ಕರಾವಳಿ ಕಡಲು, ನದಿ ಬಲಿಗಾಗಿ ಕಾದಿದೆ ಹುಷಾರ್!
– ಜನರನ್ನು ಆಗಾಗ ನುಂಗುತ್ತಿರುವ ಕಡಲ ತೀರದ ಬೀಚ್
– ಮೋಜು ಮಸ್ತಿ ಇರಲಿ..ಜೀವದ ಬಗ್ಗೆ ಎಚ್ಚರಿಕೆಯೂ ಇರಲಿ
NAMMUR EXPRESS NEWS
ಮಂಗಳೂರು/ ಉಡುಪಿ: ಕರಾವಳಿ ತೀರದ ಬೀಚ್, ಫಾಲ್ಸ್ ಇದೀಗ ದೇಶದಲ್ಲೇ ಜನರ ಮೆಚ್ಚಿನ ಪ್ರವಾಸಿ ತಾಣವಾಗಿವೆ. ಆದರೆ ಈ ನಡುವೆ ಸಮುದ್ರ ತೀರ, ನದಿ, ಫಾಲ್ಸ್ ಗಳಲ್ಲಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕರಾವಳಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವನೀರಿನ ದುರ್ಘಟನೆಗಳು ಇದೀಗ ಹಲವು ಎಚ್ಚರಿಕೆ ನೀಡಿದೆ. ಇತ್ತೀಚಿಗೆ ಮುರುಡೇಶ್ವರದಲ್ಲಿ ಕೋಲಾರದ ನಾಲ್ವರು ವಿದ್ಯಾರ್ಥಿನಿಯರು ಬೀಚಲ್ಲಿ ಆಟ ಆಡಲು ಹೋಗಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡುವೆ ಮಲ್ಪೆ, ಕೋಡಿ, ಮರವಂತೆ, ಮಂಗಳೂರು, ಪಣಂಬೂರು ಸೇರಿದಂತೆ ಹಲವು ಬೀಚ್ ಹಾಗೂ ಸಮುದ್ರ ತೀರಗಳಲ್ಲಿ ವರ್ಷಕ್ಕೆ ನೂರಾರು ಮಂದಿ ಸಾಯುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ಇರಬೇಕಿದೆ.
ನದಿ, ಪ್ರವಾಸ ತಾಣಗಳಲ್ಲೂ ಸಾವು!
ಬೀಚ್, ಕಡಲ ತೀರ, ನದಿ ಪ್ರವಾಸ ತಾಣವಾಗಿ ಪ್ರಸಿದ್ಧಿಯಾಗಿರುವ ಕರಾವಳಿ, ಇದೀಗ ಅದೇ ವಿಷಯಕ್ಕೆ ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಡಲ ನದಿ ಸೆಳೆತಕ್ಕೆ ಪ್ರಾಣತೆತ್ತವರು ಬಹಳಷ್ಟು ಜನ ಇದೀಗ ಮತ್ತೆಷ್ಟು ಬಲಿ ಬೇಕು ಎಂಬ ಪ್ರಶ್ನೆ ಕಾಡುತ್ತಿದೆ. ಉದಾಹರಣೆಗೆ ಮುರುಡೇಶ್ವರದಲ್ಲಿ ಈಜಲು ತೆರಳಿದ್ದ ನಾಲ್ವರು ನೀರು ಪಾಲಾಗಿರುವ ಘಟನೆ ನಡೆದಿದ್ದು,. ಸುಮಾರು 54 ವಿದ್ಯಾರ್ಥಿಗಳು ಕಡಲ ತೀರದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ನಾಲ್ವರು ಕೊಚ್ಚಿಕೊಂಡು ಹೋಗಿದ್ದಾರೆ.
ಕಾರ್ಕಳ ದುರ್ಗಾ ಫಾಲ್ಸ್ ಗೆ ಬಂದಿದ್ದ ವಿದ್ಯಾರ್ಥಿ ನೀರು ಪಾಲು, ನದಿಯಲ್ಲಿ ಸ್ನಾನ ಮಾಡಲು ಹೋದ ಮೂವರು ಯುವಕರು ನೀರು ಪಾಲು, ಉಲ್ಲಾಳ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಸಾವು, ಕುಂದಾಪುರ ದೋಣಿ ಮಗುಚಿ ಮೀನುಗಾರ ಸಾವು ಹೀಗೆ ಹತ್ತು ಹಲವು ದುರ್ಘಟನೆಗಳು ನಡೆಯುತ್ತಲೇ ಇದೆ.. ಇದಕ್ಕೆ ಕಡಿವಾಣ ಹಾಕಬೇಕಿದೆ ಆದ್ದರಿಂದ ಕರಾವಳಿ ಜಿಲ್ಲೆಯ ಕಡಲಬದಿ ಹುಷಾರಾಗಿರಬೇಕಿದೆ.