನ್ನು ಒಳಗೊಂಡ ಅದ್ಭುತ ಸಿನಿಮಾ ಎಂದೇ ಹೇಳಬಹುದು. ಇದೊಂದು ಪ್ರತಿಯೊಬ್ಬ ತಂದೆ ತಾಯಿ ಮಕ್ಕಳ ಜೊತೆಗೆ ಕೂತು ನೋಡಲೇಬೇಕಾದ ವಿಶೇಷ ಸಿನಿಮಾ.ನೀವು ಹಾಗೂ ನಿಮ್ಮ ಕುಟುಂಬಸ್ಥರು ಸಿನಿಮಾ ವೀಕ್ಷಿಸುವ ಮೂಲಕ ಹೊಸ ಪ್ರತಿಭೆ ಹಾಗೂ ಯುವಕರನ್ನು ಪ್ರೋತ್ಸಾಹಿಸಿ, ಕನ್ನಡ ಕಿರು ಚಿತ್ರಗಳನ್ನು ಉಳಿಸಿ ಬೆಳೆಸಬೇಕಾಗಿ ಅವರು ಮನವಿ ಮಾಡಿದ್ದಾರೆ. ಚಿತ್ರದ ಎಡಿಟರ್ ಗಣೇಶ್ ತೀರ್ಥಹಳ್ಳಿ ಕೂಡ ಜತೆಗಿದ್ದು ಚಿತ್ರವನ್ನು ಎಲ್ಲರೂ ವೀಕ್ಷಿಸಿ ಬೆಂಬಲಿಸಲು ಕೋರಿದ್ದಾರೆ.