ಜ.5ಕ್ಕೆ ಬೆಂಗಳೂರಲ್ಲಿ ಮಲೆನಾಡಿಗರ ಕ್ರೀಡಾಕೂಟ
– ಸಹ್ಯಾದ್ರಿ ಸಂಘದಿಂದ 21ನೇ ವರ್ಷದ ವಾರ್ಷಿಕ ಕ್ರೀಡಾಕೂಟ
– ವಾಲಿಬಾಲ್, ಕಬಡ್ಡಿ, ಥ್ರೋ ಬಾಲ್ ಸೇರಿ ಹಲವು ಪಂದ್ಯ
– ಸರ್ವರಿಗೂ ಸ್ವಾಗತಿಸಿದ ಸಹ್ಯಾದ್ರಿ ಸಂಘದ ಸಮಿತಿ
NAMMUR EXPRESS NEWS
ಬೆಂಗಳೂರು: ಬೆಂಗಳೂರು ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆಯಾದ ಸಹ್ಯಾದ್ರಿ ಸಂಘದ ವತಿಯಿಂದ ಬೆಂಗಳೂರಿನಲ್ಲಿರುವ ಮಲೆನಾಡಿಗರ 21ನೇ ವರ್ಷದ ವಾರ್ಷಿಕ ಕ್ರೀಡಾಕೂಟ 2025 ಜ.5ರ ಭಾನುವಾರ ಬೆಳಗ್ಗೆ 10.00 ರಿಂದ ಒಕ್ಕಲಿಗರ ಸಂಘ ಪ್ರೌಢಶಾಲೆ ಆವರಣ ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ. ಸಹ್ಯಾದ್ರಿ ಸಂಘ ಈಗಾಗಲೇ ಪ್ರತಿ ವರ್ಷ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸಭೆ ಮೂಲಕ ಮಲೆನಾಡು ಜನರ ದನಿಯಾಗಿದೆ.
ಕ್ರೀಡಾಕೂಟ ಯಾವ ಯಾವ ಆಟ?
* 5 ವರ್ಷದವರೆಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗೆ
ಬೌಲಿಂಗ್
ಕಪ್ಪೆ ಜಿಗಿತ
ಬಕೆಟ್ ಒಳಗೆ ಚೆಂಡು ಹಾಕುವುದು
* 6 ರಿಂದ 10 ವರ್ಷದವರೆಗಿನ ಗಂಡು ಹೆಣ್ಣು ಮಕ್ಕಳಿಗೆ
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವ ಸ್ಪರ್ಧೆ
ಬಕೆಟ್ ಒಳಗೆ ಚೆಂಡು ಹಾಕುವುದು
50 ಮೀ. ಓಟದ ಸ್ಪರ್ಧೆ
* 11 ರಿಂದ 15 ವರ್ಷದವರೆಗಿನ ಗಂಡು ಹೆಣ್ಣು ಮಕ್ಕಳಿಗೆ
100 ಮೀ. ಓಟದ ಸ್ಪರ್ಧೆ
200 ಮೀ. ಓಟದ ಸ್ಪರ್ಧೆ
* 16 ರಿಂದ 25 ವರ್ಷದವರೆಗಿನ ಗಂಡು ಮಕ್ಕಳಿಗೆ
200 ಮೀ. ಓಟದ ಸ್ಪರ್ಧೆ
400 ಮೀ. ಓಟದ ಸ್ಪರ್ಧೆ
* 16 ರಿಂದ 25 ವರ್ಷದವರೆಗಿನ ಹೆಣ್ಣು ಮಕ್ಕಳಿಗೆ
100 ಮೀ. ಓಟದ ಸ್ಪರ್ಧೆ
200ಮೀ. ಓಟದ ಸ್ಪರ್ಧೆ
* 26 ರಿಂದ 35 ವರ್ಷದವರೆಗಿನ ಮಹಿಳೆಯರಿಗೆ
100 ಮೀ. ಓಟದ ಸ್ಪರ್ಧೆ
200 ಮೀ. ಓಟದ ಸ್ಪರ್ಧೆ
* 26 ರಿಂದ 35 ವರ್ಷದವರೆಗಿನ ಪುರುಷರಿಗೆ
100 ಮೀ. ಓಟದ ಸ್ಪರ್ಧೆ
200 ಮೀ. ಓಟದ ಸ್ಪರ್ಧೆ
* 35 ರಿಂದ 45 ವರ್ಷದವರೆಗಿನ ಮಹಿಳೆಯರಿಗೆ
ಮ್ಯೂಸಿಕಲ್ ಛೇರ್
* 35 ರಿಂದ 45 ವರ್ಷದವರೆಗಿನ ಪುರುಷರಿಗೆ
100 ಮೀ. ಓಟದ ಸ್ಪರ್ಧೆ
200 ಮೀ. ಓಟದ ಸ್ಪರ್ಧೆ
* 46 ರಿಂದ 65 ವರ್ಷದವರೆಗಿನ ಮಹಿಳೆಯರಿಗೆ ಮತ್ತು ಪುರುಷರಿಗೆ
ಮ್ಯೂಸಿಕಲ್ ಛೇರ್ (ಮಹಿಳೆಯರಿಗೆ).
ತೆಂಗಿನಕಾಯಿ ಒಡೆಯುವ ಸ್ಪರ್ಧೆ (ಪುರುಷರಿಗೆ)
* ಪುರುಷರಿಗೆ ಕಬಡ್ಡಿ
ವಾಲಿಬಾಲ್ (ಪುರುಷರಿಗೆ)
* ಥ್ರೋ ಬಾಲ್ (ಮಹಿಳೆಯರಿಗೆ)ಕ್ರೀಡೆಗಳನ್ನು ಆಯೋಜಿಸಲಾಗಿದೆ.
ವಿಶೇಷವಾಗಿ ಸಾಂಸ್ಕೃತಿಕ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮ
ವಿಶೇಷವಾಗಿ ಸಂಜೆ 4 ರಿಂದ 4 ರಿಂದ 6ನೇ ವಯಸ್ಸಿನ ಮಕ್ಕಳಿಗೆ ಹಾಗೂ 7 ರಿಂದ 10ನೇ ವಯಸ್ಸಿನ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ. ಸಂಜೆ 6.00 ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮ ಅಯೋಜಿಸಲಾಗಿದೆ.