ಶ್ರೀ ನಾಗೇಂದ್ರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ!
– ಜ. 23 ಮತ್ತು ಜ. 26 ರಂದು ನಾಗೇಂದ್ರ ಸ್ವಾಮಿಗೆ ವಿಶೇಷ ಪೂಜೆ
– ಸಾಮೂಹಿಕ ಸರ್ಪ ಸಂಸ್ಕಾರ ಹರಕೆ, ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ – ಪೂಜೆ ಮಾಡಿಸುವವರು ಮುಂಚಿತವಾಗಿ ಹೆಸರು ನೊಂದಾಯಿಸಬೇಕು
NAMMUR EXPRESS NEWS
ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನ, ನಾಗರಹಳ್ಳಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸರ್ಪದೋಷ ನಿವೃತ್ತಿಗೆ ಸರ್ಪ ಸಂಸ್ಕಾರ, ಹರಕೆ ನಾಗಶಿಲಾ ಪ್ರತಿಷ್ಠೆ ಆಶ್ಲೇಷ ಬಲಿ, ನಾಗದರ್ಶನ, ಶ್ರೀ ಸ್ವಾಮಿಗೆ ವಿಶೇಷ ಪೂಜೆಯನ್ನ ಹಮ್ಮಿಕೊಳ್ಳಲಾಗಿದೆ. ಭಕ್ತ ಮಹಾಶಯರು ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ದಿನಾಂಕ: 23-01-2025 ರಂದು ಸರ್ಪ ಸಂಸ್ಕಾರ ಕ್ರಿಯಾರಂಭ, ದಿನಾಂಕ : 26-01 -2025 ರಂದು ಪ್ರತಿಷ್ಠಾಹೋಮ ಪೂರ್ವಕ ಹರಕೆ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ, ಬ್ರಹ್ಮಚಾರಿ ಬ್ರಾಹ್ಮಣ ಆರಾಧನೆ, ಶ್ರೀ ಸ್ವಾಮಿಗೆ ವಿಶೇಷ ಪೂಜಾಸಹಿತ ಮಹಾ ಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ, ನಾಗದರ್ಶನ ಏರ್ಪಡಿಸಲಾಗಿದೆ. ಅಧ್ಯಕ್ಷರು ಮತ್ತು ಸದಸ್ಯರು, ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನ, ನಾಗರಹಳ್ಳಿ ಸರ್ಪ ಸಂಸ್ಕಾರ ಹಾಗೂ ಸ್ವಾಮಿಯ ವಿಶೇಷ ಪೂಜೆಗೆ ಸರ್ವರಿಗೂ ಕೂಡ ಸ್ವಾಗತವನ್ನು ಕೋರಿದ್ದಾರೆ.
ವಿಶೇಷ ಸೂಚನೆ :-
ಸಾಮೂಹಿಕ ಸರ್ಪ ಸಂಸ್ಕಾರ ಹರಕೆ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ ಮಾಡಿಸುವವರು ಮುಂಚಿತವಾಗಿ ಕಿರಣ್ ಭಟ್ 8762289079 ಈ ನಂಬರಿಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು.
ಸಂಪರ್ಕ ವಿಳಾಸ:-
ಬಿ. ಲಕ್ಷ್ಮೀನಾರಾಯಣಭಟ್, ಅರ್ಚಕರು, ನಾಗೇಂದ್ರಸ್ವಾಮಿ ದೇವಸ್ಥಾನ, ನಾಗರಹಳ್ಳಿ-ಕಡಸೂರು ಅಂಚೆ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ – 577 436
ಮೊ : 9481210962, 9481770962
ಕಿರಣ್ ಎಲ್ ಭಟ್ ಮೊ : 8762289079