ನ್ಯಾಷನಲ್ ಗೋಲ್ಡ್ ಕಪ್ ಸೀಸನ್ 2: ಹೊನಲು ಬೆಳಕಿನ ಕ್ರಿಕೆಟ್ ರಂಗು!
– ನ್ಯಾಷನಲ್ ಗೋಲ್ಡ್ ಮಾಲಿಕ ಯೂಸಫ್ ಹೈದರ್ ಬ್ಯಾಟಿಂಗಿನಲ್ಲಿ ಮಿಂಚಿಂಗ್!
– ಬೌಲಿಂಗ್, ಫೀಲ್ಡಿಂಗಿನಲ್ಲಿ ಮೊಯಿದ್ದೀನ್ ಕಬೀರ್ ಉತ್ತಮ ಪ್ರದರ್ಶನ
NAMMUR EXPRESS NEWS
ತೀರ್ಥಹಳ್ಳಿ: ನ್ಯಾಷನಲ್ ಗೋಲ್ಡ್ ಕಪ್ ಸೀಸನ್ 2 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವು ಜೂನಿಯರ್ ಕಾಲೇಜ್ ಗ್ರೌಂಡ್ ತೀರ್ಥಹಳ್ಳಿಯಲ್ಲಿ ಜನವರಿ 19ರಂದು ರಾತ್ರಿ ಅದ್ದೂರಿಯಾಗಿ ನಡೆಯಿತು. ಈ ಟೂರ್ನಮೆಂಟ್ ನಲ್ಲಿ ನಾಲ್ಕು ತಂಡಗಳು ತಮ್ಮ ಅದ್ಭುತ ಪ್ರದರ್ಶನವನ್ನು ತೋರಿಸಿದ್ದು, ಮೊದಲ ಬಹುಮಾನವನ್ನು ನ್ಯಾಷನಲ್ ಸೂಪರ್ ಸ್ಟಾರ್, ಎರಡನೇ ಬಹುಮಾನವನ್ನು ನ್ಯಾಷನಲ್ ಫೈಟರ್ಸ್, ಮೂರನೇ ಬಹುಮಾನವನ್ನು ನ್ಯಾಷನಲ್ ಹಂಟರ್ಸ್ ತಂಡವು ಪಡೆದುಕೊಂಡಿವೆ. ಈ ಟೂರ್ನಮೆಂಟ್ ನಲ್ಲಿ ನ್ಯಾಷನಲ್ ಗೋಲ್ಡ್ ಮಾಲೀಕರಾದ ಯೂಸಫ್ ಹೈದರ್ ಬ್ಯಾಟಿಂಗಿನಲ್ಲಿ ಮಿಂಚಿದ್ದಾರೆ ಹಾಗೂ ಬೌಲಿಂಗ್ ಮತ್ತು ಫೀಲ್ಡಿಂಗಿನಲ್ಲಿ ಮೊಯಿದ್ದೀನ್ ಕಬೀರವರು ಉತ್ತಮ ಪ್ರದರ್ಶನ ತೋರಿದ್ದಾರೆ. ಈ ಪಂದ್ಯಾವಳಿಯಲ್ಲಿ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಮತ್ತು ಸರಣಿ ಶ್ರೇಷ್ಠ ಆಟಗಾರರಾಗಿ ಅಮಿತ್ ಹರಳಿಮಠ ತಮ್ಮ ಕೈಚಳಕವನ್ನು ತೋರಿದ್ದಾರೆ.
ಬೆಸ್ಟ್ ಬಾಲರ್ ಆಗಿ ಪ್ರಜ್ವಲ್, ಬೆಸ್ಟ್ ಫೀಲ್ಡರ್ ಮೊಯಿದ್ದೀನ್ ಕಬೀರ್ ಹಾಗೂ ಎನರ್ಜಿಟಿಕ್ ಪ್ಲೇಯರ್ ಸ್ವಾಲಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.