ನಂದಿನಿ ಹಾಲಿನ ಹಾಲಿನ ದರ ಏರಿಕೆ ಸುಳಿವು..!!?
– ಅಧಿಕ 50 ಎಂಎಲ್ ಹಾಲು ಕಟ್, 2 ರೂ. ಕಟ್
– ಸಂಕ್ರಾಂತಿ ನಂತರ ಹಾಲಿನ ದರ 5 ರೂ. ಏರಿಕೆಗೆ ಪ್ರಸ್ತಾವನೆ
NAMMUR EXPRESS NEWS
ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ನಂದಿನ ಹಾಲಿನ ದರ ಏರಿಕೆಯ ಸುಳಿವು ನೀಡಿದ್ದಾರೆ. ಈ ಹಿಂದೆ ಹಾಲಿನ ಉತ್ಪಾದನೆ ಹೆಚ್ಚಳ ಎಂದು 50 ಎಂ.ಎಲ್ ಅಧಿಕ ಹಾಲು ನೀಡಿ 2 ರೂ.ಗಳನ್ನು ಹೆಚ್ಚಳ ಮಾಡಿದ್ದ ಸರ್ಕಾರ ಈಗ ಹಾಲಿನ ಉತ್ಪಾದನೆ ಯಾಥಾ ಸ್ಥಿತಿ ಎಂದು 50 ಎಂ.ಎಲ್ ಕಡಿತಗೊಳಿಸಿ ಹೆಚ್ಚಿಸಿದ್ದ 2 ರೂ.ಗಳನ್ನು ಕಡಿತಗೊಳಿಸಲು ನಿರ್ಧರಿಸೋದಾಗಿ ಅಧ್ಯಕ್ಷರು ತಿಳಿಸಿದ್ದಾರೆ.
ಸಂಕ್ರಾಂತಿ ಬಳಿಕ 5 ರೂ.ಏರಿಕೆ ಪ್ರಸ್ತಾವನೆ..!??
ಹಾಲು ಉತ್ಪಾದಕ ರೈತರು 5 ರೂ.ಗಳ ಏರಿಕೆ ಮಾಡಲು ಹಾಲು ಉತ್ಪಾದಕ ರೈತರು ಮನವಿ ಮಾಡಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಕ್ರಾಂತಿ ನಂತರ 5 ರೂ.ದರ ಏರಿಕೆಯಾಗಬಹುದು ಎಂಬ ಸುಳಿವನ್ನು ಕೆಎಂಎಫ್ ಅಧ್ಯಕ್ಷರು ನೀಡಿದ್ದಾರೆ.