ಶ್ರೀ ರಾಮೇಶ್ವರ ಎಳ್ಳಮಾವಾಸ್ಯೆ ಸಿದ್ಧತೆ ಜೋರು!
– ದೇವಸ್ಥಾನದ ಹೊರೆ ಕಾಣಿಕೆ ಶುರು: ದೇವಸ್ಥಾನ ಸುತ್ತ ಮುತ್ತ ಸ್ವಚ್ಛತೆ
– ರಥ ಬಿಗಿಯಲು ಕಾರ್ಯಕ್ಕೆ ಚಾಲನೆ: ಬಂದಿವೆ ಜಾಯಿಂಟ್ ವೀಲ್
– ತುಂಗಾ ಹಳೆ ಸೇತುವೆಗೆ ಸುಣ್ಣ ಬಣ್ಣ: ಕಳೆಗಟ್ಟಲಿದೆ ನಮ್ ತೀರ್ಥಹಳ್ಳಿ!
– ಜಾತ್ರೆ ವಿಶೇಷ ನಮ್ಮೂರ್ ಎಕ್ಸ್ ಪ್ರೆಸ್ ಅಲ್ಲಿ ನೇರ ಪ್ರಸಾರ
NAMMUR EXPRESS NEWS
ತೀರ್ಥಹಳ್ಳಿ :ಐತಿಹಾಸಿಕ ರಾಮೇಶ್ವರ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಇದೀಗ ತೀರ್ಥಹಳ್ಳಿ ರಥ ಬೀದಿಯಲ್ಲಿ ಜಾತ್ರೆ ಸಂಭ್ರಮಕ್ಕೆ ಸಿದ್ಧತೆ ಶುರುವಾಗಿದೆ. ದೇವಸ್ಥಾನ ಸುತ್ತಮುತ್ತ ಸ್ವಚ್ಛತೆ ಮಾಡಲಾಗಿದೆ. ನದಿ ತೀರದಲ್ಲಿ ಕೂಡ ಸ್ವಚ್ಛ ಆಗುತ್ತಿದೆ. ರಥ ಕಟ್ಟಲು ಸಿದ್ಧತೆ ನಡೆದಿದೆ. ಜಾಯಿಂಟ್ ವೀಲ್ ಸೇರಿ ಆಟಿಕೆಗಳು ಬರುತ್ತಿವೆ. ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ನೀಡಿದ್ದಾರೆ.
ಅನ್ನದಾನಕ್ಕೆ ಸಿದ್ಧತೆ: ಹಳ್ಳಿ ಹಳ್ಳಿಗೆ ಹೊರೆ ಕಾಣಿಕೆ
ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರ ವೃಂದದ ವತಿಯಿಂದ ಹದಿನಾಲ್ಕು ವರ್ಷಗಳಿಂದ ನಿರಂತರವಾಗಿ ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತ ಅನ್ನದಾಸೋಹಕ್ಕೆ ಈಗ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಸಮಿತಿ ಸದಸ್ಯರು ತಾಲೂಕಿನ ಎಲ್ಲಾ ಸದ್ಭಕ್ತರು ನೀಡಿದ ಹೊರೆ ಕಾಣಿಕೆ ಬಳಸಿ ಹಗಲು ರಾತ್ರಿ ಕಷ್ಟ ಪಟ್ಟು ಅನ್ನ ದಾಸೋಹ ಮಾಡಲಿದ್ದಾರೆ..
ಸದ್ಭಕ್ತರು ತಮ್ಮ ಊರಿಗೆ ಹೊರೆ ಕಾಣಿಕೆ ವಾಹನ ಬಂದಾಗ ತಮ್ಮ ಮನೆಯಲ್ಲಿ ಬೆಳೆದ ದವಸ ಧಾನ್ಯ ತರಕಾರಿ ಅಕ್ಕಿ, ಕಾಯಿ ಇನ್ನಿತರ ವಸ್ತುಗಳನ್ನು ಹಸಿರು ಹೊರೆ ಕಾಣಿಕೆ ರೂಪದಲ್ಲಿ ಕೊಡುವುದರ ಮೂಲಕ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನ್ನ ದಾಸೋಹ ಮಿತ್ರ ವೃಂದ ಸಮಿತಿಯವರು ವಿನಂತಿಸಿದ್ದಾರೆ.
ತುಂಗಾ ಸೇತುವೆಗೆ ಸುಣ್ಣ ಬಣ್ಣ!
ತೀರ್ಥಹಳ್ಳಿಯ ಪ್ರಸಿದ್ಧ ತುಂಗಾ ನದಿ ಹಳೆಯ ಸೇತುವೆಗೆ ಸುಣ್ಣ ಬಣ್ಣ ಮಾಡಲಾಗುತ್ತಿದೆ. ತೀರ್ಥಹಳ್ಳಿ ಇನ್ನೊಂದು ವಾರದಲ್ಲಿ ಬೆಳಕಿನ ಸಿಂಗಾರದಲ್ಲಿ ಮಿಂದೇಳಲಿದೆ.
ಸರ್ವರಿಗೂ ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಸುಸ್ವಾಗತ
ಜಾತ್ರೆಯ ವಿಶೇಷ ಸುದ್ದಿ, ಲೈವ್ ನಮ್ಮೂರ್ ಎಕ್ಸ್ ಪ್ರೆಸ್ ಯೂಟ್ಯೂಬ್ ಅಲ್ಲಿ ವೀಕ್ಷಿಸಿ.. ದೇವಸ್ಥಾನದ ಬಳಿ ಎಲ್. ಇಡಿ ಪರದೆಯಲ್ಲಿ ಜಾತ್ರೆಯ ನೇರ ಪ್ರಸಾರ ನೋಡಬಹುದಾಗಿದೆ.