ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಪರಶಿವನ ಕೃಪಾಕಟಾಕ್ಷದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?
NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?
** ಮೇಷ ರಾಶಿ :
ಇಂದು ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬಹುದು. ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇಂದು ನಿಮ್ಮ ಹೊಸ ಆಲೋಚನೆಗಳಿಂದ ನಿಮಗೆ ಯಶಸ್ಸು ಸಿಗಬಹುದು. ಉದ್ಯಮಿಗಳಿಗೆ ಪಾಲುದಾರಿಕೆಯಲ್ಲಿ ಲಾಭವಿದೆ. ನಿಮ್ಮ ಸಂಗಾತಿಯೊಂದಿಗೆ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಲು ಪ್ರಯತ್ನಿಸಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಇಂದು ನಿಮಗೆ ಹಣಕಾಸಿನ ಸಮಸ್ಯೆಗಳಿರುವುದಿಲ್ಲ.
** ವೃಷಭ ರಾಶಿ :
ಕುಟುಂಬದಲ್ಲಿ ಒತ್ತಡ, ಆರೋಗ್ಯದಲ್ಲಿ ಸಮಸ್ಯೆ ಕಂಡು ಬರಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಆದರೆ ಮನಸ್ಸಿನಲ್ಲಿಂದು ಭವಿಷ್ಯದ ಬಗ್ಗೆ ಚಿಂತೆ ಕಾಡಲಿದೆ. ಬಡವರಿಗೆ ಮತ್ತು ಹಸಿದ ಪ್ರಾಣಿಗಳಿಗೆ ಊಟ ಹಾಕಿ. ಶಿವ ಮಂತ್ರವನ್ನು ಪಠಿಸಿ. ದಾಂಪತ್ಯದಲ್ಲಿನ ಸಮಸ್ಯೆಗಳು ಬಗೆ ಹರಿಯುತ್ತವೆ.
** ಮಿಥುನ ರಾಶಿ :
ಇಂದು ಮಿಥುನ ರಾಶಿಯವರಿಗೆ ತುಂಬಾ ಶುಭ ದಿನ. ಉದ್ಯೋಗದಲ್ಲಿರುವವರು ಅಧಿಕಾರಿಗಳ ಬೆಂಬಲ ಪಡೆಯಬಹುದು. ಇಂದು, ಸಣ್ಣ ಪುಟ್ಟ ಅಡೆತಡೆಗಳ ಹೊರತಾಗಿಯೂ, ನಿಮ್ಮ ಕೆಲಸಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಸರಳ ಸ್ವಭಾವದಿಂದಾಗಿ, ನಿಮ್ಮ ಗೌರವವು ಮತ್ತಷ್ಟು ಹೆಚ್ಚಾಗಬಹುದು. ಇಂದು ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ.
** ಕರ್ಕಾಟಕ ರಾಶಿ :
ಇಂದು ನಿಮಗೆ ಪ್ರಗತಿಯ ದಿನವಾಗಲಿದೆ. ಉದ್ಯೋಗಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಹಣ ಹೂಡಿಕೆಯ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಇಂದು ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಬೇಕು. ಇಂದು ನಿಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆ ಎದುರಾಗಬಹುದು. ಮಾತಿನ ಮೂಲಕ ಸಂಬಂಧಗಳಲ್ಲಿನ ತಪ್ಪು ತಿಳುವಳಿಕೆಯನ್ನು ನಿವಾರಿಸಲು ಪ್ರಯತ್ನಿಸಿ.
** ಸಿಂಹ ರಾಶಿ :
ಇಂದು ಸಿಂಹ ರಾಶಿಯವರಿಗೆ ಅನೇಕ ಆದಾಯದ ಮೂಲಗಳಿಂದ ಧನ ಲಾಭವಿದೆ. ವ್ಯಾಪಾರದ ಯಶಸ್ಸು ನಿಮ್ಮ ಪರವಾಗಿರಲಿದೆ. ಆದರೆ ಇಂದು ಯಾರಿಗೂ ದೊಡ್ಡ ಮೊತ್ತದ ಸಾಲ ನೀಡದಿರುವುದು ಒಳಿತು. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಇಂದು, ಹೂಡಿಕೆ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಅವಿವಾಹಿತರು ಇಂದು ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು.
** ಕನ್ಯಾ ರಾಶಿ :
ಈ ದಿನ ನಿಮಗೆ ಅದೃಷ್ಟ ಕೈ ಕೊಡಬಹುದು. ನಿಮ್ಮ ವೃತ್ತಿಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳಿಗೆ ಸಿದ್ಧರಾಗಿರಿ. ಇಂದು ಯಾವುದೇ ವಿವಾದಗಳು ಉದ್ಭವಿಸಿದರೆ, ತಾಳ್ಮೆ ಮತ್ತು ಸಂಯಮದಿಂದ ಸಮಸ್ಯೆಗಳನ್ನು ನಿಭಾಯಿಸಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಅತಿಯಾದ ಖರ್ಚಿನಿಂದ ಅಪಾಯವಿದೆ ಅಪಾಯವನ್ನು ಎದುರಿಸುವಿರಿ. ಇಂದು ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಕಡಿಮೆಯಾಗಬಹುದು.
