ಕನ್ನಡದಲ್ಲಿ ಟ್ರೆಂಡ್ ಆಗುತ್ತಿದೆ ಯುಐ ಟ್ರೈಲರ್!
– ಬಿಡುಗಡೆ ಆಗಿ ಒಂದೇ ದಿನಕ್ಕೆ 2 ಮಿಲಿಯನ್ ವೀಕ್ಷಣೆ
– ರಿಷಭ್ ಶೆಟ್ಟಿ `ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
– ರಿಯಲ್ ಸ್ಟಾರ್ ಉಪೇಂದ್ರ ಕಟೀಲು ದೇವಾಲಯಕ್ಕೆ ಭೇಟಿ
NAMMUR EXPRESS NEWS
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ ಉಪೇಂದ್ರ ನಿರ್ದೇಶಕರಾಗಿ ನಟನೆ ಮಾಡಿರುವ ಯು. ಐ ಸಿನಿಮಾದ ಟ್ರೈಲರ್ ಸೋಮವಾರ ಬಿಡುಗಡೆಗೊಂಡಿದ್ದು ಒಂದೇ ದಿನಕ್ಕೆ 20 ಲಕ್ಷ ವೀಕ್ಷಣೆ ಪಡೆದಿದೆ
ಕನ್ನಡ ಚಿತ್ರರಂಗದ ಭರವಸೆಯ ಸಿನಿಮಾ ಇದಾಗಿದ್ದು ಹೊಸ ವರ್ಷಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ರಿಷಭ್ ಶೆಟ್ಟಿ `ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ಕಾಂತಾರ ಸಿನಿಮಾದ ಮೂಲಕ ಸ್ಟಾರ್ ಆಗಿರುವ ರಿಷಭ್ ಶೆಟ್ಟಿ ಅವರು ಇದೀಗ ಛತ್ರಪತಿ ಮಹಾರಾಜ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಅವರು ಕಾಂತಾರ 2 2025ರಂದು, ಜೈ ಹನುಮಾನ್ 2026, ಮತ್ತು ದ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ 2027ರಂದು ಬಿಡುಗಡೆ ಆಗಲಿದೆ.
ಮೇರಿ ಕೋಮ್, ಸರಬ್ಬಿತ್, ವೀರ್ ಸಾವರ್ಕರ್, ರಾಮಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಕಿರುಚಿತ್ರ ಸಫೇದ್ ಮುಂತಾದ ಚಿತ್ರಗಳನ್ನು ನಿರ್ದೇಶಿಸುತ್ತಿರುವ ಸಂದೀಪ್ ಸಿಂಗ್ ಈ ಐತಿಹಾಸಿಕ ಮಹಾಕಾವ್ಯವನ್ನು ನಿರ್ದೇಶಿಸುತ್ತಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಕಟೀಲು ದೇವಾಲಯಕ್ಕೆ ಭೇಟಿ
ಕಟೀಲು : ಖ್ಯಾತ ಕನ್ನಡದ ಚಲನಚಿತ್ರ ನಟ ರಿಯಲ್ ಸ್ಟಾರ್ ಉಪೇಂದ್ರ ಕಟೀಲು ದೇವಾಲಯಕ್ಕೆ ಭೇಟಿ ನೀಡಿದ್ದು, ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕಟೀಲು ದೇವಾಲಯದ ಅನುವಂಶಿಕ ಅರ್ಚಕರಾದ ಕಮಲಾದೇವಿ ಅಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಮತ್ತಿತರರು ಉಪಸ್ಥಿತರಿದ್ದರು