Categories
ತೀರ್ಥಹಳ್ಳಿ

ಯಡೇಹಳ್ಳಿ, ಕುಡುಮಲ್ಲಿಗೆ ಸೊಸೈಟಿ ಚುನಾವಣೆ: ದೇವರ ಎದುರು ಪ್ರಮಾಣ!

ಯಡೇಹಳ್ಳಿ, ಕುಡುಮಲ್ಲಿಗೆ ಸೊಸೈಟಿ ಚುನಾವಣೆ: ದೇವರ ಎದುರು ಪ್ರಮಾಣ!
– ಆಮಿಷ ಒಡ್ಡಲ್ಲ ಎಂದು ಯಡೇಹಳ್ಳಿ ಸೊಸೈಟಿ ಅಭ್ಯರ್ಥಿಗಳಿಂದ ಮಾರಿಕಾಂಬೆ ಮುಂದೆ ಪ್ರಮಾಣ
– ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಬೆಂಬಲದೊಂದಿಗೆ ಎರಡು ತಂಡಗಳ 22 ಮಂದಿ ಸ್ಪರ್ಧೆ

NAMMUR EXPRESS NEWS
ತೀರ್ಥಹಳ್ಳಿ: ಯಡೇಹಳ್ಳಿ ಸೊಸೈಟಿಯ ಆಡಳಿತ ಮಂಡಳಿಗೆ ಇದೇ ಡಿಸೆಂಬರ್ 29ರಂದು ಚುನಾವಣೆ ನಡೆಯುತ್ತಿದೆ. ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಬೆಂಬಲದೊಂದಿಗೆ ಎರಡು ತಂಡಗಳ 22 ಮಂದಿ ಸ್ಪರ್ಧಿಸಿದ್ದಾರೆ. ಎಲ್ಲಾ 22 ಮಂದಿ ಅಭ್ಯರ್ಥಿಗಳೂ ಡಿಸೆಂಬರ್ 26ರಂದು ತೀರ್ಥಹಳ್ಳಿ ಮಾರಿಕಾಂಬೆ ಹಾಗೂ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ಸನ್ನಿಧಿಯಲ್ಲಿ ನಾವ್ಯಾರೂ ಚುನಾವಣೆಯಲ್ಲಿ ಯಾರಿಗೂ ಹಣ-ಹೆಂಡ ಇನ್ನಿತರೆ ಯಾವುದೇ ಆಮಿಷಗಳನ್ನು ಒಡ್ಡದೆ ಚುನಾವಣೆ ನಡೆಸುವುದಾಗಿ ಪ್ರಮಾಣ ಮಾಡಿದರು. ಅಭ್ಯರ್ಥಿಗಳಾದ ಇಂದಾವರ ದಯಾನಂದ, ಇಕ್ಕೇರಿ ದಿನೇಶ್, ಬಿ.ಕೆ.ವಾದಿರಾಜ್, ನಾಡ್ತಿ ಸತೀಶ್, ಹೊನ್ನು ಕುಡಿಗೆ ಸುಂದರೇಶ್, ಇಂದಾವರ ತಮ್ಮನಾಯ್ಕ, ಕಿತ್ತನಗದ್ದೆ ಗುಂಡೂರಾವ್, ರಾಘವೇಂದ್ರ ಶೆಟ್ಟಿ ಸರೋಜ, ಬೊಬ್ಬಸರೋಜಮ್ಮ, ಗಿರೀಶ್ ಅತ್ತಿಕೊಡಿಗೆ, ಅತ್ತಿಕೊಡಿಗೆ ಕೃಷ್ಣಮೂರ್ತಿ, ನಾಗರಾಜ ಉಡುಪ, ನಾಗರಾಜ್ ಡಿ, ಪ್ರಭಾಕರ ಕೆ.ಎಲ್. ಶೇಷಾದ್ರಿ ಬಿ.ವಿ., ರಾಮಚಂದ್ರ ನಾಯ್ಕ, ರಾಜಶೇಖರ್ ಬಿ.ಜಿ., ಮಂಜಪ್ಪ ಎಸ್.ಟಿ., ಕಲಾವತಿ ಹೆಚ್.ಕೆ, ಶೈಲಶ್ರೀ ಕೆ.ಎಸ್. ಪ್ರದೀಪ್ ಪಿ.ನಾಯಕ್, ಕಾಂಗ್ರೆಸ್ ಮುಖಂಡ ತುಪ್ಪದ ಮನೆ ವಿನಾಯಕ, ಬಿಜೆಪಿ ಮುಖಂಡ ಭಾರತೀಪುರ ಮಂಜುನಾಥ್ ಹಾಜರಿದ್ದರು.

ಕುಡುಮಲ್ಲಿಗೆ ಸೊಸೈಟಿಯಲ್ಲೂ ದೇವರ ಎದುರು ಪ್ರಮಾಣ!

ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಸೊಸೈಟಿಯಲ್ಲೂ ಕೂಡ ಎಲ್ಲಾ ಅಭ್ಯರ್ಥಿಗಳು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣೆಯಲ್ಲಿ ಹಣ ಹೆಂಡ ಹಂಚಲ್ಲ ಎಂದು ಪ್ರಮಾಣ ಮಾಡಿದರು. ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.