ಚಿಕ್ಕಮಗಳೂರು ಟಾಪ್ ನ್ಯೂಸ್..!!
– ಮಿತಿ ಮೀರಿದ ಅಸ್ಸಾಂ ಕಾರ್ಮಿಕರ ದಾಂಧಲೆ
– ಕೆಎಸ್ಆರ್ಟಿಸಿ ಬಸ್ನಲ್ಲಿ ಕುಡುಕರ ಕಿರಿಕ್
– ಕಳ್ಳಮಾಲು ಕೊಳ್ಳಬೇಡಿ ಜಾಗೃತಿ ಅಭಿಯಾನ
NAMMUR EXPRESS NEWS
ಮಿತಿ ಮೀರಿದ ಅಸ್ಸಾಂ ಕಾರ್ಮಿಕರ ದಾಂಧಲೆ..!!
ಆಲ್ದೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಕೊಯ್ಲಿಗಾಗಿ ಬಂದಿರುವ ಅಸ್ಸಾಂ ಕೂಲಿ ಕಾರ್ಮಿಕರ ಹುಚ್ಚಾಟಗಳು ಅತಿಯಾಗಿವೆ. ಕೆಲವು ದಿನಗಳ ಹಿಂದಷ್ಟೇ ಕೊಪ್ಪ ತಾಲೂಕಿನ ಮೇಗುಂದದಲ್ಲಿ ಜಮೀನಿನ ಮಾಲೀಕರೊಬ್ಬರಿಗೆ ಮನಬಂದಂತೆ ಥಳಿಸಿ ದಾಂಧಲೆ ನಡೆಸಿದ್ದ ಅಸ್ಸಾಂ ಕೂಲಿ ಕಾರ್ಮಿಕರು ಈಗ ಮೂಡಿಗೆರೆ ತಾಲೂಕಿನ ಆಲ್ದೂರಿನಲ್ಲಿ ತಮ್ಮ ಹುಚ್ಚಾಟ ಮೆರೆದಿದ್ದಾರೆ. ರಾತ್ರಿ ವೇಳೆ ಮನೆ ಮುಂದೆ ಬರುವ ಅಸ್ಸಾಂ ಕಾರ್ಮಿಕರು ಮನೆಯ ಮುಂದೆಯೇ ಮೂತ್ರ ವಿಸರ್ಜನೆ ಮಾಡಿ ಅನುಚಿತ ವರ್ತನೆ ತೋರಿದ್ದಾರೆ. ಈ ಘಟನೆ ಆಲ್ದೂರಿನ ಸಂತೆ ಮೈದಾನದಲ್ಲಿ ನಡೆದಿದೆ. ಯುವಕರ ಈ ಹುಚ್ಚಾಟ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಾರ್ಮಿಕರ ಈ ಹುಚ್ಚಾಟಕ್ಕೆ ಬ್ರೇಕ್ ಹಾಕುವಂತೆ ಸ್ಥಳೀಯರು ಪೋಲೀಸರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಆಲ್ದೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಎಸ್.ಆರ್.ಟಿ.ಸಿ ಯಲ್ಲಿ ಕುಡುಕರ ಕಿರಿಕ್..!!
ಚಿಕ್ಕಮಗಳೂರು: ಯುವಕರಿಬ್ಬರು ಕೆ.ಎಸ್.ಆರ್.ಟಿ.ಸಿ ಬಸ್ನಲ್ಲೇ ಮದ್ಯಪಾನ ಮಾಡಿ, ಬುದ್ಧಿವಾದ ಹೇಳಿದ ಕಂಡಕ್ಟರ್ ಮೇಲೆಯೇ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮಧ್ಯರಾತ್ರಿ ಬಸ್ನಲ್ಲಿ ಮದ್ಯಪಾನ ಮಾಡುತ್ತಿದ್ದ ಯುವಕರಿಬ್ಬರಿಗೆ ಬಸ್ ಕಂಡಕ್ಟರ್ ಬುದ್ಧಿವಾದ ಹೇಳಿದ್ದಾರೆ, ಆದರೆ ಬುದ್ಧಿವಾದ ಹೇಳಿದ ಕಂಡಕ್ಟರ್ ಮೇಲೆ ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಲಾಗಿದೆ.ಈ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಪೋಲೀಸರ ಮೇಲೂ ಕುಡುಕರು ಹಲ್ಲೆ ನಡೆಸಿದ್ದಾರೆ. ಪೋಲೀಸ್ ಠಾಣೆಯ ಮುಂದೆ ಕುಡಿದ ಮತ್ತಿನಲ್ಲಿ ರಂಪಾಟ ನಡೆಸಿದ್ದಾರೆ.
ಕಳ್ಳಮಾಲು ಕೊಳ್ಳಬೇಡಿ ಜಾಗೃತಿ ಅಭಿಯಾನ..!!?
ಮೂಡಿಗೆರೆ: ತಾಲೂಕಿನ ಬಣಕಲ್ನಲ್ಲಿ ದಿ ಪ್ಲಾಂಟರ್ಸ್ ಸ್ಪೋರ್ಟ್ ಕ್ಲಬ್ (ರಿ) ಮತ್ತು ಬಣಕಲ್ ಪೊಲೀಸ್ ಠಾಣೆ ಸಹಯೋಗದಲ್ಲಿ “ಕಳ್ಳತನ ಮಾಲು ಕೊಳ್ಳಬೇಡಿ” ಎಂಬ ಅರಿವು ಮೂಡಿಸುವ ಜಾಗೃತಿ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಈ ಬಾರಿ ಫಸಲು ಚೆನ್ನಾಗಿದ್ದು ಕಾಫಿ ಬೆಲೆ ಕೂಡ ಈ ಹಿಂದೆಂದಿಗಿಂತಲೂ ಅತ್ಯುತ್ತಮವಾಗಿದೆ. ಆದರೆ ಬಂಪರ್ ಬೆಲೆ ಜೊತೆ ಕಾಫಿ ಬೆಳೆಗಾರರಿಗೆ ಹೊಸ ತಲೆನೋವು ಶುರುವಾಗಿದ್ದು, ಕಾಫಿಯನ್ನು ಕಣದಲ್ಲಿ ಸುಮಾರು 10-12 ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಕಾಫಿ ಒಣಗಿಸುವ ಕಣ ಮತ್ತು ಮಾಲೀಕನ ಮನೆ ದೂರವೇ ಇರುತ್ತದೆ. ಕಣದ ಕೊರತೆ ಇರುವವರು ಗದ್ದೆಯಲ್ಲೇ ಕಾಫಿ ಒಣಗಿಸುತ್ತಾರೆ, ಇದು ಕಳ್ಳರಿಗೆ ಕಳ್ಳತನ ಮಾಡಲು ಸುಲಭವಾಗಿದೆ ಅದ್ದರಿಂದ ಇದರ ಬಗ್ಗೆ ಜಾಗೃತಿ ಮೂಡಿಸಲು ಇಂದು ಮೆರವಣಿಗೆ ಹಮ್ಮಿಕೊಂಡಿದ್ದೇವೆ ಎಂದು ಸಂಘಟಕ ಸದಸ್ಯ ಪ್ರವೀಣ್ ಗೌಡ ತಿಳಿಸಿದರು.