ಓಟಿಗಾಗಿ ಹೆಂಡ ಕುಡಿಸಲ್ಲ.. ಹಣ ಕೊಡಲ್ಲ…!
– ತೀರ್ಥಹಳ್ಳಿ ತಾಲೂಕಿನ ಮಾಳೂರು ಸೊಸೈಟಿ ಚುನಾವಣೆ ವಿಶೇಷ
– ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ ಎಲ್ಲಾ ಅಭ್ಯರ್ಥಿಗಳು
NAMMUR EXPRESS NEWS
ತೀರ್ಥಹಳ್ಳಿ: ಓಟಿಗಾಗಿ ಹೆಂಡ ಕುಡಿಸಲ್ಲ.. ಹಣ ಕೊಡಲ್ಲ…!. ತೀರ್ಥಹಳ್ಳಿ ತಾಲೂಕಿನ ಮಾಳೂರು ಸೊಸೈಟಿ ಚುನಾವಣೆ ಇದೀಗ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ. ಸೊಸೈಟಿ ಚುನಾವಣೆಗೆ ಸ್ಪರ್ಧೆ ಮಾಡಿರುವ ಎಲ್ಲಾ ಅಭ್ಯರ್ಥಿಗಳು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ ನಾವು ಮತದಾರರಿಗೆ ಹಣ, ಹೆಂಡ ಹಂಚಲ್ಲ ಎಂದು ಮಂಜುನಾಥನ ಎದುರು ಪ್ರಮಾಣ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2024 ರಿಂದ 05 ವರ್ಷ ಅವಧಿಗೆ ಆಡಳಿತ ಮಂಡಳಿಯ ಸದಸ್ಯರ ಚುನಾವಣೆ ದಿನಾಂಕ : 28-12-2024ರಂದು ನಡೆಯಲಿದೆ. ಅರುಣ.ಎಂ.ಶೆಟ್ಟಿ, ಉಮೇಶ.ಸಿ.ಡಿ., ಕೃಪಾಲ ಡಿ.ಕೆ, ಜಯಂತ, ಟೀಕಪ್ಪ ಗೌಡ ಕೆ.ವಿ, ಧನಂಜಯ ಎಂ.ಪಿ, ಪೂರ್ಣೇಶ ಹೆಚ್.ಎಂ., ಪ್ರಶಾಂತ ಡಿ.ಎಸ್, ಬಸಪ್ಪ ಎ.ಸಿ, ಮೋಹನ್ ಕುಮಾರ್.ವಿ.ಎಸ್, ರವೀಂದ್ರ ಹೆಚ್.ಸಿ, ಸುರೇಂದ್ರ ಎಸ್.ಎ, ಅನುರಾಧ ಕೆ.ಎ, ಗೀತಾ ಎಸ್. ಕೆ, ಲತಾ ಕೆ. ಎಂ, ಸುಮಾ ನಾಗೇಶ, ಮಹೇಶ ಎಂ.ಎಸ್, ರಾಮಚಂದ್ರ ಕೆ.ಟಿ, ಶ್ರೀನಾಥ ಎಂ.ಡಿ. ಸದಾನಂದ ಇ.ಎಲ್, ಉಮೇಶ ಗಬಡಿ, ಪ್ರಕಾಶ್ ಹೆಚ್.ಡಿ, ನಾಗರಾಜ ಹೆಚ್ ಎಂ, ಸತೀಶ್, ನಾರಾಯಣನಾಯ್ಕ್ ಹೆಚ್. ಎನ್, ಪುಷ್ಪಾವತಿ ಜೆ.ಬಿ ಧರ್ಮಸ್ಥಳಕ್ಕೆ ತೆರಳಿ ಆಣೆ ಮಾಡಿ ಬಂದಿದ್ದಾರೆ. ಇದೀಗ ಮತದಾರರ ಮುಂದೆ ಮತ ನೀಡಿ ಎಂದಷ್ಟೇ ಮನವಿ ಮಾಡುತ್ತಿದ್ದಾರೆ.
