ಕರಾವಳಿ ಟಾಪ್ ನ್ಯೂಸ್
– ಕುಂದಾಪುರ: ಖಾಸಗಿ ಶಾಲಾ ಬಸ್ ಟಯರ್ ಸ್ಪೋಟ, ಗಾಯ
– ಮಂಗಳೂರು: ಚಾಲಕ ನಿಯಂತ್ರಣ ತಪ್ಪಿ ಆಟೋ ಪಲ್ಟಿ: ಚಾಲಕ ಮೃತ್ಯು
– ಅಜೆಕಾರು: ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ – ದೂರು
NAMMUR EXPRESS NEWS
ಗಾಳಿ ತುಂಬುವಾಗ ಟಯರ್ ಸ್ಪೋಟಗೊಂಡ ಘಟನೆ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ನಡೆದಿದೆ.
ಕೆಪಿಎಸ್ ಪಿಯು ಕಾಲೇಜ್ ಹಿಂಭಾಗದಲ್ಲಿ ಟಯರ್ ಪಂಚರ್ ಶಾಪ್ ನಲ್ಲಿ ಬಸ್ಸಿನ ಟೈಯರಿಗೆ ಗಾಳಿ ತುಂಬುವ ಸಂದರ್ಭ ಟಯರ್ ಸಿಡಿದಿದೆ. ಟಯರ್ ಗಾಳಿ ತುಂಬಿಸುತ್ತಿದ್ದ ಅಬ್ದುಲ್ ರಜೀದ್ (19) ಗಾಯಗೊಂಡ ಯುವಕ. ಖಾಸಗಿ ಶಾಲೆ ಬಸ್ ಒಂದರ ಟಯರ್ ಪ್ಯಾಚ್ ಗೆಂದು ಬಂದಿದ್ದು, ಗಾಳಿ ತುಂಬಿದ ಕೆಲವೇ ನಿಮಿಷಗಳಲ್ಲಿ ಟೈಯರ್ ಸಿಡಿದಿದೆ. ಗಾಳಿ ತುಂಬಿಸುತ್ತಿದ್ದ ಯುವಕ ಎದ್ದು ನಿಲ್ಲುವಷ್ಟರಲ್ಲಿ ಸ್ಪೋಟ ಸಂಭವಿಸಿದ್ದು, ಟಯರ್ ನ ಸಿಡಿತಕ್ಕೆ ಸುಮಾರು ಕೆಲವು ಅಡಿ ಎತ್ತರಕ್ಕೆ ಯುವಕ ಗಾಳಿಯಲ್ಲಿ ಹಾರಾಡಿ ಕೆಳಕ್ಕೆ ಬಿದ್ದ ಯುವಕ ಅಬ್ದುಲ್ ರಜೀದ್ ಗೆ ಗಂಭೀರ ಗಾಯಗೊಂಡಿದ್ದಾನೆ. ಅಪಘಾತದ ಹೊಡೆತಕ್ಕೆ ಯುವಕನ ಕೈ ಮುರಿತ ಉಂಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ದೃಶ್ಯಾವಳಿ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
* ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ: ಚಾಲಕ ಮೃತ್ಯು
ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ಉರ್ಲಾಂಡಿಯಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಡಿ. 22 ರಂದು ಬೆಳಗ್ಗೆ ಸಂಭವಿಸಿದೆ. ಕಬಕ ಗ್ರಾಮದ ನೆಹರೂನಗರ ಕುಡ್ವಸ್ ಕಂಪೌಂಡ್ ನಿವಾಸಿ, ರಿಕ್ಷಾ ಚಾಲಕ ಸೂರ್ಯಕುಮಾರ್ (64) ಮೃತರು. ಸೂರ್ಯಕುಮಾರ್ ಅವರು ಬೆಳಗ್ಗೆ 6.30 ಹೊತ್ತಿಗೆ ತನ್ನ ರಿಕ್ಷಾದಲ್ಲಿ ಇಬ್ಬರು ಪ್ರಯಾಣಿಕರೊಂದಿಗೆ ನೆಹರೂನಗರ ಕಡೆಯಿಂದ ಪುತ್ತೂರು ಮಹಾಮಾಯ್ಮಿ ಟೆಂಪಲ್ ರಸ್ತೆ ಕಡೆಗೆ ತೆರಳುತ್ತಿದ್ದ ವೇಳೆ ಉರ್ಲಾಂಡಿ ಬಳಿ ರಿಕ್ಷಾಕ್ಕೆ ಶ್ವಾನವೊಂದು ಅಡ್ಡ ಬಂದಿದ್ದು ಇದನ್ನು ತಪ್ಪಿಸಲು ಹೋದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಚಾಲಕ ಸೂರ್ಯಕುಮಾರ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಸಹ ಪ್ರಯಾಣಿಕರಾದ ಕೇದರ್ ಕುಡ್ವ ಮತ್ತು ಕಾರ್ತಿಕ್ ಪೈ ಅವರಿಗೆ ಸಣ್ಣ ಪುಟ್ಟ ಗಾಯ ಉಂಟಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
* ಅಜೆಕಾರು: ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ – ದೂರು
ಅಜೆಕಾರು : ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕೊಲೆ ಬೆದರಿಕೆ ಹಾಕಿರುವ ಘಟನೆ ಡಿ. 19ರಂದು ಅಜೆಕಾರಿನಲ್ಲಿ ಸಂಭವಿಸಿದೆ. ಶಿರ್ಲಾಲು ಗ್ರಾಮದ ಸುನಂದ ಎಂಬವರು ಸದಾಶಿವ ಎಂಬುವವರ ಜೊತೆ ನಾಲ್ಕು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಡಿ. 19ರಂದು ಸದಾಶಿವ ಅವರು ತಿಳಿಸಿದಂತೆ ಮರ್ಣೆ ಗ್ರಾಮದ ದೆಪ್ಪುತ್ತೆ ಎಂಬಲ್ಲಿ ರೇಷ್ಮಾಟೆಲಿಸ್ ಕ್ರಿಸ್ಪಾಲ್ ಅವರ ತೋಟದಲ್ಲಿ ಜ್ಯೋತಿ, ಸಂಕ್ರಾಯ ಮತ್ತು ವಿಜಯ ಅವರ ಜೊತೆ ಕೆಲಸ ಮಾಡಿಕೊಂಡಿರುವಾಗ ಪ್ರದೀಪ್ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಲು ಪ್ರಯತ್ನಿಸಿದಲ್ಲದೆ, ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಸುನಂದಾ ಅವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.