ಜ.12 ಮತ್ತು 13 ರಂದು ಕೋಣಂದೂರು ಬನಶಂಕರಿ ದೇಗುಲದಲ್ಲಿ ಜಾತ್ರಾ ಸಂಭ್ರಮ
– ಜ.12ಕ್ಕೆ ಸತ್ಯನಾರಾಯಣ ಪೂಜೆ, ಸಂಜೆ ವಾಯ್ಸ್ ಆಫ್ ಮಲೆನಾಡು’ ಮತ್ತು ಕರಾವಳಿ ಸಂಗೀತ ಸ್ಪರ್ಧೆ, ಸಿಡಿಮದ್ದು ಪ್ರದರ್ಶನ ಅದ್ದೂರಿಯಾಗಿ ತೆರೆಕಂಡಿತು.
– ಸಾವಿರಾರು ಭಕ್ತರು ಈ ಜಾತ್ರಾ ಸಂಭ್ರಮದಲ್ಲಿ ಭಾಗಿ
NAMMUR EXPRESS NEWS
ಜನವರಿ 12 ಮತ್ತು 13 ರಂದು ಕೋಣಂದೂರು ಬನಶಂಕರಿ ದೇಗುಲದಲ್ಲಿ ಜಾತ್ರಾ ಸಂಭ್ರಮ ಅದ್ದೂರಿಯಾಗಿ ನಡೆಯಿತು. ಜ.12ಕ್ಕೆ ಸತ್ಯನಾರಾಯಣ ಪೂಜೆ, ಸಂಜೆ ವಾಯ್ಸ್ ಆಫ್ ಮಲೆನಾಡು’ ಮತ್ತು ಕರಾವಳಿ ಸಂಗೀತ ಸ್ಪರ್ಧೆ, ಸಿಡಿಮದ್ದು ಪ್ರದರ್ಶನ ಕೂಡ ಸಂಭ್ರಮದಿಂದ ತೆರೆಕಂಡಿತು. ಸಂಜೆಯ ವೇಳೆ ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ, ಸಿಡಿಮದ್ದು ಪ್ರದರ್ಶನ ನೆಡೆಯಿತು. ಗಾನಾಂಜಲಿ ಕೋಣಂದೂರು ತೀರ್ಥಹಳ್ಳಿ ಇವರ ಪ್ರಸ್ತುತಿಯಲ್ಲಿ ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ -2025 ಆಡಿಷನ್ ಸೀಸನ್ -1ಕಾರ್ಯಕ್ರಮ ಕೂಡ ನಡೆಯಿತು ಈ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಭಾಗವಹಿಸಿದ್ದರು. ಸಂಜೆ 7-00 ಕ್ಕೆ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ನೋಡಲು ಸಾವಿರಾರು ಭಕ್ತರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಜನವರಿ 13ರಲ್ಲಿ ರಥೋತ್ಸವ ಕೂಡ ಸಂಭ್ರಮದಿಂದ ನಡೆಯಿತು. ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಕೋಣಂದೂರು ಶಾಲೆಯ ಮಕ್ಕಳಿಂದ ”ಚಿಣ್ಣರ ಸಂತೆ” ಕೂಡ ಜನರ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ರಾಜಶೇಖರ್ ವ್ಯವಸ್ಥಾಪಕರು ಬನಶಂಕರಿ ದೇವಾಲಯ ಕೋಣಂದೂರು, ಸತ್ಯನಾರಾಯಣ ಜೋಯ್ಸ್, ಶಶಿಧರ್ ಜೋಯ್ಸ್ ದೇವಸ್ಥಾನದ ಕಾರ್ಯದರ್ಶಿ, ಕಿರಣ್ ಭಟ್ ಅರ್ಚಕರು, ರಾಮಚಂದ್ರ ಜೋಯ್ಸ್ ದೇವಸ್ಥಾನದ ಅಧ್ಯಕ್ಷರು, ಗಿರೀಶ್ ಕಾರ್ಯಕ್ರಮದ ಉಸ್ತುವಾರಿಗಳು, ಗಿರೀಶ್ ದೇವಸ್ಥಾನ ಭಕ್ತರು ಪೋಷಕ ಸಮಿತಿ ಅಧ್ಯಕ್ಷರು, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಕೋಣಂದೂರು ಇವರು ಈ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಹಕಾರಿಯಾದರು.