ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್ ವಾರ್ಷಿಕೋತ್ಸವ ಸಂಭ್ರಮ
– ಸೇವಾ ಕಾರ್ಯಕ್ರಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
– ಜ.5ರಂದು ಸಂಜೆ 4-30ಕ್ಕೆ ಕಾರ್ಯಕ್ರಮ: ಸರ್ವರಿಗೂ ಸ್ವಾಗತ
NAMMUR EXPRESS NEWS
ಹೊಸನಗರ: ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹೊಸನಗರಕ್ಕೆ ಹೊಸತೊಂದು ಕಲ್ಪನೆಯಾಗಿದ್ದು, 05-01-2025ನೇ ಭಾನುವಾರದಂದು ಈ ಸೇವಾ ಕಾರ್ಯಕ್ರಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಪ್ರಸಾದ್ ನೇತ್ರಾಲಯ, ಉಡುಪಿ ಇವರಿಂದ ಆಯೋಜನೆ ಮಾಡಲಾಗಿದೆ. ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 1-30ರ ವರೆಗೆ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅದೇ ದಿನ ಸಂಜೆ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿಶೇಷ ಮನರಂಜನಾ ಕಾರ್ಯಕ್ರಮ, ಮಕ್ಕಳ ಯಕ್ಷಗಾನ ಪ್ರದರ್ಶನ ಪ್ರಸಂಗ : ಮಹಿಷಾಸುರ ಮರ್ದಿನಿ ರಾತ್ರಿ 7-00 ರಿಂದ 9-30ರ ವರೆಗೆ ಮಕ್ಕಳ ಯಕ್ಷಗಾನ ಕಲಾತಂಡ, ತಿಣಿವೆ, ನಾಗರಕೊಡಿಗೆ ಇವರಿಂದ ಈ ಕಾರ್ಯಕ್ರಮ ನೆರವೇರಲಿದೆ.
05-01-2025ನೇ ಭಾನುವಾರ, ಸಂಜೆ 4-30ಕ್ಕೆ ಸಂತೆ ಮಾರ್ಕೆಟ್ ಕಟ್ಟಡ, ಹೊಸನಗರದಲ್ಲಿ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಾನಿಧ್ಯವನ್ನ ಶ್ರೀ ಮ॥ನಿ॥ಪ॥ ಅಭಿನವ ಚನ್ನಬಸವ ಮಹಾಸ್ವಾಮಿಗಳು ಸದಾನಂದ ಶಿವಯೋಗಾಶ್ರಮ, ಮೂಲೆಗದ್ದೆ ಮಠ ಇವರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯರಾಮ್ ಶೆಟ್ಟಿ ಅಧ್ಯಕ್ಷರು, ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್ ಇವರು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಗೌರವ ಉಪಸ್ಥಿತಿಯಾಗಿ ಲಯನ್ ಹೆಚ್. ವಾಸಪ್ಪ ಮಾಸ್ತಿಕಟ್ಟೆ ಗೌರವಾಧ್ಯಕ್ಷರು, ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಸೊನಲೆ ಶ್ರೀನಿವಾಸ್, ಮಹಮ್ಮದ್ ಅಶ್ಯಪ್ ಹಿಮಮಿ, ಫಾದರ್ ಸೈಮನ್ ಹೊರ್ಟಾ, ನಾಗಪ್ಪ, ರಶ್ಮಿ, ಗುರಣ್ಣ ಎಸ್. ಹೆಬ್ಬಾಳ್, ಶ್ರೀನಿವಾಸ್ ರೆಡ್ಡಿ, ಪ್ರವೀಣ್, ಪ್ರದೀಪ್ ಆರ್, ಪ್ರೀತಿ ಶೇಟ್,ಎನ್.ಆರ್. ದೇವಾನಂದ್, ಚಂದ್ರಶೇಖರ, ಮೋಹನ್ ಕುಮಾರ್, ಶೈಲಜ ಕೆ.ಆರ್, ಆನಂದ್ ಗೌಡ್ರು ಆನೇಗದ್ದೆ, ಅಶೋಕ್ ಮಾವಿನಕೊಪ್ಪ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದು ಈ ಕಾರ್ಯಕ್ರಮಕ್ಕೆ ಸರ್ವರಿಗೂ ಕೂಡ ಆದರದ ಸುಸ್ವಾಗತವನ್ನ ಕೋರುವವರು ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಸರ್ವ ಪದಾಧಿಕಾರಿಗಳು ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್ (ರಿ.), ಈ ಕಾರ್ಯಕ್ರಮದಲ್ಲಿ ಭೋಜನದ ವ್ಯವಸ್ಥೆ ಕೂಡ ಇರುತ್ತದೆ .