ಮಲೆನಾಡು, ಕರಾವಳಿಯಲ್ಲಿ ಅಡಿಕೆ ಬೆಳೆಗೆ ನಂಬೋ ಹಾಗಿಲ್ಲ!
– ಎಲೆ ಚುಕ್ಕೆ ರೋಗಕ್ಕೆ ಸಾವಿರಾರು ಎಕರೆ ಅಡಿಕೆ ತೋಟ ನಾಶ
– ಒಣಗಿ ನಿಂತ ತೋಟ: ಕಣ್ಮುಚ್ಚಿ ನಿದ್ದೆ ಮಾಡುತ್ತಿರುವ ಸರ್ಕಾರ!?
NAMMUR EXPRESS NEWS
ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕ ಭಾಗದ ಆರ್ಥಿಕತೆಗೆ ಭಾರೀ ಕೊಡುಗೆ ನೀಡಿರುವ ಅಡಿಕೆ ಬೆಳೆ ಇದೀಗ ಅಪಾಯಕ್ಕೆ ಸಿಲುಕಿದೆ. ಒಳ್ಳೆ ಬೆಲೆ ಕಂಡು ಇನ್ನೇನು ಒಳ್ಳೆ ಬೆಳೆ ಬರುವ ಹೊತ್ತಿಗೆ ಅಡಿಕೆ ಗಿಡ ಮರಗಳು ಎಲೆ ಚುಕ್ಕಿ ರೋಗಕ್ಕೆ ಬಲಿಯಾಗುತ್ತಿವೆ. ಸಾವಿರಾರು ಎಕರೆ ಅಡಿಕೆ ತೋಟ ಈಗಾಗಲೇ ಬಲಿಯಾಗಿದೆ. ಆದರೆ ಸರ್ಕಾರಗಳು ಇನ್ನು ಸ್ಪಷ್ಟ ಸಂಶೋಧನೆ ಮಾಡಿಲ್ಲ. ಬೆಳೆಗಾರರ ಬೆನ್ನಿಗೆ ನಿಂತಿಲ್ಲ. ವಾತಾವರಣ ಕೂಡ ರೈತರಿಗೆ ಶಾಪವಾಗುತ್ತಿದೆ.ಮಳೆ ಚಳಿಯಿಂದ ದಿನ ದಿನ ರೋಗದ ಪ್ರಮಾಣ ಹೆಚ್ಚಾಗುತ್ತಿದೆ. ಸರ್ಕಾರವು ಇದರ ಬಗ್ಗೆ ಸದನದಲ್ಲಿ ಚರ್ಚೆ ಮಾಡಿದರೂ ಎಲೆ ಚುಕ್ಕೆ ರೋಗಕ್ಕೆ ಮದ್ದನ್ನು ಇನ್ನು ಸರಿಯಾಗಿ ನೀಡುತ್ತಿಲ್ಲ. ಹತ್ತಾರು ಸಭೆಗಳನ್ನು ಕರೆದು ಚರ್ಚೆ ಮಾಡಿದರೂ ಉಪಯೋಗವಾಗುತ್ತಿಲ್ಲ. ಎಲೆ ಚುಕ್ಕೆ ರೋಗಕ್ಕೆ ಔಷಧಿ ಕೊಡುತ್ತೇವೆ ಎಂದ ಸರಕಾರಿ ಅಧಿಕಾರಿಗಳ ಜೇಬು ತುಂಬುತ್ತಿದೆ ಎಂದು ರೈತರು ಹತಾಶೆಯಿಂದ ನೋವು ತೋಡಿಕೊಂಡಿದ್ದಾರೆ.ರೈತನ ಕಣ್ಣೀರು ಒರೆಸುವ ಮನಸ್ಥಿತಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಒಲವು ಇದ್ದ ಹಾಗೆ ಇಲ್ಲ. ಒಣಗಿ ನಿಂತ ಮರಗಳನ್ನು ನೋಡಿ ರೈತ ಮರಗುತ್ತಿದ್ದಾನೆ. ಅಡಕೆ ನಂಬಿ ರೈತ ಮನೆ., ಮದುವೆ ಎಂದು ಖರ್ಚು ಮಾಡಿ ರೈತ ಸಾಲ ಗಾರರಿಗೆ /ಬ್ಯಾಕುಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರುತ್ತಿದ್ದಾನೆ. ಅಡಿಕೆ ರೋಗಗಳ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕಿದೆ.