ಕಾಫಿನಾಡಲ್ಲಿ ಸಿ.ಟಿ ರವಿಗೆ ಭರ್ಜರಿ ಸ್ವಾಗತ..!
* ಬಿಡುಗಡೆಗೊಂಡ ಬಳಿಕ ಕಾಫಿನಾಡಿಗೆ ಮೊದಲ ಬಾರಿ ಆಗಮನ
* ಬೆಂಗಳೂರಿನಿಂದ ಚಿಕ್ಕಮಗಳೂರವರೆಗೂ ಕಾರ್ಯಕರ್ತರಿಂದ ಆದ್ದೂರಿ ಸ್ವಾಗತ
NAMMUR EXPRESS NEWS
ಚಿಕ್ಕಮಗಳೂರು: ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ಗೆ ಅಶ್ಲೀಲ ಪದ ಬಳಕೆ ಆರೋಪದಡಿ ಬಂಧನಕ್ಕೊಳಗಾಗಿ ನಂತರ ಕೋರ್ಟ್ ಆದೇಶದ ಮೇರೆಗೆ ಬಿಡುಗಡೆಗೊಂಡು ಸ್ವಕ್ಷೇತ್ರ ಚಿಕ್ಕಮಗಳೂರಿಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ದೊರಕಿದೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಹೊರಟ ಸಿ.ಟಿ ರವಿಗೆ ಕುಣಿಗಲ್,ಚೆನ್ನರಾಯಪಟ್ಟಣ,ಹಾಸನ,ಬೇಲೂರು ಸೇರಿದಂತೆ ದಾರಿಯುದ್ದಕ್ಕೂ ಕಾರ್ಯಕರ್ತರು ಹೂವಿನ ಹಾರ ಹಾಕಿ,ಹೂಮಳೆ ಸುರಿಸಿ,ಜೈಕಾರ ಕೂಗಿ ಸ್ವಾಗತ ಕೋರಿದರು. ಸ್ವಾಗತ ಸ್ವೀಕರಿಸಿದ ಸಿ.ಟಿ ರವಿ ಎಲ್ಲರಿಗೂ ಕೈಮುಗಿದು ಧನ್ಯವಾದ ತಿಳಿಸಿ ಸ್ವಕ್ಷೇತ್ರಕ್ಕೆ ಮರಳಿದ್ದಾರೆ. ತಮ್ಮ ನಾಯಕನ ಆಗಮನ ತಡರಾತ್ರಿ 12 ಗಂಟೆಯಾದರೂ ಕಾದು ಕುಳಿತ ಚಿಕ್ಕಮಗಳೂರಿನ ಕಾರ್ಯಕರ್ತರು ಹಿರೇಮಗಳೂರಿನಲ್ಲಿ ಆದ್ದೂರಿ ಸ್ವಾಗತ ನೀಡಿ ಅಲ್ಲಿಂದ ಸಿ.ಟಿ ರವಿ ಮನೆಯವರೆಗೂ ಮೆರವಣಿಗೆ,ಜೈಕಾರದ ಮೂಲಕ ಕರೆತಂದಿದ್ದಾರೆ.
ನಿಮ್ಮೊಂದಿಗೆ ಸದಾ ನಾನಿರುವೆ.. – ಸಿ.ಟಿ ರವಿ..!!
ಅದ್ದೂರಿ ಸ್ವಾಗತ ಸ್ವೀಕರಿಸಿದ ಸಿ.ಟಿ ರವಿ ಕಾರ್ಯಕರ್ತರು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ” ನನ್ನ ಕಷ್ಟಕಾಲದಲ್ಲಿ ನನ್ನ ಜೊತೆ ನಿಂತಿದ್ದೀರಿ,ನಿಮ್ಮ ಪ್ರೀತಿ ತೋರಿಸಿದ್ದೀರಿ ನಿಮ್ಮ ಪ್ರೀತಿಗೆ ಬೆಲೆಕಟ್ಟಲು ಆಗಲ್ಲ, ನಿಮ್ಮೆಲ್ಲರ ಜೊತೆ ಕಷ್ಟದಲ್ಲಿ ಸದಾ ನಾನಿರುತ್ತೇನೆ” ಎಂದು ಭಾವುಕರಾದರು.