ಶೃಂಗೇರಿ ಶಾರದಾ ದೇವಿಯ ದರ್ಶನ ಸಮಯದಲ್ಲಿ ಬದಲಾವಣೆ..
* ಶ್ರೀಮಠದ ಆಡಳಿತ ಮಂಡಳಿಯಿಂದ ಮಾಹಿತಿ
* ಭಕ್ತರ ಆಗಮನ ಹೆಚ್ಚಾಗಿದೆ,ಎಲ್ಲರಿಗೂ ದರ್ಶನ ಕಲ್ಪಿಸಲು ಹೊಸ ವೇಳಾಪಟ್ಟಿ
NAMMUR EXPRESS NEWS
ಶೃಂಗೇರಿ: ಮಲೆನಾಡಿನ ಜಗತ್ಪ್ರಸಿದ್ಧ ತಾಯಿ ಶೃಂಗೇರಿ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ದೇವಾಲಯಕ್ಕೆ ಭಕ್ತರ ಆಗಮನದಲ್ಲಿ ಗಣನೀಯ ಏರಿಕೆಯಾಗಿದ್ದು ಎಲ್ಲ ಭಕ್ತರಿಗೂ ದರ್ಶನ ವ್ಯವಸ್ಥೆ ಕಲ್ಪಿಸಲು ದೇವಾಲಯದ ಆಡಳಿತ ಮಂಡಳಿ ಈ ನಿರ್ಧಾನ ಕೈಗೊಂಡಿದೆ. ಈ ಹೊಸ ವೇಳಾಪಟ್ಟಿ ಸಂಕ್ರಾಂತಿ ಅಂದರೆ ಜನವರಿ 15 ರವರೆಗೆ ಜಾರಿಯಲ್ಲಿರಲಿದೆ.
ದೇವಾಲಯದ ನೂತನ ದರ್ಶನದ ಸಮಯ ಏನು..??
ಬೆಳಿಗ್ಗೆ 5:00 ಗಂಟೆಯಿಂದ – ಮಧ್ಯಾಹ್ನ 2:00 ಗಂಟೆಯವರೆಗೆ
ನಂತರ ಮಧ್ಯಾಹ್ನ 2:30 ರಿಂದ – ರಾತ್ರಿ 9 ಗಂಟೆಯವರೆಗೆ
ಈ ನೂತನ ವೇಳಾಪಟ್ಟಿ ಜನವರಿ 15 ನೇ ತಾರೀಖಿನ ವರೆಗೆ ಜಾಲ್ತಿಯಲ್ಲಿರಲಿದೆ ಎಂದು ಶ್ರೀಮಠದ ಆಡಳಿತ ಮಂಡಳಿ ತಿಳಿಸಿದೆ.