ಶೃಂಗೇರಿ ಜಗದ್ಗುರುಗಳ ಉತ್ತರ ವಿಜಯ ಯಾತ್ರೆ..
– ಯಾತ್ರೆ ಸಂಬಂಧ ಸಿ.ಎಂ ಯೋಗಿ ಆದಿತ್ಯನಾಥರನ್ನು ಭೇಟಿ ಮಾಡಿದ ಪಿ.ಎ ಮುರುಳಿ
– ಜನವರಿ 16 ರಿಂದ ಫೆಬ್ರವರಿ 13 ರ ವರೆಗೆ ಹಮ್ಮಿಕೊಂಡಿರೋ ವಿಜಯ ಯಾತ್ರೆ
NAMMUR EXPRESS NEWS
ಶೃಂಗೇರಿ: ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀಶ್ರೀ ವಿದುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳು ಜನವರಿ 16 ರಿಂದ ಫೆಬ್ರವವರಿ 13 2025ರ ವರೆಗೆ ಉತ್ತರ ವಿಜಯ ಯಾತ್ರೆಯನ್ನು ಹಮ್ಮಿಕೊಂಡಿದ್ದು ಈ ಸಂಬಂಧ ಶ್ರೀಮಠದ ಆಡಳಿತಾಧಿಕಾರಿಯಾದ ಪಿ.ಎ ಮುರುಳಿರವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ರನ್ನು ಭೇಟಿ ಮಾಡಿ ಮಾಹಿತಿ ನೀಡಿ ಚರ್ಚಿಸಿದರು. ವಿಜಯ ಯಾತ್ರೆಯಲ್ಲಿ ಜಗದ್ಗುರುಗಳು ಪ್ರಯಾಗ್ ರಾಜ್,ವಾರಣಾಸಿ,ಅಯೋಧ್ಯೆ ಹಾಗೂ ಗೋರಖ್ಪುರ ಸೇರಿದಂತೆ ಕರ್ನಾಟಕ,ಆಂಧ್ರಪ್ರದೇಶದ ಪವಿತ್ರ ಸ್ಥಳಗಳಿಗೆ ಭೇಟಿನೀಡಲಿದ್ದಾರೆ.