ಕಾಫಿನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ..!
– ಭಾರತ ದೇಶದ ವಿರುದ್ಧವೇ ಹೋರಾಟ ಮಾಡುವೆವು ಎಂದು ಹೇಳಿದ್ದ ರಾ ಗಾ
– ರಾಹುಲ್ ಗಾಂಧಿ ಹೇಳಿಕೆ ವಿರೋಧಿಸಿ ಯುವ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ
NAMMUR EXPRESS NEWS
ಚಿಕ್ಕಮಗಳೂರು: ಲೋಕ ಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೇಸ್ ಪಕ್ಷದ ನಾಯಕರಾದ ಸಂಸದ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಇಂದು ನಗರದ ಹನುಮಂತಪ್ಪ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ,ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ರಾಹುಲ್ ಗಾಂಧಿ ಕೂಡಲೇ ದೇಶದ ಕ್ಷಮೆ ಕೇಳಬೇಕು, ಪದೇ ಪದೇ ದೇಶ ವಿರೋಧಿ ಹೇಳಿಕೆ ನೀಡುತ್ತಿರುವ ಸಂಸದನ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಷ್ಟಕ್ಕೂ ರಾಹುಲ್ ಗಾಂಧಿ ಸೃಷ್ಠಿಸಿದ ವಿವಾದವೇನು..!!?
ಕಾಂಗ್ರೇಸ್ ಪಕ್ಷದ ನೂತನ ಕಟ್ಟಡದ ಉದ್ಘಾಟನೆ ನಂತರ ಮಾತನಾಡುತ್ತಿದ್ದ ನಾಯಕ ರಾಹುಲ್ ಗಾಂಧಿ ಬಿಜೆಪಿ ಮತ್ತು ಆರ್ಎಸ್ಎಸ್ ನ್ನು ಟೀಕಿಸುವ ಭರದಲ್ಲಿ “ಇಂದು ನಾವು ನ್ಯೋಯ ಸಮ್ಮತವಾದ ಹೋರಾಟದಲ್ಲಿದ್ದೇವೆ ಎಂದುಕೊಳ್ಳಬೇಡಿ, ದೇಶದ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಗಳನ್ನೂ ಬಿಜೆಪಿ,ಆರ್ಎಸ್ಎಸ್ ಕಬಳಿಸಿದೆ ಹಾಗಾಗಿ ನಮ್ಮ ಹೋರಾಟ ಬಿಜೆಪಿ,ಆರ್ಎಸ್ಎಸ್ ಮತ್ತು ಭಾರತದ ವಿರುದ್ಧವೂ ಆಗಿದೆ” ಎಂದು ಹೇಳುವುದರ ಮೂಲಕ ವಿವಾದ ಸೃಷ್ಠಿಸಿದ್ದಾರೆ. ರಾಹುಲ್ ಗಾಂಧಿಯ ಈ ಹೇಳಿಕೆ ವಿರುದ್ಧ ಎಲ್ಲೆಡೆ ವಿರೋಧ,ಆಕ್ರೋಶ ವ್ಯಕ್ತವಾಗಿದೆ.