ಮಳೆ ಎಚ್ಚರಿಕೆ: ಹೆಚ್ಚಾಗುತ್ತೆ ಥಂಡಿ..!
– ಭಾನುವಾರ ರಾಜಧಾನಿಯಲ್ಲಿ ಮಳೆ: ನಾಳೆಯೂ ಮಳೆ
– ರಾಜ್ಯದ 11 ಜಿಲ್ಲೆಗಳಿಗೆ ಮಳೆ ಅಲರ್ಟ್
NAMMUR EXPRESS NEWS
ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ಹವಾಮಾನದಲ್ಲಿ ವಿಪರೀತವಾಗಿ ಬದಲಾವಣೆ ಆಗಿದೆ. ಶನಿವಾರ ತಾಪಮಾನದಲ್ಲಿ ಭಾರೀ ಇಳಿಕೆ ಆಗಿದ್ದು, ತೀವ್ರ ಮಂಜು, ಚಳಿ ವಾತಾವರಣ ಕಂಡು ಬಂದಿದೆ. ಇದೇ ವಾತವರಣ ಮುಂದುವರಿಯುವ ಮುನ್ಸೂಚನೆ ಇದ್ದು, ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಥಂಡಿ ಆವರಿಸಿಕೊಳ್ಳುತ್ತಿದೆ. ಭಾರಿ ಚಳಿ ಕೂಡ ಇದೆ. ಈ ಮಧ್ಯೆ ರಾಜ್ಯದ 11 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ‘ಮಳೆ ಎಚ್ಚರಿಕೆ’ ನೀಡಿದೆ. ಬೆಂಗಳೂರಿನಲ್ಲಿ ಭಾನುವಾರ ಬೆಳ್ಳಂಬೆಳ್ಳಗ್ಗೆ ತುಂತುರು ಮಳೆ ಆಗಿದೆ. ಈ ಮಳೆ ಸೋಮವಾರವು ಮುಂದುವರಿಯಲಿದೆ. ಒಳನಾಡು ಜಿಲ್ಲೆಗಳಲ್ಲಿ ಇನ್ನೂ ಹಲವು ದಿವಸಗಳ ಕಾಲ ಥಂಡಿ ಆವರಿಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನಾ ವರದಿಯಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯದ ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಕೆಲವು ಪ್ರದೇಶಗಳಲ್ಲಿ ಜೋರು ಮಳೆಯ ಲಕ್ಷಣ ಇದೆ ಎಂದು ಐಎಂಡಿ ತಿಳಿಸಿದೆ. ಕರ್ನಾಟಕದಲ್ಲಿ ಆಗಾಗ ಮಳೆ ಸುರಿಯುತ್ತಿದೆ. ಮತ್ತೊಂದೆಡೆ ತಾಪಮಾನದಲ್ಲಿ ಆಗಾಗ ಏರುಗತಿ ಕಂಡು ಬರುತ್ತಿದ್ದು, ವಿವಿಧೆಡೆ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಮತ್ತೆ ನಾಲ್ಕು ದಿನ ಚಳಿ ಆವರಿಸುತ್ತಿದೆ. ಒಂದು ದಿನ ಅಲ್ಲಲ್ಲಿ ಮಳೆಯೂ ಸುರಿಯುತ್ತಿದೆ. ಇಂತಹ ವಾತಾವರಣವೇ ಇನ್ನೂ ಹಲವು ದಿವಸಗಳ ಕಾಲ ಮುಂದುವರಿಯುವ ನಿರೀಕ್ಷೆ ಇದೆ. ತಾಪಮಾನ ಇಲಾಖೆ ಆಗಿದೆ. ಕನಿಷ್ಠ ತಾಪಮಾನದಲ್ಲಿ ಬದಲಾವಣೆ ಆಗಿದ್ದು, ಬೀದರ್ ಮತ್ತು ಚಾಮರಾಜನಗರದಲ್ಲಿ 13 ಡಿಗ್ರಿ ಸೆಲ್ಸಿಯಸ್ಗೆ ಉಷ್ಣಾಂಶ ಕುಸಿಯುವ ಮೂಲಕ ಭಾರೀ ಚಳಿ ಸೃಷ್ಟಿಸಿದೆ. ಉಳಿದಂತೆ ವಿಜಯಪುರ, ಧಾರವಾಡ ಮತ್ತು ಹಾಸನದಲ್ಲಿ ತಲಾ 14 ಡಿಗ್ರಿ ಸೆಲ್ಸಿಯಸ್, ಬಾಗಲಕೋಟೆ, ಬೆಂಗಳೂರು ಎಚ್ಎಎಲ್ ಏರ್ಪೋರ್ಟ್, ಗದಗ ಜಿಲ್ಲೆಗಳಲ್ಲಿ 15 ಡಿ.ಸೆ, ಮಂಡ್ಯ, ಮಡಿಕೇರಿ, ದಾವಣಗೆರೆ ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಯಲ್ಲಿ 16 ಡಿಗ್ರಿ ಸೆಲ್ಸಿಯಸ್ ಇಳಿಕೆ ಆಗಿದೆ.
ಬೆಂಗಳೂರಲ್ಲಿ ಸೋಮವಾರ ಮಳೆ ಎಚ್ಚರಿಕೆ
ಬೆಂಗಳೂರು ನಗರದಲ್ಲಿ ಇಂದು ಭಾನುವಾರ ಬೆಳಗ್ಗೆ ಅಲ್ಲಲ್ಲಿ ಮಬ್ಬು ಕವಿದಿದ್ದು, ಚಳಿಯು ಇದೆ. ಈ ನಡುವೆ ವಿವಿಧ ಭಾಗಗಳಲ್ಲಿ ತುಂತುರು ಮಳೆ ಆಗಿದೆ. ನಾಳೆ ಸೋಮವಾರ ಜನವರಿ 20ರಂದು ನಗರದ ಅನೇಕ ಕಡೆಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ ಇದೆ. ನಗರದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತವಾರಿ ಕೇಂದ್ರ ಮಾಹಿತಿ ನೀಡಿದೆ.