** ತುಲಾ ರಾಶಿ :
ಇಂದು ನಿಮ್ಮಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಪ್ರೇಮ ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ಹೂಡಿಕೆ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಇಂದು ನಿಮ್ಮ ಖರ್ಚಿನ ಮೇಲೆ ನಿಗಾ ಇರಿಸಿ. ಅನುಪಯುಕ್ತ ವಸ್ತುಗಳಿಗೆ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಇಂದು, ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ.
** ವೃಶ್ಚಿಕ ರಾಶಿ :
ಇಂದು ನಿಮಗೆ ಅದೃಷ್ಟ ಹೆಚ್ಚಾಗುವ ದಿನ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಬಹುದು. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ, ಆದರೆ ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಪರಿಸ್ಥಿತಿಗೆ ತಕ್ಕಂತೆ ಮಾತ್ರ ಖರ್ಚು ಮಾಡಿ. ಕಷ್ಟದ ಸಮಯವನ್ನು ಎದುರಿಸುವುದಕ್ಕಾಗಿ ಹಣವನ್ನು ಉಳಿಸಲು ಮರೆಯದಿರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಇಂದು, ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ. ನಿಮ್ಮ ಸಂಗಾತಿಯೊಂದಿಗೆ ಜಗಳವಾಡುವುದನ್ನು ತಪ್ಪಿಸಿ.
** ಧನಸ್ಸು ರಾಶಿ :
ಈ ದಿನವು ನಿಮಗೆ ಸಾಮಾನ್ಯವಾಗಿರುತ್ತದೆ. ಇಂದು ಹಣಕಾಸಿನ ವ್ಯವಹಾರದಲ್ಲಿ ಅತ್ಯಂತ ಎಚ್ಚರಿಕೆ ಅಗತ್ಯ. ಉದ್ಯೋಗವನ್ನು ಹುಡುಕುತ್ತಿರುವ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಜೀವನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವಿರಿ. ಕೆಲಸದ ಸ್ಥಳದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯಬಹುದು. ಉದ್ಯೋಗದ ರಾಜಕೀಯದಿಂದ ದೂರವಿರಿ. ನಿಮ್ಮ ಜೀವನದ ಗುರಿಗಳನ್ನು ಸಾಧಿಸಲು ಹೊಸ ಪ್ರಯತ್ನಗಳನ್ನು ಮಾಡಿ. ಇಂದು, ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ.
** ಮಕರ ರಾಶಿ :
ಇಂದು ಮಕರ ರಾಶಿಯವರ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಕೆಲವು ಏರಿಳಿತಗಳಿರಬಹುದು. ದಂಪತಿಗಳ ನಡುವೆ ಇರುವ ಕೆಲವು ಸಮಸ್ಯೆಗಳು ಇಂದು ಪರಿಹಾರವಾಗಬಹುದು. ವೃತ್ತಿಪರ ಜೀವನದಲ್ಲಿ ಕೆಲವು ಏರಿಳಿತಗಳು ಕಂಡುಬರಬಹುದು. ನಿಮಗೆ ಇಂದು ಹಣಕಾಸಿನ ಲಾಭವಿದೆ. ಆದರೆ ನೀವು ನಿಮ್ಮ ಹಣವನ್ನು ವ್ಯರ್ಥವಾಗಿ ಖರ್ಚು ಮಾಡುವುದನ್ನು ತಪ್ಪಿಸಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ಸಿಗಬಹುದು.
** ಕುಂಭ ರಾಶಿ :
ಇಂದು ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ಧನ ಲಾಭವಿದೆ, ಆದರೆ ವಾಹನಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಕೆಲಸದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಲಭ್ಯವಿದೆ. ಇಂದು, ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಎದುರಾಗಬಹುದು. ಅನಗತ್ಯ ವಾದಗಳನ್ನು ತಪ್ಪಿಸಿ.
** ಮೀನ ರಾಶಿ :
ಇಂದು ನಿಮಗೆ ಬಹಳ ಶುಭ ದಿನವಾಗಲಿದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ನಿಮ್ಮ ಕೆಲಸದಲ್ಲಿನ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಇಂದು ನಿಮ್ಮ ಮನಸ್ಸು ಕೆಲವು ಅನಗತ್ಯ ಭಯದಿಂದ ತೊಂದರೆಗೊಳಗಾಗಬಹುದು. ಸಕಾರಾತ್ಮಕ ಮನಸ್ಥಿತಿಯೊಂದಿಗೆ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಶ್ರಮಿಸಿ. ಇಂದು ನೀವು ಶ್ರಮಪಟ್ಟರೆ ಖಂಡಿತವಾಗಿಯೂ ಬಯಸಿದ ಯಶಸ್ಸನ್ನು ಪಡೆಯುತ್ತೀರಿ.