ಫೆಂಗಲ್ ಗೆ ಕರಾವಳಿ ಕಂಗಾಲು!
– ನಾಗರಿಕರ ಪರದಾಟ!
– ಆಸ್ಪತ್ರೆ ಪ್ರವೇಶಿಸಿದ ಮಳೆ ನೀರು!!
NAMMUR EXPRESS NEWS
ಕರಾವಳಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.02ರಂದು ಫೆಂಗಲ್ ಚಂಡಮಾರುತ ಪರಿಣಾಮದಿಂದ ಭಾರಿ ಮಳೆ ಸುರಿದಿದ್ದು, ಕರಾವಳಿ ಅಕ್ಷರಶಃ ಕಂಗಾಲಾಯಿತು. ಸಂಜೆ 5 ಗಂಟೆ ಹೊತ್ತಿಗೆ ಮಂಗಳೂರು ನಗರದಲ್ಲಿ ಕರ್ಗತ್ತಲು ಆವರಿಸಿ, ಬಿರುಸಿನ ಮಳೆ ಸುರಿಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ವಿಟ್ಲ, ಮಾಣಿ, ಬಂಟ್ವಾಳದಲ್ಲಿ ಮಳೆ ಬಿರುಸಾಗಿತ್ತು. ಒಮ್ಮಿಂದೊಮ್ಮೆಲೆ ಸುರಿದ ಮಳೆಗೆ ವಾಹನ ಸವಾರರು ಪೇಚಿಗೆ ಪ್ರದೇಶಗಳಲ್ಲಿ ಸಿಲುಕಿ, ಮಳೆಯ ಬಿರುಸಿಗೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿತು. ರಾಜಕಾಲುವೆಯಲ್ಲಿ ಎಕಾಏಕಿ ನೆರೆ ನೀರು ಏರಿಕೆಯಾಗಿ ತಗ್ಗು ಪ್ರದೇಶಗಳ ಕಟ್ಟಡ ಪಾರ್ಕಿಂಗ್ ಜಾಗ, ಕಚೇರಿಗಳಿಗೆ ನೀರು ನುಗ್ಗಿದೆ.
* ನಾಗರಿಕರ ಪರದಾಟ
ಸಂಜೆ ವೇಳೆ ಸುರಿದ ಭಾರಿ ಮಳೆಯಿಂದಾಗಿ ಕಚೇರಿಯಿಂದ ಮನೆಗೆ ತೆರಸುವ ಸಿಬ್ಬಂದಿ, ಶಾಲಾ-ಕಾಲೇಜು, ಟ್ಯೂಷನ್ ನಿಂದ ತೆರಳುವ ವಿದ್ಯಾರ್ಥಿಗಳು, ಕೆಲಸ ಮುಗಿಸಿ ಮನೆಗೆ ಹೋಗುವ. ಕಾರ್ಮಿಕರು ಅಕ್ಷರಶಃ ಕಂಗಾಲಾದರು. ಟ್ರಾಫಿಕ್ ಬ್ಲಾಕ್ ನಿಂದಾಗಿ ಬಸ್ ಗಳು 20 30 ನಿಮಿಷ ವಿಳಂಬವಾಗಿ ಸಂಚರಿಸಿ ಪ್ರಯಾಣಿಕರು ಪರದಾಡುವಂತಾಯಿತು.
* ವಿದ್ಯುತ್ ಕಣ್ಣಾ ಮುಚ್ಚಾಲೆ!
ಏಕಾಏಕಿ ಸುರಿದ ಮಳೆ, ಸಿಡಿಲು – ಗುಡುಗಿನಿಂದಾಗಿ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಯಿತು. ಜಿಲ್ಲೆಯ ನಾನಾ ಕಡೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.
* ನಾನಾ ಕಡೆ ಟ್ರಾಫಿಕ್ ಬ್ಲಾಕ್!
ಮಂಗಳೂರು ನಗರದ ನಂತೂರು, ಪಿವಿಎಸ್, ಎಂಜಿ ರಸ್ತೆ, ಕೆಪಿಟಿ, ಬೆಜೆಂಟ್, ಕಂಕನಾಡಿ ಕಡೆಗಳಲ್ಲಿ ಬ್ಲಾಕ್ ಉಂಟಾಗಿ ಜನರು ಪರದಾಡುವಂತಾಯಿತು. ಅದರಲ್ಲೂ ಎಂಜಿ ರಸ್ತೆ ನಂತೂರಿನಲ್ಲಿ ವಾಹನಗಳ ಸರತಿ ಸಾಲು ನೂರಾರು ಮೀಟರ್ ನಷ್ಟು ದೂರ ವ್ಯಾಪಿಸಿತು. ದ್ವಿಚಕ್ರ ವಾಹನ ಸವಾರರು ರೈನ್ ಕೋಟ್ ತರದ ಪರಿಣಾಮ ಬಸ್ ತಂಗುದಾಣ ಮರದಡಿ ಬಳಿ ಬೈಕ್ ನಿಲ್ಲಿಸಿ ಆಶ್ರಯ ಪಡೆದುಕೊಂಡರು.
* ಸುರತ್ಕಲ್ ಆಸ್ಪತ್ರೆ ಪ್ರವೇಶಿಸಿದ ಮಳೆ ನೀರು!!
ಸುರತ್ಕಲ್ : ಚಂಡಮಾರುತ ಪರಿಣಾಮ ಸುರಿದ ಭಾರಿ ಮಳೆಯಿಂದ ಸುರತ್ಕಲ್ ಪಾಲಿಕೆ ಮಾರುಕಟ್ಟೆ ಬಳಿಯ ಖಾಸಗಿ ಆಸ್ಪತ್ರೆಗೆ ಕೃತಕ ನೆರೆ ನೀರು ಪ್ರವೇಶಿಸಿ ರೋಗಿಗಳು ಪರದಾಟ ನಡೆಸಬೇಕಾಯಿತು.
ಮಳೆಗಾಲದ ರೀತಿ ಸುಮಾರು 2 ಗಂಟೆ ಸುರಿದ ಬಾರಿ ಮಳೆಯಿಂದಾಗಿ ಸುರತ್ಕಲ್ ಭಾಗದಲ್ಲಿ ರಾತ್ರಿ 8 ಗಂಟೆ ಬಳಿಕ ಒಮ್ಮೆಗೆ ಕಡಿಮೆಯಾಗಿದೆ.
* ರಕ್ಷಣಾ ಕ್ರಮಕ್ಕೆ ಸ್ಪೀಕರ್ ಯುಟಿ ಖಾದರ್ ಸೂಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಫೆಂಗಲ್ ಚಂಡಮಾರುತ ಪರಿಣಾಮ ವಿಪರೀತ ಮಳೆ, ಮುಂಜಾಗ್ರತಾ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಸೂಚನೆ ನೀಡಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆ ನೀಡಿದಂತೆ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮ ಹಾಗೂ ಅಗತ್ಯ ರಕ್ಷಣಾ ಕ್ರಮ ಕುರಿತು ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಮುಂತಾದ ರಕ್ಷಣಾ ತಂಡಗಳನ್ನು ಸನ್ನದ್ಧಗೊಳಿಸಲು ಯುಟಿ ಖಾದರ್ ಸೂಚನೆ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಎಲ್ಲಾ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಂಪರ್ಕದಲ್ಲಿದ್ದು ಸಹಕರಿಸಬೇಕು. ಜನಸಾಮಾನ್ಯರು ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.